ಮೂರು ತಿಂಗಳಿಂದ ಬಾರದ ಮಾಶಾಸನ; ನೊಂದ ವಿಕಲಚೇತನ ಕುಟುಂಬಕ್ಕೆ ನೆರವಾದ ಚಂದ್ರಶೇಖರ ಕಾಶಿ.

ಚಿತ್ತಾಪುರ: ಪಟ್ಟಣದ ಖಾಜಿಪೂರ ಬಡಾವಣೆ ನಿವಾಸಿಯಾದ ಖಾಜಿ ನಿಜೀಮೋದ್ದಿನ್ (ಅಂಜುಮ್) ಅವರ ಕುಟುಂಬಕ್ಕೆ ಕಳೆದ ಮೂರು ತಿಂಗಳಿನಿಂದ ವಿಕಲಚೇತನರ ಮಾಶಾಸನ (ಪೆನ್ಷನ್) ಬಾರದೇ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿತ್ತು. ಈ ವಿಷಯ ತಿಳಿದು ತೀವ್ರ ಮನನೊಂದ ಮಾಜಿ ಪುರಸಭೆ ಅಧ್ಯಕ್ಷರಾದ ಚಂದ್ರಶೇಖರ ವಾಯ್ ಕಾಶಿ ಅವರು ತಕ್ಷಣವೇ ಆ ನೊಂದ ಕುಟುಂಬದ ನೆರವಿಗೆ ಧಾವಿಸಿದ್ದಾರೆ.

ಅಂಗವೈಕಲ್ಯ ಹಾಗೂ ಆರ್ಥಿಕ ಮುಗ್ಗಟ್ಟಿನಿಂದ ಕಂಗಾಲಾಗಿದ್ದ ಬಂದೇನವಾಜ್ ಅವರಿಗೆ ಚಂದ್ರಶೇಖರ ಕಾಶಿ ಅವರು ವೈಯಕ್ತಿಕವಾಗಿ 10,000 ರೂಪಾಯಿಗಳ ನಗದು ಧನಸಹಾಯವನ್ನು ಹಸ್ತಾಂತರಿಸಿದರು. ಸಂಕಷ್ಟದ ಸಮಯದಲ್ಲಿ ಆಸರೆಯಾದ ಮಾಜಿ ಪುರಸಭೆ ಅಧ್ಯಕ್ಷರ ಈ ಉದಾತ್ತ ಕಾರ್ಯಕ್ಕೆ ಚಿತ್ತಾಪುರ ಪಟ್ಟಣದ ಸಾರ್ವಜನಿಕ ವಲಯದಲ್ಲಿ ಹಾಗೂ ನೊಂದ ಕುಟುಂಬದಿಂದ ಅತ್ಯಂತ ಕೃತಜ್ಞತೆ ವ್ಯಕ್ತವಾಗಿದೆ.

  "ಕುಟುಂಬದ ಕಷ್ಟದ ಸ್ಥಿತಿಯನ್ನು ನೋಡಿ ಮನಸ್ಸಿಗೆ ತೀವ್ರ ಬೇಸರವಾಯಿತು. ಇಂತಹ ಸಂಕಷ್ಟದ ಸಮಯದಲ್ಲಿ ಪ್ರತಿಯೊಬ್ಬರೂ ಮಾನವೀಯತೆಯಿಂದ ಸ್ಪಂದಿಸಬೇಕಾದ್ದು ನಮ್ಮ ಕರ್ತವ್ಯ. ನನ್ನ ಕೈಲಾದ ಸಣ್ಣ ಸಹಾಯವನ್ನು ಈ ಕುಟುಂಬಕ್ಕೆ ನೀಡಿದ್ದೇನೆ." 

– ಚಂದ್ರಶೇಖರ ವಾಯ್. ಕಾಶಿ, ಮಾಜಿ ಪುರಸಭೆ ಅಧ್ಯಕ್ಷರು ಚಿತ್ತಾಪುರ.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು