ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕಾಂಗ್ರೆಸ್ ಮುಖಂಡರಿಂದ ಗೌರವ ಸಮರ್ಪಣೆ.

ಬೆಂಗಳೂರು: ನೂತನವಾಗಿ ರಾಜ್ಯ ಸಚಿವ ಸಂಪುಟ ಸೇರಿ ಅತ್ಯಂತ ಪ್ರಮುಖವಾದ ಗೃಹ, ಮಾಹಿತಿ ತಂತ್ರಜ್ಞಾನ (IT), ಜೈವಿಕ ತಂತ್ರಜ್ಞಾನ (BT) ಹಾಗೂ ಇ-ಆಡಳಿತ (e-Governance) ಖಾತೆಗಳ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಕಲಬುರಗಿ ಜಿಲ್ಲೆ ಹಾಗೂ ಚಿತ್ತಾಪುರ ಹಿರಿಯ ಹಾಗೂ ಯುವ ಕಾಂಗ್ರೆಸ್ ಮುಖಂಡರು ಬೆಂಗಳೂರಿನಲ್ಲಿ ಭೇಟಿಯಾಗಿ ಆತ್ಮೀಯವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಪ್ರಮುಖ ಖಾತೆಗಳನ್ನು ಮುನ್ನಡೆಸಲಿರುವ ಸಚಿವರಿಗೆ ಜ್ಞಾನದ ಸಂಕೇತವಾದ ಬುದ್ಧನ ಮೂರ್ತಿ ಹಾಗೂ ಉದಾತ್ತ ವಿಚಾರಗಳ ಪುಸ್ತಕಗಳನ್ನು ನೀಡಿ ಗೌರವ ಪೂರ್ವಕವಾಗಿ ಹಾರ್ದಿಕ ಶುಭಾಶಯಗಳನ್ನು ಕೋರಲಾಯಿತು.

ಈ ಸಂದರ್ಭದಲ್ಲಿ ಚಿತ್ತಾಪುರ ಎಪಿಎಂಸಿ ಮಾಜಿ ಅಧ್ಯಕ್ಷರಾದ ಸಿದ್ದುಗೌಡ ಆಫಜಲಪೂರಕರ್, ಕಲಬುರಗಿ ಮಾಜಿ ಉಪ ಮಹಾಪೌರರಾದ ಮಹೇಶ ಹೊಸೂರಕರ್, ಕಲಬುರಗಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಅಶೋಕ ವೀರನಾಯಕ, ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾದ ಈರಣ್ಣ ಝಲಕಿ, ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಹುಲಿಗೆಪ್ಪ ಕನಕಗಿರಿ ಹಾಗೂ ಕಲಬುರಗಿ ಯೂತ್ ಕಾಂಗ್ರೆಸ್ ಮಾಜಿ ಜಿಲ್ಲಾ ಅಧ್ಯಕ್ಷರಾದ ಶಿವಾನಂದ ಹೋನಗುಂಟಿ ಸೇರಿದಂತೆ ಪ್ರಮುಖ ಮುಖಂಡರು ಉಪಸ್ಥಿತರಿದ್ದು ಸಚಿವರಿಗೆ ಯಶಸ್ವಿ ಆಡಳಿತ ನಡೆಸಲು ಶುಭ ಹಾರೈಸಿದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು