ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ: ಪಲ್ಲೇದ.
ಚಿತ್ತಾಪೂರ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎನ್ನುವ ಮಾತನ್ನು ನಾವು ಚಿಕ್ಕಂದಿನಿಂದಲೇ ಕೇಳಿರುತ್ತೇವೆ. ಮಾತ್ರವಲ್ಲದೆ ಅದರ ಮೇಲೆ ಪ್ರೀತಿ, ಕಾಳಜಿಯು ಮುಖ್ಯವಾಗಿರುತ್ತದೆ. ಅದಕ್ಕನುಗುಣವಾಗಿ ವಿಶ್ವ ಪರಿಸರ ದಿನವೆಂದು ಜೂನ್ 5ರಂದು ಆಚರಿಸುತ್ತೇವೆ. ಈ ಮಾತು ಕೇವಲ ಆ ದಿನಕ್ಕನುಗುಣವಾಗಿರದೆ ಪ್ರತಿ ದಿನ ಸಾಧ್ಯವಾಗದಿದ್ದರೆ ವಾರಕ್ಕೊಮ್ಮೆಯಾದರೂ ಸಸ್ಯದ ಪೋಷಣೆ ಮಾಡಿದರೆ ಆ ಗಿಡವೇ ಮುಂದಿನ ಮರವಾಗಿ ನಾವು ಪ್ರಕೃತಿಗೆ ಕೊಟ್ಟ ಉಡುಗೊರೆಯಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ ಎಸ್ ಪಲ್ಲೇದ ಹೇಳಿದರು.
ಪಟ್ಟಣದ ಹೊರ ವಲಯದ ಜ್ಞಾನ ಗಂಗಾ ಶಿಕ್ಷಣಾ ಸಂಸ್ಥೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ವಕೀಲರ ಸಂಘ,ಇವರ ಸಂಯುಕ್ತಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ, ಪ್ಲಾಸ್ಟಿಕ್ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಿಮ್ಮ ನಿಮ್ಮ ಸುತ್ತಲಿನ ಪರಿಸರ ಸಂರಕ್ಷಣೆ ಮಾಡಿದ್ರೆ ನಮ್ಮ ಆರೋಗ್ಯ ಸುಚಿಯಾಗಿರುತ್ತದೆ. ಅಷ್ಟೇ ಅಲ್ಲದೇ ಸದೃಢ ಸಮಾಜ ನಿರ್ಮಾಣ ಮಾಡಲು ಸಾದ್ಯವಾಗುತ್ತದೆ ಎಂದರು.
ವಲಯ ಅರಣ್ಯಾಧಿಕಾರಿ ವಿಜಯಕುಮಾರ ಮಾತನಾಡಿ
ಪರಿಸರ ಮಾಲಿನ್ಯ, ಜಲಮಾಲಿನ್ಯ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ ನಿಯಂತ್ರಣ ಮಾಡುವಲ್ಲಿ ನಾವು ನಿರಂತರಾಗಿರಬೇಕು, ನಮ್ಮ ಸುತ್ತಲಿನ ಫಲವತ್ತಾದ ಮಣ್ಣು, ಸಗಣಿ, ಒಳಸಿಕೊಂಡು ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದು ಕರೆ ನೀಡಿ. ಹುಟ್ಟಿದ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿರುವಂತೆ ಎಲ್ಲ ಪಶು–ಪಕ್ಷಿ, ಪ್ರಾಣಿ, ಮರ-ಗಿಡಗಳಿಗೂ ಇದೆ. ಇವೆಲ್ಲವೂ ಬದುಕಿದಾಗ ಮಾತ್ರ ನಾವು-ನೀವು ಎಲ್ಲರೂ ಜೀವಿಸಲು ಸಾಧ್ಯ. ಅರಣ್ಯದಲ್ಲಿರುವ ಆನೆ, ಹುಲಿ, ಚಿರತೆ ಇಂದಿನ ದಿನಗಳಲ್ಲಿ ಅಲ್ಲಲ್ಲಿ ಗ್ರಾಮ, ಪಟ್ಟಣ ಮತ್ತು ನಗರಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಅರಣ್ಯ ನಾಶವೇ ಇದಕ್ಕೆ ಮೂಲ ಕಾರಣ. ಪ್ರಾಣಿ ಸಂಕುಲಗಳು ಅರಣ್ಯ ಬಿಟ್ಟು ಊರೊಳಗೆ ಬರುವುದು ಸಹಜ ಹೀಗಾಗಿ ಯಾರು ಭಯಪಡಬೇಡಿ ಇದಕ್ಕೆ ಪರ್ಯಾಯವಾಗಿ ಹೆಚ್ಚಿನ ಪ್ರಮಾಣ ಗಿಡ-ಮರಗಳು ಬೆಳಸುವ ಜೊತೆಗೆ ಅವುಗಳ ರಕ್ಷಣೆ ಆಗಬೇಕಾಗಿದೆ ಆದ್ದರಿಂದ ನಾವು ನಿವು ಎಲ್ಲರೂ ಪರಿಸರ ಸಂರಕ್ಷಣೆಯಲ್ಲಿ ಪಾಲ್ಗೊಳ್ಳೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜ್ಞಾನ ಗಂಗಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರಕಾಶ ಹಂಚನಾಳ, ಸಿವಿಲ್ ನ್ಯಾಯಾಧೀಶರಾದ ಸಂತೋಷಕುಮಾರ ದೈವಜ್ಞ, ಶ್ರೀಮತಿ ಅಂಜನಾದೇವಿ ಆರ್, ಗಂಗಾಧರ ಸಾಲಿಮಠ, ವಲಯ ಅರಣ್ಯಾಧಿಕಾರಿ ವಿಜಯಕುಮಾರ,ಸತೀಶ ಮುಡಬೂಳಕರ,ಶಿವಾನಂದ ಅಂಬಿಗೇರ್, ಅರಣ್ಯ ಸಿಬ್ಬಂದಿಗಳಾದ ಜಟ್ಟೆಪ್ಪ ಸಾರಿ, ಚಂದ್ರಹಾಸ ನಾಯಕ, ಮಂಜುನಾಥ ಹಂದ್ರಾಳ, ಗುರುರಾಜ, ಸಂತೋಷ ಕುಮಾರ, ಶಿಕ್ಷಣಾ ಸಂಸ್ಥೆಯ ಸಿಬ್ಬಂದಿಗಳಾದ ಶ್ರೀಮತಿ ಶೃತಿ, ಶ್ರೀಮತಿ ಪ್ರೀಯಾಂಕಾ, ಗುರು, ರಶ್ಮಿ, ಪ್ರಶಾಂತ, ಮಲ್ಲಣ್ಣಗೌಡ, ಸೇರಿದಂತೆ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ