ಪೋಸ್ಟ್‌ಗಳು

ಅಕ್ಟೋಬರ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಂಕನೂರ, ಕೆಸರು ಗದ್ದೆಯಾದ ರಸ್ತೆ: ಜನ ಸಂಚಾರ ಅಸ್ತವ್ಯಸ್ತ.

ಇಮೇಜ್
ಸಂಕನೂರ ಗ್ರಾಮದ ಸರ್ಕಾರಿ ಶಾಲೆಯ ಮುಂದೆ ಕೆಸರು ಗದ್ದೆಯಾದ ರಸ್ತೆಯ ಚಿತ್ರಣ. ಚಿತ್ತಾಪುರ: ಅಳ್ಳೂಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕನೂರ ಗ್ರಾಮದ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರದ ಮುಂದಿನ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಟ್ಟು, ಜನಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಗ್ರಾಮದ ಮುಖ್ಯರಸ್ತೆಯಾಗಿದ್ದು. ಈ ರಸ್ತೆಯಲ್ಲಿ ಸಾಕಷ್ಟು ಜನರು ಶಾಲಾ ವಿದ್ಯಾರ್ಥಿಗಳು, ನಡೆದಾಡುತ್ತಾರೆ ಸಾಕಷ್ಟು ಬಾರಿ ಗ್ರಾಮ ಪಂಚಾಯಿತಿಗೆ ಹಾಗೂ ಸಂಬಂಧಪಟ್ಟ ಇಲಾಖೆಗೆ ಈ ರಸ್ತೆ ದುರಸ್ತೇಗೆ ಮನವಿ ಮಾಡಿದ್ರು ಪ್ರಯೋಜನವಾಗುತ್ತಿಲ್ಲ . ಈಗಾಗಲೇ ಈ ರಸ್ತೆಯಿಂದಾಗಿ ಬೈಕ್ ಸವಾರರಿಗೆ ಸಾಕಷ್ಟು ಸಣ್ಣ-ಪುಟ್ಟ ಅನಾಹುತಗಳು ಆಗಿದ್ದು. ಶಾಲಾ ವಿದ್ಯಾರ್ಥಿಗಳು ಬಿದ್ದು ಸಮವಸ್ತ್ರ ಗಲೀಜು ಮಾಡಿಕೊಂಡ ಸಂದರ್ಭಗಳು ಇವೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ರಸ್ತೆ ಕಾಮಗಾರಿಯನ್ನು ಕೈಯೆತ್ತಿಕೊಂಡು ಕೆಸರುಗದ್ದೆಯಾದ ರಸ್ತೆಯನ್ನು ಒಳ್ಳೆಯ ರಸ್ತೆಯನ್ನಾಗಿ ಮಾಡಿಕೊಡಬೇಕಾಗಿ ಗ್ರಾಮಸ್ಥರಾದ ಸಾಹೇಬ್ ಗೌಡ, ಮಂಜುನಾಥ್, ಮಹಾದೇವ್, ನಾಗಪ್ಪ, ಅಂಬರೀಶ್, ಒತ್ತಾಯಿಸಿದ್ದಾರೆ.

ಬೀದಿ ನಾಯಿಗಳ ಹಾವಳಿ

ಇಮೇಜ್
ಪಟ್ಟಣದ ಮಾರ್ಕೆಟ್ ನಲ್ಲಿ ಬೀದಿ ನಾಯಿಗಳ ಓಡಾಟ, ಜಗಳ, ಜನರಲ್ಲಿ ಭಯದ ವಾತಾವರಣ ನಿರ್ಮಾಣ. ಚಿತ್ತಾಪುರ: ಮಾರ್ಕೆಟ್ ನಲ್ಲಿ  ಬೀದಿ ನಾಯಿಗಳದ್ದೇ ಕಾರುಬಾರು. ಪಟ್ಟಣದ ಬಹುತೇಕ ರಸ್ತೆಗಳನ್ನು ಆಕ್ರಮಿಸಿಕೊಂಡಿರುವ ಬೀದಿ ನಾಯಿಗಳಿಗೆ ರಸ್ತೆಗಳೇ ಆಶ್ರಯ ತಾಣಗಳಾಗಿವೆ. ಇದರಿಂದ ನಗರದಲ್ಲಿ ಸಂಚರಿಸುವ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ರಸ್ತೆ ಮಧ್ಯೆದಲ್ಲಿಯೇ ದಿನನಿತ್ಯ ಅಡ್ಡಾಡುವ ನಾಯಿಗಳ ಹಾವಳಿಯಿಂದ ವಾಹನ ಸವಾರರು ನೆಮ್ಮದಿಯಿಂದ ವಾಹನ ಚಾಲನೆ ಮಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಪುರಸಭೆ ಮಾತ್ರ ಈ ವಿಷಯದಲ್ಲಿ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಈಗಲಾದರೂ ಪುರಸಭೆ ಎಚ್ಚೆತ್ತುಕೊಂಡು ಪಟ್ಟಣದಲ್ಲಿನ ನಾಯಿಗಳ ಹಾವಳಿ ತಡೆಗಟ್ಟುವಂತೆ ಕ್ರಮವಹಿಸುತ್ತಾರೆ ಎಂಬುದು ಕಾದು ನೋಡಬೇಕಾಗಿದೆ. ಮಾರ್ಕೆಟ್ ರಸ್ತೆಯಲ್ಲಿ ನಾಯಿಗಳ ಹಾವಳಿ ಮಿತಿ ಮೀರಿದೆ. ಬೆಳಗಿನ ಸಮಯದಲ್ಲಿ ವಾಯುವಿಹಾರಕ್ಕಾಗಿ ಹೋಗುವರಿಗೂ ಹಾಗೂ ಮಕ್ಕಳು ಈ ರಸ್ತೆಯಲ್ಲಿ ಸಂಚರಿಸಲು ಭಯ ಪಡುವಂತಹ ವಾತಾವರಣ ನಿರ್ಮಾಣ ಆಗಿದೆ ಎನ್ನುತ್ತಾರೆ.              -ಮಂಜುನಾಥ್ ಸ್ವಾಮಿ ತಾಲೂಕಾಧ್ಯಕ್ಷ, ಕರವೇ ಕಾವಲು ಪಡೆ ಚಿತ್ತಾಪುರ. ================================== ಪಟ್ಟಣದಲ್ಲಿ ಅನೇಕ ಕಡೆಗಳಲ್ಲಿ ನಾಯಿಗಳ ಹಾವ...