ಪೋಸ್ಟ್‌ಗಳು

ಜೂನ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ: ಪಲ್ಲೇದ.

ಇಮೇಜ್
ಚಿತ್ತಾಪೂರ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎನ್ನುವ ಮಾತನ್ನು ನಾವು ಚಿಕ್ಕಂದಿನಿಂದಲೇ ಕೇಳಿರುತ್ತೇವೆ. ಮಾತ್ರವಲ್ಲದೆ ಅದರ ಮೇಲೆ ಪ್ರೀತಿ, ಕಾಳಜಿಯು ಮುಖ್ಯವಾಗಿರುತ್ತದೆ. ಅದಕ್ಕನುಗುಣವಾಗಿ ವಿಶ್ವ ಪರಿಸರ ದಿನವೆಂದು ಜೂನ್‌ 5ರಂದು ಆಚರಿಸುತ್ತೇವೆ. ಈ ಮಾತು ಕೇವಲ ಆ ದಿನಕ್ಕನುಗುಣವಾಗಿರದೆ ಪ್ರತಿ ದಿನ ಸಾಧ್ಯವಾಗದಿದ್ದರೆ ವಾರಕ್ಕೊಮ್ಮೆಯಾದರೂ ಸಸ್ಯದ ಪೋಷಣೆ ಮಾಡಿದರೆ ಆ ಗಿಡವೇ ಮುಂದಿನ ಮರವಾಗಿ ನಾವು ಪ್ರಕೃತಿಗೆ ಕೊಟ್ಟ ಉಡುಗೊರೆಯಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ ಎಸ್ ಪಲ್ಲೇದ ಹೇಳಿದರು. ಪಟ್ಟಣದ ಹೊರ ವಲಯದ ಜ್ಞಾನ ಗಂಗಾ ಶಿಕ್ಷಣಾ ಸಂಸ್ಥೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ವಕೀಲರ ಸಂಘ,ಇವರ ಸಂಯುಕ್ತಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ, ಪ್ಲಾಸ್ಟಿಕ್ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಿಮ್ಮ ನಿಮ್ಮ ಸುತ್ತಲಿನ ಪರಿಸರ ಸಂರಕ್ಷಣೆ ಮಾಡಿದ್ರೆ ನಮ್ಮ ಆರೋಗ್ಯ ಸುಚಿಯಾಗಿರುತ್ತದೆ. ಅಷ್ಟೇ ಅಲ್ಲದೇ ಸದೃಢ ಸಮಾಜ ನಿರ್ಮಾಣ ಮಾಡಲು ಸಾದ್ಯವಾಗುತ್ತದೆ ಎಂದರು. ವಲಯ ಅರಣ್ಯಾಧಿಕಾರಿ ವಿಜಯಕುಮಾರ ಮಾತನಾಡಿ ಪರಿಸರ ಮಾಲಿನ್ಯ, ಜಲಮಾಲಿನ್ಯ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ ನಿಯಂತ್ರಣ ಮಾಡುವಲ್ಲಿ ನಾವು ನಿರಂತರಾಗಿರಬೇಕು, ನಮ್ಮ ಸುತ್ತಲಿನ ಫಲವತ್ತಾದ ಮಣ್ಣು, ಸಗಣಿ, ಒಳಸಿಕೊಂಡು ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದು ಕರೆ ...

ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳಿ: ಕಾಶಿನಾಥ ಗುತ್ತೇದಾರ್

ಇಮೇಜ್
ಚಿತ್ತಾಪುರ: ಗ್ರಂಥಾಲಯ ಜ್ಞಾನದ ಭಂಡಾರ ಇದ್ದಂತೆ ಹೀಗಾಗಿ ಯುವಕರು ಅಲ್ಲಿ ಇಲ್ಲಿ ಕುಳಿತುಕೊಂಡು ಹರಾಟೆ ಹೊಡೆದು ವ್ಯರ್ಥ ಸಮಯವನ್ನು ಕಳೆಯದೇ ಗ್ರಂಥಾಲಯಕ್ಕೆ ಭೇಟಿ ನೀಡಿ ವಿವಿಧ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಎಂದು ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತು ಅಧ್ಯಕ್ಷ ಕಾಶಿನಾಥ ಗುತ್ತೇದಾರ ಹೇಳಿದರು.   ಪಟ್ಟಣದ ಸ್ಟೇಷನ್ ತಾಂಡಾದ ಸೇವಾಲಾಲ್ ಮಂದಿರದ ಹತ್ತಿರ ತಾಂಡಾ ಅಭಿವೃದ್ದಿ ನಿಗಮದಿಂದ ಮಂಜೂರಾದ ನೂತನ ಗ್ರಂಥಾಲಯದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಗೆ ಸಹಾಯಕವಾಗುವ ಪುಸ್ತಕಗಳು, ಭಾರತದ ಸಂವಿಧಾನ, ರಾಜಕೀಯ, ಇತಿಹಾಸ, ಅರ್ಥಶಾಸ್ತ್ರ ಸೇರಿದಂತೆ ವಿವಿಧ ವಿಷಯಗಳ ಸಾವಿರಾರು ಪುಸ್ತಕಗಳು ಒಂದೇ ಸ್ಥಳದಲ್ಲಿ ಸಂಗ್ರಹಿಸಿರುವ ಗ್ರಂಥಾಲಯಗಳು ಅಮೂಲ್ಯವಾದ ಜ್ಞಾನ ಭಂಡಾರ ಎಂದರು. ಪ್ರತಿಯೊಬ್ಬರು ತಮ್ಮ ಜ್ಞಾನದ ಹಸಿವನ್ನು ತೀರಿಸಿಕೊಳ್ಳಲು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದರ ಜತೆಗೆ ಮಕ್ಕಳಲ್ಲಿ ಓದುವ ಅಭಿರುಚಿಯನ್ನು ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.   ದೇವರ ಮೂರ್ತಿ ಇರುವುದಕ್ಕೆ ಎಲ್ಲರೂ ದೇವಸ್ಥಾನ ಎಂದು ಭಾವಿಸಿದ್ದಾರೆ ಆದರೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಗ್ರಂಥಾಲಯವನ್ನು ದೇವಸ್ಥಾನ ಎಂದು ಭಾವಿಸಿಕೊಂಡು ಜೀವನದ ಅತ್ಯಮೂಲ್ಯ ಸಮಯ ಗ್ರಂಥಾಲಯದಲ್ಲೇ ಕಳೆದಿದ್ದರಿಂದ ಇಂದು ಮಹಾನ್ ಜ್ಞಾನಿಯಾಗಿದ್ದಾರ...