ಗಣೇಶೋತ್ಸವ ರಾಷ್ಟ್ರೀಯತೆ ಮತ್ತು ಐಕ್ಯತೆಯ ಸಂಕೇತ: ಭಾರತಿ

ಚಿತ್ತಾಪುರ: ಬ್ರಿಟಿಷರ ಆಡಳಿತಾವಧಿಯಲ್ಲಿ ಸಭೆ-ಸಮಾರಂಭಗಳು ಹಾಗೂ ಜನರು ಗುಂಪಾಗಿ ಸೇರುವುದಕ್ಕೆ ನಿಷೇಧವಿದ್ದಾಗ, ಸಾರ್ವಜನಿಕರಲ್ಲಿ ರಾಷ್ಟ್ರೀಯತೆ, ಐಕ್ಯತೆ ಹಾಗೂ ಸ್ವಾತಂತ್ರ್ಯದ ಸಂದೇಶವನ್ನು ಬಿತ್ತಲು ತಿಲಕರು ಸಾರ್ವಜನಿಕ ಗಣೇಶೋತ್ಸವವನ್ನು ಜಾರಿಗೆ ತಂದರು ಎಂದು ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಹೇಳಿದರು.

ಪಟ್ಟಣದ ವರುಣಾ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಮಹಾಗಣಪತಿ ಉತ್ಸವ ಮಂಡಳ ವತಿಯಿಂದ ಮಂಗಳವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಪ್ರಥಮ ವರ್ಷದ ಶ್ರೀ ಮಹಾಗಣಪತಿ ಉತ್ಸವ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಕೇವಲ ಮನೆಗಳಲ್ಲಿ ಆಚರಿಸಲ್ಪಡುತ್ತಿದ್ದ ಗಣೇಶೋತ್ಸವವನ್ನು 1893ರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ಸಾರ್ವಜನಿಕ ಉತ್ಸವವಾಗಿ ಪರಿವರ್ತಿಸಿದರು. ಅಂದಿನಿಂದ ದೇಶಾದ್ಯಂತ ಜಾತಿ, ಮತ ಹಾಗೂ ಪಂಥಗಳ ಭೇದವಿಲ್ಲದೆ ಎಲ್ಲರೂ ಒಂದಾಗಿ ಗಣೇಶೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ ಎಂದರು.   

ಸಾನ್ನಿಧ್ಯ ವಹಿಸಿದ್ದ ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ಗಣೇಶೋತ್ಸವಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಎಲ್ಲ ದೇವತೆಗಳಲ್ಲಿ ಗಣಪತಿಯು ಅತ್ಯಂತ ಶ್ರೇಷ್ಠ ದೇವರಾಗಿದ್ದು, ಯಾವುದೇ ಶುಭ ಕಾರ್ಯಕ್ರಮವಿರಲಿ ಮೊದಲು ಗಣೇಶನಿಗೆ ಪೂಜೆ ಸಲ್ಲಿಸಲಾಗುತ್ತದೆ. ಭಯ, ಭಕ್ತಿ ಮತ್ತು ಶ್ರದ್ಧೆಯಿಂದ ಗಣೇಶನಿಗೆ ಪೂಜಿಸಿದರೆ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತವೆ ಎಂದು ಹೇಳಿದರು.

ಅಗ್ನಿಶಾಮಕ ಠಾಣಾಧಿಕಾರಿ ನಾಗರಾಜ ನಾಯಕ ಹಾಗೂ ಮಂಡಳ ಅಧ್ಯಕ್ಷ ಮೈಪಾಲ್ ಮೋಲಿಮನಿ ಹೊಸೂರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವಿಜಯಕುಮಾರ್ ದೇಶಮುಖ್ ಉದ್ಘಾಟನೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಅಶೋಕ ರೆಡ್ಡಿ ಗೌಡ ಆಲೂರು, ಬಸವರಾಜ ಗೌಡ ಮಾಲಿ ಪಾಟೀಲ ದಂಡಗುಂಡ, ಬಸವರಾಜ ಗೌಡ ಮಾಲಿ ಪಾಟೀಲ ಆಲೂರು, ಶರಣಬಸಪ್ಪ ಗಾರಂಪಳ್ಳಿ ವೇದಿಕೆಯಲ್ಲಿದ್ದರು.  

ಈ ಸಂದರ್ಭದಲ್ಲಿ ಮರಲಿಂಗ ದೊಡ್ಡಮನಿ, ವಸಂತ ಕಾಶಿ, ರೋಹಿತ್ ಚವ್ಹಾಣ, ಪ್ರಭು ಹಲಕರ್ಟಿ, ಜಯಂತ ಕುಲಕರ್ಣಿ, ಶರಣು ಸೂಲಹಳ್ಳಿ, ವಿಶ್ವನಾಥ ರೆಡ್ಡಿ ಇಟಗಿ, ಕೋಟ್ರೇಶ್ವರ ರೇಷ್ಮಿ, ಅಂಬರೀಷ್ ಸುಲೇಗಾಂವ ಸೇರಿದಂತೆ ಇತರರು ಉಪಸ್ಥಿತರಿದ್ದರು. ವೀರೇಶ ಸ್ವಾಗತಿಸಿದರು

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم