ಶುಕ್ರವಾರ, ನವೆಂಬರ್ 1, 2024

ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ.

ಚಿತ್ತಾಪುರ: ಪಟ್ಟಣದ ಮಾತೋಶ್ರೀ ಮಹಾದೇವಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 69ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಭುವನೇಶ್ವರ ದೇವಿಯ ಭಾವಚಿತ್ರಕ್ಕೆ ಪೊಜೆ ನಂತರ ಪುಷ್ಪ ನಮನ ಸಲ್ಲಿಸಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಿದರು. ಈ ವೇಳೆಯಲ್ಲಿ ಶಾಲೆಯ ಮುಖ್ಯಗುರುಗಳಾದ ಜಗದೇವ ಕುಂಬಾರ, ಶಿಕ್ಷಕರಾದ ವಿಶ್ವನಾಥ ಮಡಿವಾಳ, ಶ್ರೀದೇವಿ, ಸೇವಕಿ ಜಯಶ್ರೀ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ಕನ್ನಡ ರಾಜ್ಯೋತ್ಸವಕ್ಕೆ ಅವಮಾನ.

ಚಿತ್ತಾಪೂರ: ಈ ಬಾರಿ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಬೇಕು ಎಂದು  ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು ಆದ್ರೇ ಚಿತ್ತಾಪುರ ಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸದೆ ಅವಮಾನ ಮಾಡಿದ್ದು ಕಂಡುಬಂದಿದೆ.

ಪಟ್ಟಣದ ನ್ಯಾಯಾಲಯ, ಕರ್ನಾಟಕ ಗ್ರಾಮೀಣ ಬ್ಯಾಂಕ,ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯ, ಬಿಜೆಪಿ ಮಂಡಲ ಕಾರ್ಯಾಲಯ, ಜೆಡಿಎಸ್ ಕಾರ್ಯಾಲಯ, ಭಾರತೀಯ ಸ್ಟೇಟ್ ಬ್ಯಾಂಕ, ಎಸ್ ಬಿಐ ಬ್ಯಾಂಕ,  ರೈಲುನಿಲ್ದಾಣ, ಸೇರಿದಂತೆ ಈ ಎಲ್ಲಾವುಗಳಲ್ಲಿ 69ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡದೆ ಕನ್ನಡಿಗರಿಗೆ ರಾಜ್ಯ ಸರ್ಕಾರಕ್ಕೆ ಅವಮಾನ ಮಾಡಿದಂತೆ ಆಗಿದೆ ಎನ್ನಲಾಗುತ್ತಿದೆ.


ಕೊಡಲೇ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾ ಆಡಳಿತ ಎಚ್ಚತ್ತುಕೊಂಡು ಕನ್ನಡ ರಾಜ್ಯೋತ್ಸವ ಆಚರಣೆ ಮಾಡದೆ ಅವಮಾನಿಸಿದ ಈ ಎಲ್ಲಾ ಕಾರ್ಯಾಲಯ, ಬ್ಯಾಂಕ, ರೈಲುನಿಲ್ದಾಣ, ನ್ಯಾಯಾಲಯ ವಿರುದ್ಧ ಕ್ರಮ ಕೈಗೊಂಡು ಕಾನೂನು ರೀತಿಯಲ್ಲಿ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಲಾಗಿದೆ.

ಪಟ್ಟಣದಲ್ಲಿ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಆಚರಣೆ ಮಾಡದೆ ಅವಮಾನ ಮಾಡುವುದು ಇದೇನು ಹೊಸದಲ್ಲ, ಪದೇ ಪದೇ ಕನ್ನಡ ಭಾಷೆಗೆ ಅವಮಾನ ಆಗುತ್ತಿದೆ. ಇದರ ಕುರಿತು ಸಾಕಷ್ಟು ಬಾರಿ ಮನವಿ ಹೋರಾಟ ಮಾಡಿದ್ರು ಪ್ರಯೋಜನವಾಗಿಲ್ಲ ಎನ್ನುತ್ತಾರೆ.

- ಚಂದರ ಚವ್ಹಾಣ್
ಕರವೇ, ಅಧ್ಯಕ್ಷರು ಚಿತ್ತಾಪುರ.


ತಾಲ್ಲೂಕು ಆಡಳಿತ ವತಿಯಿಂದ ನಡೆದ 69ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಹಳೆಯ ಭುವನೇಶ್ವರಿ ದೇವಿ ಬ್ಯಾನರ್ ಭಾವಚಿತ್ರ ಮೆರವಣಿಗೆಗೆ ಬಳಸಿದ್ದು ಕನ್ನಡ ಅಭಿಮಾನಿಗಳಲ್ಲಿ ಬೇಸರ ಮೂಡಿದೇ ಎಂದರು.

- ಲಕ್ಷ್ಮೀಕಾಂತ ತಾಂಡೂರಕರ್
ವಿಕಸೇ, ಅಧ್ಯಕ್ಷರು ಚಿತ್ತಾಪುರ.

ಕನ್ನಡ ಭಾಷೆಯನ್ನು ಗೌರವಿಸಬೇಕು: ಹಿರೇಮಠ.

ಚಿತ್ತಾಪುರ: ಕನ್ನಡ ನಾಡು ಉದಯವಾದ ದಿನವನ್ನು ಸಂಭ್ರಮಿಸುವ ಹಾಗೂ ಕನ್ನಡ ರಾಜ್ಯದ ಏಕೀಕರಣಕ್ಕಾಗಿ ಹೋರಾಡಿದ ಮಹಾತ್ಮರನ್ನು ಸ್ಮರಿಸಿ, ಗೌರವಿಸುವ ಹಾಗೂ ಕನ್ನಡಾಭಿಮಾನವನ್ನು ಮೆರೆಯುವ ಉದ್ದೇಶದಿಂದ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ ಇದರ ಜೊತೆಗೆ ಕನ್ನಡ ಭಾಷೆಯನ್ನು ಗೌರವಿಸಬೇಕು ಎಂದು ತಹಸೀಲ್ದಾರ ನಾಗಯ್ಯ ಹಿರೇಮಠ ಹೇಳಿದರು.

ಪಟ್ಟಣದ ತಹಸೀಲ್‌ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ 69ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಸಹಸ್ರಾರು ವರ್ಷಗಳ ಇತಿಹಾಸವಿದೆ,ಮೈಸೂರು ರಾಜ್ಯವು (ಈಗಿನ ಕರ್ನಾಟಕ) 1956ರ ನವೆಂಬರ್ 1ರಂದು ನಿರ್ಮಾಣವಾದುದರ ಸಂಕೇತವಾಗಿ ರಾಜ್ಯೋತ್ಸವವನ್ನು ಆಚರಿಸಲಾಗುತ್ತ ಎಂದು ಹೇಳಿದರು.

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ರಾವೂರಿನ ಸಚ್ಚಿದಾನಂದ ಪ್ರೌಢ ಶಾಲೆಯ ಶಿಕ್ಷಕ ಸಿದ್ದಲಿಂಗ ಬಾಳಿ ಮಾತನಾಡಿ, 1956 ನವೆಂಬರ್ 1ರಂದು ಕನ್ನಡ ಭಾಷಿಗರಿಗಾಗಿ ಒಂದು ರಾಜ್ಯ ಉದಯವಾದ ಹಿನ್ನೆಲೆ ರಾಜ್ಯೋತ್ಸವ ಆಚರಣೆಯನ್ನು ಮಾಡಲಾಯಿತು. 1973 ನವೆಂಬರ್ 1ರಂದು ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು ಹೀಗಾಗಿ ಕರ್ನಾಟಕ ರಾಜ್ಯೋತ್ಸವಕ್ಕೆ ತನ್ನದೇ ಆದ ಭವ್ಯ ಇಹಾಸವಿದೆ ಎಂದರು.

 ಎಲ್ಲಾ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಮೊದಲ ಅದ್ಯತೆ ನೀಡಬೇಕು. ಕನ್ನಡ ಭಾಷೆಯಲ್ಲಿ ಅಂಗಡಿ ಹಸರು ಶೇ.70 ರಷ್ಟಿದ್ದು, ಶೇ.30 ರಷ್ಟು ಇಂಗ್ಲಿಷ್‌ ಅಥವಾ ಇತರೆ ಭಾಷೆಯಲ್ಲಿ ಇರಬೇಕು ಎಂಬ ನಿಯಮವಿದೆ ಆದರೆ ರಾಜ್ಯದಲ್ಲಿ ಈ ನಿಯಮವನ್ನು ಪಾಲನೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕನ್ನಡವನ್ನು ಕಟ್ಟುವರು ಇಂದು ಕನ್ನಡವನ್ನು ಕುಟ್ಟುವ ಕೆಲಸ ಮಾಡುತ್ತಿದ್ದಾರೆ ಮಾರ್ಮಿಕವಾಗಿ ನುಡಿದರು.
ತಾಲ್ಲೂಕು ಆಡಳಿತ ವತಿಯಿಂದ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಮೆರವಣಿಗೆಗೆ ಚಾಲನೆ ನೀಡಿದರು ಮೆರವಣಿಗೆಯು ಪಟ್ಟಣದ ತಹಸೀಲ್ ಕಾರ್ಯಲಯದಿಂದ ರೈಲುನಿಲ್ದಾಣ, ನಾಗಾವಿ ಚೌಕ್, ಮಾರುಕಟ್ಟೆ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕ‌ರ್ ವೃತ್ತ, ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ವೇದಿಕೆಗೆ ಆಗಮಿಸಿತ್ತು ಮೆರವಣಿಗೆಯಲ್ಲಿ ಡಿಜೆ ಸೌಂಡ್ ಗೆ ಕನ್ನಡದ ಹಾಡುಗಳು ರಾರಾಜಿಸಿದವು ಅಧಿಕಾರಿಗಳು ನೃತ್ಯ ಮಾಡಿ ಎಲ್ಲಾರ ಗಮನ ಸೆಳೆದರು.

ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ, ಸಿಪಿಐ ಚಂದ್ರಶೇಖರ ತಿಗಡಿ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿರಾದಾರ, ಕಸಾಪ ಅಧ್ಯಕ್ಷ ವಿರೇಂದ್ರ ಕೊಲ್ಲೂರು, ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಶಿವಶರಣಪ್ಪ ಬಿರಾದಾರ, ಪಿಎಸ್‌ಐ ಶ್ರೀಶೈಲ್ ಅಂಬಾಟಿ ಅಧಿಕಾರಿಗಳಾದ ಸಂಜೀವಕುಮಾರ ಮಾನಕ‌ರ್, ಮಹ್ಮದ್ ಸಲೀಂ, ಬಾಲಕೃಷ್ಣ, ವಿಜಯಕುಮಾ‌ರ್ ಬಡಿಗೇರ್, ಪ್ರಕಾಶ್ ನೈಕೋಡಿ, ಶ್ರೀಮತಿ ಆರತಿ ತುಪ್ಪದ್, ಶ್ರೀಮತಿ ಸವಿತಾ, ಚೇತನ್ ಗುರಿಕಾರ, ಶಂಕರಗೌಡ ಪಾಟೀಲ, ಅಶ್ವಥ್ ನಾರಾಯಣ, ಕರವೇ ಅಧ್ಯಕ್ಷರಾದ ನರಹರಿ ಕುಲಕರ್ಣಿ, ಚಂದರ್‌ ಚವ್ಹಾಣ, ಲಕ್ಷ್ಮೀಕಾಂತ ತಾಂಡೂರಕರ್ ಸೇರಿದಂತೆ ಇತರರು ಇದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ ಮರತೂರಕರ್ ಸ್ವಾಗತಿಸಿದರು, ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು.

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...