ಪೋಸ್ಟ್‌ಗಳು

ಫೆಬ್ರವರಿ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರಾಯಚೂರು ಘಟನೆ: ಮೀಸಲು ಕ್ಷೇತ್ರದಿಂದ ಗೆದ್ದವರ ಮೌನ.

ಇಮೇಜ್
-ಜಗದೇವ ಎಸ್ ಕುಂಬಾರ. ಚಿತ್ತಾಪುರ: 73ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಡಾ. ಬಿಆರ್. ಅಂಬೇಡ್ಕರ್ ಅವರಿಗೆ ರಾಯಚೂರು ನ್ಯಾಯಾದೀಶರು ಅವಮಾನ ಮಾಡಿರುವ ಘಟನೆ ಖಂಡಿಸಿ ರಾಜ್ಯಾದ್ಯಂತಹ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಮೀಸಲು ಮತಕ್ಷೇತ್ರದಿಂದ ಗೆದ್ದು ಅಧಿಕಾರಕ್ಕೆ ಬಂದಿರುವ ಸಂಸದರು ಮತ್ತು ಶಾಸಕರು ಮೌನಕ್ಕೆ ಜಾರಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗುರಿಯಾಗಿದೆ.     ಕಲಬುರ್ಗಿ ಸಂಸದ ಡಾ.ಉಮೇಶ ಜಾಧವ್ ಶಾಸಕರಾದ ಪ್ರಿಯಾಂಕ್ ಖರ್ಗೆ, ಬಸವರಾಜ ಮತ್ತಿಮೂಡ, ಅವಿನಾಶ ಜಾಧವ್ ಅವರು ಮೀಸಲು ಮತಕ್ಷೇತ್ರಗಳಿಂದ ಗೆದ್ದು ಅಧಿಕಾರದಲ್ಲಿದ್ದಾರೆ. ಅಂಬೇಡ್ಕರ್ ರಚಿಸಿದ ಸಂವಿಧಾನದ ಹಕ್ಕಿನಿಂದ ಗೆದ್ದವರು, ಡಾ. ಬಿಆರ್. ಅಂಬೇಡ್ಕರ್  ಅವರಿಗೆ ಮಾಡಿರುವ ಅಪಮಾನದ ಘಟನೆ ಖಂಡಿಸದೆ, ಮೌನಕ್ಕೆ ಶರಣಾಗಿರುವುದು ಎಷ್ಟರ ಮಟ್ಟಿಗೆ ಸರಿ.? ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.      ಸಂಸದರು, ಶಾಸಕರ ಸಾಮಾಜಿಕ ಜಾಲತಾಣ ಹಾಗೂ ಪತ್ರಿಕಾ ಹೇಳಿಕೆಗಳನ್ನು ಗಮನಿಸಿದರೆ ಡಾ.ಅಂಬೇಡ್ಕರ್ ಅವರಿಗೆ ಆಗಿರುವ ಅವಮಾನದ ಘಟನೆ ಎಲ್ಲಿಯೂ ಸಹ ಖಂಡಿಸಿಲ್ಲ.  ಸಂಸದರು ಹಾಗೂ ಶಾಸಕರ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.     ಬಿಜೆಪಿ ಎಸ್ಸಿ ಮೋರ್ಚಾ ಸಹ ಡಾ.ಅಂಬೇಡ್ಕರ್ ಅವರ ಅವಮಾನದ ಘಟನೆ ಖಂಡಿಸದೇ, ಸಾರ್ವಜನಿಕರು ಹಾಗೂ ಸಂಘಟನೆಗಳು ಏರ್ಪಡಿಸಿದ ಪ್ರತಿಭಟನೆಗಳಲ್ಲಿ ಕಾಟಚಾರಕ್ಕೆ ಭಾಗಿಯಾಗುವ ಮೂಲಕ ಅಟಕ್...