ಚಿತ್ತಾಪುರ: ಒಳ್ಳೆಯ ಆಡಳಿತ ಜನರಿಗೆ ಕೊಡಬೇಕಾದರೆ ಸರ್ಕಾರದ ಕಛೇರಿಗಳು ಜನಸ್ನೇಹಿ ಆಗಿರಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಪಟ್ಟಣದಲ್ಲಿ 18.41 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಜಾಸೌಧ (ಮಿನಿ ವಿಧಾನಸೌಧ) ಉದ್ಘಾಟಿಸಿ ಮಾತನಾಡಿದ ಅವರು ಈ ಹಿಂದೆ ಮಿನಿ ವಿಧಾನಸೌಧ ಎಂದು ಕರೆಯುತ್ತಿದ್ದ ಕಟ್ಟಡಗಳಿಗೆ ಪ್ರಜಾಸೌಧ ಎಂದು ಹೆಸರಿಸಲಾಗುತ್ತಿದೆ ಕಾರಣ ಸರ್ಕಾರದ ಆಡಳಿತ ಜನರಿಗೆ ಹತ್ತಿರವಾಗಬೇಕು ಸರ್ಕಾರ ಜನರಿಗೆ ಸೇರಿದ್ದು ಅವರ ಕೆಲಸಗಳು ನಿರಂತರವಾಗಿ ನಡೆಯಬೇಕು ಎನ್ನುವ ಉದ್ದೇಶವಾಗಿದೆ ಎಂದರು.
ಮುಂದಿನ ಮೂರು ವಾರದಲ್ಲಿ ಸಮೃದ್ಧಿ ಯೋಜನೆಯಡಿಯಲ್ಲಿ 150 ಕೋಟಿ ರೂಪಾಯಿ ಅನುದಾನವನ್ನು ಮತಕ್ಷೇತ್ರಕ್ಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಜೊತೆಗೆ ಜುಲೈ ಅಂತ್ಯದ ಒಳಗೆ ಅಥವಾ ಅಗಸ್ಟ್ ಮೊದಲ ವಾರದಲ್ಲಿ ಗ್ರಾಮೀಣ ಮಟ್ಟದ ಅಕ್ರಮ ಜಾಗಗಳನ್ನು ಸಕ್ರಮ ಮಾಡಿ ಇ ಸ್ವತ್ತು ದಾಖಲೆ ಒದಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಆರ್ಟಿಕಲ್ 371(ಜೆ) ಜಾರಿಗೆ ಬಂದ ನಂತರ ಈ ಭಾಗದ ಅಭಿವೃದ್ದಿಗೆ ಸಹಕಾರಿಯಾಗಿದೆ ಪ್ರತಿವರ್ಷ5000 ಕೋಟಿ ರೂಪಾಯಿ ಅನುದಾನ ಮಂಡಳಿಗೆ ಬರುತ್ತಿದೆ.ಕಳೆದ ಒಂದು ದಶಕದಲ್ಲಿ 30,000 ಕಾಮಗಾರಿಗಳು ನಡೆದಿವೆ. 6,795 ಮೆಡಿಕಲ್ ಹಾಗೂ 22,219 ಇಂಜಿನೀಯರಿಂಗ್ ಸೀಟುಗಳು ಆರ್ಟಿಕಲ್ 371(ಜೆ) ಅಡಿಯಲ್ಲಿ ದೊರಕಿದರೆ, ಇದೂವರೆಗೆ 1.10 ಲಕ್ಷ ಜನರಿಗೆ ನೌಕರಿ ಹಾಗೂ 37,600 ನೌಕರರಿಗೆ ಪ್ರಮೋಷನ್ ಸಿಕ್ಕಿದೆ ಎಂದರು.
ಮನ್ ಕೀ ಬಾತ್ ನಲ್ಲಿ ಮಾತನಾಡಿದ ಪ್ರಧಾನಿಗಳು ಕಲಬುರಗಿ ರೊಟ್ಟಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ
ಮಹಿಳೆಯರಿಗೆ ಸ್ವಾವಲಂಬಿ ಜೀವನದ ಬಗ್ಗೆ ಕೊಂಡಾಡಿದ್ದಾರೆ. ಆದರೆ ಅನುದಾನ ಬಿಡುಗಡೆ ಮಾಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದ ಖರ್ಗೆ, ನಮ್ಮ ಕೆಲಸಗಳ ಬಿಜೆಪಿಯ ಸ್ಥಳೀಯ ನಾಯಕರು ಹೊಗಳದೆ ಟೀಕಿಸುತ್ತಿದ್ದಾರೆ. ಇತ್ತೀಚಿಗೆ ಬಿಜೆಪಿಯ ನಾಯಕರು ಪದೇ ಪದೇ ಕಲಬುರಗಿಗೆ ಬರುತ್ತಿದ್ದಾರೆ ಕಾರಣ ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡಲು ಬರುತ್ತಿದ್ದಾರೆ.
ವಿಜಯೇಂದ್ರ ಸ್ಥಳೀಯ ಬಿಜೆಪಿ ನಾಯಕರನ್ನು ನಂಬಿಕೊಂಡು ರಾಜಕೀಯ ಮಾಡಲು ಆಗುವುದಿಲ್ಲ. ಅದನ್ನು ನಾನು ಅವರಿಗೆ ನೇರವಾಗಿ ಹೇಳಿದ್ದೇನೆ. ಇಲ್ಲಿನ ಒಬ್ಬ ವ್ಯಕ್ತಿಯನ್ನು ನಂಬಿ ಅವರು ಬಂದಿದ್ದರು. ಈಗ ಅವನು ಎಲ್ಲಿದ್ದಾನೋ ಗೊತ್ತಿಲ್ಲ. ಹೆಣದ ಮೇಲೆ ಬಿಜೆಪಿಯವರು ರಾಜಕೀಯ ಮಾಡುತ್ತಾರೆ. ಬೀದರ್ ನಲ್ಲಿ ಯುವಕನೋರ್ವನ ಸಾವಿನ ವಿಚಾರದಲ್ಲಿ ರಾಜಕೀಯ ಮಾಡಿದ್ದರು. ಮಂಗಳೂರು ಹಾಗೂ ಕರಾವಳಿ ಭಾಗವನ್ನು ಪ್ರಯೋಗ ಶಾಲೆ ಮಾಡಿದಂತೆ ನಮ್ಮ ಭಾಗದಲ್ಲಿ ಮಾಡಲು ಸಾಧ್ಯವಿಲ್ಲ.ಇದು ಸರ್ವಜನಾಂಗದ ಶಾಂತಿಯ ತೋಟ. ಇಲ್ಲಿ ಬಿಜೆಪಿಯವರ ಯಾವ ಪ್ರಯೋಗ ನಡೆಯುವುದಿಲ್ಲ. ವಾಡಿಯಲ್ಲಿ ನಡೆದ ಒಂದು ವಾಟ್ಸಪ್ ಸ್ಟೇಟಸ್ ಹಾಕಿದ್ದಕ್ಕೆ ಜಗಳವಾದರೆ ವಿರೋಧಪಕ್ಷದ ನಾಯಕರು ಬರುತ್ತಾರೆ ಎಂದರೆ ಅವರ ಭೌದ್ದಿಕ ದಿವಾಳಿತನ ತೋರಿಸುತ್ತದೆ ಎಂದರು.
ಬಿಜೆಪಿ ಹಾಳಾಗಲು ರವಿಕುಮಾರ್ ಕಾರಣ ಅವರ ಕಂಪನಿಗೆ ಸಂವಿಧಾನದಲ್ಲಿ ನಂಬಿಕೆಯ ಇಲ್ಲ ಮನುಸ್ಮೃತಿಯ ಮೇಲೆ ನಂಬಿಕೆ ಇದೆ. ಮನುಸ್ಕೃತಿಯನ್ನು ನಿಮ್ಮ ಮನೆಯಲ್ಲಿ ಜಾರಿಗೆ ತನ್ನಿ ಎಂದು ನಾನು ಅವರಿಗೆ ಒಂದು ಸವಾಲ್ ಹಾಕುತ್ತೇನೆ. ಇದು ಸಾಧ್ಯನಾ? ಧರ್ಮದ ಹೆಸರಲ್ಲಿ ಬಡವರ ಮಕ್ಕಳನ್ನು ದಾರಿ ತಪ್ಪಿಸುವ ಬಿಜೆಪಿ ನಾಯಕರು, ತಮ್ಮ ಮಕ್ಕಳನ್ನ ಧರ್ಮದ, ಗೋ ರಕ್ಷಣೆಗೆ ಕಳಿಸಿದ್ದಾರೆ? ನಿಮ್ಮ ಮಕ್ಕಳಿಗೆ ಬುದ್ದ, ಬಸವ, ಅಂಬೇಡ್ಕರ್, ನಾರಾಯಣಗುರು,ಕುವೆಂಪು ಅವರ ಆದರ್ಶದ ಬಗ್ಗೆ ತಿಳಿ ಹೇಳಿ ಎಂದು ಪೋಷಕರಿಗೆ ಮನವಿ ಮಾಡಿದರು.
ಮುಂದಿನ ಮೂರು ವರ್ಷದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ನೀಲಿ ನಕ್ಷೆ ತಯಾರಿಸಲಾಗಿದೆ. ಕಲಬುರಗಿ ಹಾಗೂ ಚಿತ್ತಾಪುರ ಮತ್ತು ವಾಡಿ ಪಟ್ಟಣಗಳ ಅಭಿವೃದ್ದಿಗೆ ಖಾಸಗಿ ಸಂಸ್ಥೆಯೊಂದಿಗೆ ಮಾತುಕತೆ ನಡದಿದೆ. ಇದಕ್ಕೆ ಸಂಸದರ ಅವರ ಆಶೀರ್ವಾದ ಬೇಕಾಗುತ್ತದೆ. ವಾಡಿ ಹಾಗೂ ಚಿತ್ತಾಪುರ ಅಭಿವೃದ್ದಿಗೆ ತಲಾ100 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ವೇದಿಕೆಯ ಮೇಲಿದ್ದ ಅದಾನಿ ಸಿಮೆಂಟ್ಸ್ ಕಂಪನಿಯ ಅಧಿಕಾರಿಗಳಿಗೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಬಗ್ಗೆ ಎಂಎಲ್ ಸಿ ರವಿಕುಮಾರ್ ಏನೇನೋ ಮಾತನಾಡಿದ್ದರು. ಜಿಲ್ಲಾಧಿಕಾರಿಯವರ ಒಂದೊಂದು ಕಣ್ಣೀರ ಹನಿ ಅವನ ಒಂದೊಂದು ವರ್ಷ ಆಯಸ್ಸು ಕಮ್ಮಿ ಆಗುತ್ತದೆ. ಈಗ ಮತ್ತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಸಿಎಸ್) ಬಗ್ಗೆ ಮಾತನಾಡಿದ್ದಾನೆ. ಅವನು ಕುಡಿದು ಮಾತನಾಡುತ್ತಾನೋ ಏನೋ? ಹೀಗೆ ಮಾತನಾಡುವವನು ತಾನು ಹುಟ್ಟಿರುವ ಜಾತಿಗೂ ಕೂಡಾ ಅವಮಾನ. ತಕ್ಷಣ ಅವನು ರಾಜೀನಾಮೆ ಕೊಡಬೇಕು ಎಂದು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು.
- ತಿಪ್ಪಣ್ಣಪ್ಪ ಕಮಕನೂರ.
ವಿಧಾನ ಪರಿಷತ್ತ ಸದಸ್ಯ ಕಲಬುರಗಿ.
====================================
ಸಚಿವ ಪ್ರಿಯಾಂಕ್ ಖರ್ಗೆ ರವರ ಸೇವೆ ಈ ಕ್ಷೇತ್ರಕ್ಕೆ ಸೀಮಿತವಾಗಿದೆ ಜಿಲ್ಲೆಯ ಪ್ರತಿ ತಾಲ್ಲೂಕಿಗೂ ವ್ಯಾಪಿಸಿದೆ ಅದರಲ್ಲೂ ಅಫಜಲಪೂರ ಪಟ್ಟಣಕ್ಕೆ 120 ಕೋಟಿ ರೂಪಾಯಿ ವೆಚ್ಚದ ಕುಡಿಯುವ ನೀರಿನ ಯೋಜನೆ ಮಂಜೂರಾತಿಗಾಗಿ ಸಚಿವರ ಕೊಡುಗೆ ಬಹಳಷ್ಟಿದೆ ಎಂದರು.
- ಎಂ ವೈ ಪಾಟೀಲ್
ಶಾಸಕರು, ಅಫಜಲಪೂರ.
ಇದೇ ಸಂದರ್ಭದಲ್ಲಿ ಸಚಿವರು ಹಾಗೂ ಗಣ್ಯರು 517 ಫಲಾನುಭವಿಗಳಿಗೆ ಸೌಲಭ್ಯ ಪತ್ರಗಳನ್ನು ನೀಡಲಾಯಿತು.
ವೇದಿಕೆ ಮೇಲೆ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ, ಅಫಜಲಪುರ ಶಾಸಕ ಎಂ ವೈ ಪಾಟೀಲ್, ಅಂಬಿಗರ ಚೌಡಯ್ಯ ನಿಗಮ ಅಧ್ಯಕ್ಷ ಬಾಬುರಾವ್ ಚಿಂಚನಸೂರ, ವಿಧಾನ ಪರಿಷತ್ ಶಾಸಕರಾದ ಜಗದೇವ ಗುತ್ತೆದಾರ್, ರಮೇಶ ಮರಗೋಳ, ನಾಗರೆಡ್ಡಿ ಪಾಟೀಲ್, ಭೀಮಣ್ಣ ಸಾಲಿ, ಪುರಸಭೆ ಅಧ್ಯಕ್ಷ ಶ್ರೀಮತಿ ಅನ್ನಪೂರ್ಣ ಕಲ್ಲಕ್, ಶಿವಾನಂದ ಪಾಟೀಲ್ ಶ್ರೀನಿವಾಸ ಸಾಗರ, ಅಧಿಕಾರಿಗಳಾದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೊರು ಶ್ರೀನಿವಾಸುಲು, ಡಿವಾಯ್ಎಸ್ಪಿ ಶಂಕರಗೌಡ ಪಾಟೀಲ್, ಗ್ರೇಡ್-2 ತಹಸೀಲ್ದಾರ್ ರಾಜಕುಮಾರ್ ಮರತೂರ, ಶಹಾಬಾದ ತಹಸೀಲ್ದಾರ್ ಜಗದೀಶ್, ಸೇಡಂ ತಹಸೀಲ್ದಾರ್ ಶ್ರೀಯಾಂಕ್ ಧನುಶ್ರೀ, ಚಿಂಚೋಳಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಬಿಇಓ ಶಶಿಧರ ಬಿರಾದಾರ್, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ್ ಗುರಿಕಾರ್, ಕೃಷಿ ಇಲಾಖೆ ಅಧಿಕಾರಿ ಸಂಜೀವಕುಮಾರ್ ಮಾನಕರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚೇತನ್ ಗುರಿಕಾರ್, ಸಿಡಿಪಿಓ ಆರತಿ ತುಪ್ಪದ್, ಬಿಸಿಎಂ ಅಧಿಕಾರಿ ಸುನಿತಾ, ತೋಟಗಾರಿಕೆ ಇಲಾಖೆ ಅಧಿಕಾರಿ ಶಂಕರಗೌಡ ಪಾಟೀಲ, ತಾಪಂ ಇಓ ಆಕ್ರಂ ಪಾಷಾ, ಅರಣ್ಯಾಧಿಕಾರಿ ವಿಜಯಕುಮಾರ್ ಬಡಿಗೇರ್, ಗ್ರಾಮ ಆಡಳಿತ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಸುನೀಲ್ ಚವ್ಹಾಣ, ಬಸ್ ಘಟಕ ಅಧಿಕಾರಿ ಗೋಲಾಳಪ್ಪ ಬೀರಾದಾರ್, ಮುಖಂಡರಾದ ಅಜೀಜ್ ಸೇಟ್, ಶಿವರುದ್ರಪ್ಪ ಭೀಣ್ಣಿ, ಜಗಣ್ಣಗೌಡ ರಾಮತೀರ್ಥ, ಜಯಪ್ರಕಾಶ್ ಕಮಕನೂರ, ಸಿದ್ದುಗೌಡ ಅಫಜಲಪುರ, ಬಸವರಾಜ ಬಳೂಂಡಗಿ, ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಮುಕ್ತಾರ್ ಪಟೇಲ್, ಶೀಲಾ ಕಾಶಿ, ಮಹಿಮೂದ್ ಸಾಹೇಬ್, ವೀರಣ್ಣಗೌಡ ಪರಸರೆಡ್ಡಿ, ಸುನೀಲ್ ದೊಡ್ಡಮನಿ, ಮನ್ಸೂರ್ ಪಟೇಲ್, ನಾಗಯ್ಯ ಗುತ್ತೇದಾರ, ಶರಣಪ್ಪ ನಾಟೀಕಾರ, ಮಲ್ಲಪ್ಪ ಹೊಸಮನಿ, ಜಫಾರುಲ್ ಹಸನ್, ದೇವು ಯಾಬಾಳ, ಸಂಜಯ ಬುಳಕರ್ ಸೇರಿದಂತೆ ಮುಖಂಡರು ಮತ್ತು ತಾಲೂಕಿನ ಇತರೆ ಇಲಾಖೆಗಳ ಸಿಬ್ಬಂದಿಗಳು ಇದ್ದರು.
ಸೇಡಂ ಎಸಿ ಪ್ರಭು ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ.ಶಂಕರ ಕಣ್ಣಿ ಸ್ವಾಗತಿಸಿದರು, ಸಂತೋಷ ಶಿರನಾಳ ನಿರೂಪಿಸಿದರು.