ಗಣೇಶನ ಲಡ್ಡು 51 ಸಾವಿರಕ್ಕೆ ಹರಾಜು

ಚಿತಾಪುರ: ಪಟ್ಟಣದ ಆಶ್ರಯ ಕಾಲೋನಿಯ 'ಸುನಾಮಿ ಬಾಯ್ಸ್' ಶ್ರೀ ಗಣೇಶ ದೇವಸ್ಥಾನದ 19ನೇ ವರ್ಷದ ಗಣೇಶೋತ್ಸವವು ಭಕ್ತಿ-ಸಂಭ್ರಮಗಳಿಂದ ನೆರವೇರಿತು.

ಮೂರ್ತಿಯ ಪ್ರತಿಷ್ಠಾಪನೆಯಿಂದ ಹಿಡಿದು ಕಳೆದ ೯ ದಿನಗಳ ಕಾಲ ನಿರಂತರವಾಗಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪೂಜಿಸಲ್ಪಟ್ಟ ಶ್ರೀ ಗಣೇಶನ ' ಲಡ್ಡು ಪ್ರಸಾದ'ದ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಲಾಯಿತು. ಈ ಹರಾಜಿನಲ್ಲಿ ನಾಗಾವಿ ಚೌಕ್‌ನ ಸುನಿಲ್ ಬೈರಿ ಅವರು ಬಾರೀ ಪೈಪೋಟಿಯ ನಡುವೆ 51,000 ರೂಪಾಯಿಗಳಿಗೆ ಲಡ್ಡು ಪ್ರಸಾದವನ್ನು ತಮ್ಮದಾಗಿಸಿಕೊಂಡರು.

ಈ ಶುಭ ಸಂದರ್ಭದಲ್ಲಿ ಸುನಾಮಿ ಬಾಯ್ಸ್ ಗಣೇಶೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾದ ಮೌನೇಶ ವಚ್ಚಾ, ರೈಮನ್ ರಾವೂರ್ ಸೇರಿದಂತೆ ಸಮಿತಿಯ ಪ್ರಮುಖರಾದ ಭೀಮು ಭಾಗೋಡಿ, ಶರಣು ಚೆನ್ನಕ್ಕಿ, ರಾಜು ಕಡ್ಲಿ, ಮೇಘರಾಜ್ ಗುತ್ತೇದಾರ, ನಾಗರಾಜ್ ಮಾಸ್ಟರ್, ಭೀಮಶಂಕರ್ ಚೆನ್ನಕ್ಕಿ, ಮಂಜುನಾಥ ಹುಳುಗೋಳ, ಮಹಾಲಿಂಗ, ಮಲ್ಲು, ಪರಶುರಾಮ್ ಆನಿ, ಬಾಗೇಶ, ದೀಪಕ್, ಗುಂಡು, ಸುನಿಲ್ ಹಾಗೂ ಅರುಣ್ ಉಪಸ್ಥಿತರಿದ್ದರು.

ಇವರೊಂದಿಗೆ ಸುನಾಮಿ ಬಾಯ್ಸ್ ಯುವಕ ಸಂಘದ ಸದಸ್ಯರು, ಆಶ್ರಯ ಕಾಲೋನಿಯ ನೂರಾರು ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿ, ವಿಜೃಂಭಣೆಯ ಗಣೇಶೋತ್ಸವಕ್ಕೆ ಸಾಕ್ಷಿಯಾದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم