ಗಣೇಶೋತ್ಸವ: ₹53 ಸಾವಿರಕ್ಕೆ ಗಣೇಶನ ಲಡ್ಡು ಹರಾಜು

ಚಿತ್ತಾಪುರ: ಪಟ್ಟಣದ ಇಂದಿರಾನಗರದಲ್ಲಿ ಶ್ರೀಶಕ್ತಿ ವಿನಾಯಕ ಯುವಕರ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೯ ದಿನಗಳ ಗಣೇಶ ಉತ್ಸವ ಕಾರ್ಯಕ್ರಮವು ಅತ್ಯಂತ ವಿಜೃಂಭಣೆ ಹಾಗೂ ಅದ್ಧೂರಿಯಾಗಿ ನೆರವೇರಿತು.

ಉತ್ಸವದ ಕೊನೆಯ ದಿನ ನಡೆದ ಪ್ರಸಾದದ ಲಡ್ಡು ಹರಾಜು ಪ್ರಕ್ರಿಯೆಯಲ್ಲಿ ನಾಗು ಕೊಲ್ಲೂರ ಎಂಬುವರು ೫೩,೦೦೦ ರೂಪಾಯಿಗಳಿಗೆ ಗಣೇಶನ ಲಡ್ಡನ್ನು ತಮ್ಮದಾಗಿಸಿಕೊಂಡರು. ಇದೇ ಸಂದರ್ಭದಲ್ಲಿ, ಕಳೆದ ವರ್ಷದ ಗಣೇಶೋತ್ಸವದಲ್ಲಿ ೯೩,೦೦೦ ರೂಪಾಯಿಗಳಿಗೆ ಲಡ್ಡು ಹರಾಜು ಪಡೆದುಕೊಂಡಿದ್ದ ಸಿದ್ದು ಬೆನಕನಹಳ್ಳಿ ಅವರು ಆ ಹಣವನ್ನು ಈ ವರ್ಷ ಮಂಡಳಿಗೆ ಹಸ್ತಾಂತರಿಸಿದರು.

ಈ ವೇಳೆ ಮಂಡಳಿಯ ವತಿಯಿಂದ ಕಳೆದ ವರ್ಷ ಲಡ್ಡು ಪಡೆದ ಸಿದ್ದು ಬೆನಕನಹಳ್ಳಿ ಹಾಗೂ ಈ ವರ್ಷ ಲಡ್ಡು ಹರಾಜು ಪಡೆದುಕೊಂಡ ನಾಗು ಕೊಲ್ಲೂರ ಅವರ ಕುಟುಂಬದವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಶುಭ ಸಂದರ್ಭದಲ್ಲಿ ಶ್ರೀಶಕ್ತಿ ವಿನಾಯಕ ಯುವಕರ ಮಂಡಳಿಯ ಅಧ್ಯಕ್ಷರಾದ ಅಂಬರೀಷ ಟೇಲರ್ ಭೋವಿ, ಉಪಾಧ್ಯಕ್ಷ ಗೌತಮ ಪಾಮನೂರ, ಸದಸ್ಯರಾದ ಅಂಬರೀಷ ಎದುರಮನಿ, ರಾಜು ಭಜಂತ್ರಿ, ನಾಗರಾಜ ಕೊಡದೂರಕರ್, ಅಯೂಬ್ ಸೇರಿದಂತೆ ಮಂಡಳಿಯ ಪದಾಧಿಕಾರಿಗಳು ಹಾಗೂ ಸ್ಥಳೀಯ ಯುವಕರು, ಭಕ್ತಾದಿಗಳು ಉಪಸ್ಥಿತರಿದ್ದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم