ಜನತೆಯ ಸುದ್ದಿ ವಾಹಿನಿ

ಸೋಮವಾರ, ಜೂನ್ 1, 2026

ಶ್ರೀನಿವಾಸ್ ಸಾಗರ್ ಅವರಿಗೆ ಎಂ.ಎಲ್.ಸಿ ಸ್ಥಾನ ನೀಡಲು ಒತ್ತಾಯ.

​ಚಿತ್ತಾಪೂರ: ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಕಾಂಗ್ರೆಸ್ ಪಕ್ಷದ ತಳಮಟ್ಟದ ಬಲವರ್ಧನೆಗಾಗಿ ಯಾವುದೇ ಅಧಿಕಾರದ ಹಪಹಪಿಯಿಲ್ಲದೆ ನಿರಂತರವಾಗಿ ಶ್ರಮಿಸುತ್ತಾ ಬಂದಿರುವ ಹಿರಿಯ ಮುಖಂಡರಾದ ಶ್ರೀನಿವಾಸ್ ಸಾಗರ್ ಅವರಿಗೆ ಮುಂಬರುವ ವಿಧಾನ ಪರಿಷತ್ (MLC) ಚುನಾವಣೆಯಲ್ಲಿ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಬೇಕೆಂದು ಉಪ್ಪಾರ ಸಮಾಜ ಹಾಗೂ ಅವರ ಅಪಾರ ಬೆಂಬಲಿಗರು ಪಕ್ಷದ ಹೈಕಮಾಂಡ್ ಮತ್ತು ರಾಜ್ಯ ನಾಯಕರಲ್ಲಿ ಮನವಿ ಮಾಡಿದ್ದಾರೆ.

​ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಬಂದಿರುವ ಶ್ರೀನಿವಾಸ್ ಸಾಗರ್ ರಾವೂರ ಅವರು ಸಮಾಜದ ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಜನರ ಏಳಿಗೆಗಾಗಿ ಸತತವಾಗಿ ಹೋರಾಡುತ್ತಾ ಬಂದಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷದ ಸಂಘಟನೆಗೆ ಇವರು ನೀಡಿರುವ ಕೊಡುಗೆ ಅಪಾರವಾಗಿದೆ. ಹಿಂದುಳಿದ ವರ್ಗಗಳ ಪ್ರಮುಖ ಸಮುದಾಯವಾದ ಉಪ್ಪಾರ (ಪ್ರವರ್ಗ- 1) ಜಾತಿಗೆ ಸೇರಿರುವ ಇವರಿಗೆ ಈ ಬಾರಿ ವಿಧಾನ ಪರಿಷತ್ ಸ್ಥಾನ ನೀಡುವ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.

​​ಸುದೀರ್ಘ ರಾಜಕೀಯ ಮತ್ತು ಸಾಮಾಜಿಕ ಸೇವೆ:
ಶ್ರೀನಿವಾಸ್ ಜಗನ್ನಾಥಪ್ಪ ಸಾಗರ್ ಅವರು ಕಳೆದ 40 ವರ್ಷಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದು, ಅವರ ಪ್ರಮುಖ ಕಾರ್ಯಚಟುವಟಿಕೆಗಳಾದ ​ಸಾಮಾಜಿಕ ನಾಯಕತ್ವ: 1980 ರಿಂದ ಕಲಬುರಗಿ ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷರಾಗಿ ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
​ಸ್ಥಳೀಯ ಸಂಸ್ಥೆಗಳ ಸೇವೆ: 1981 ರಲ್ಲಿ ರಾವೂರ್ ಗ್ರಾಮದ ವಿ.ಎಸ್.ಎಸ್.ಎಸ್.ಎನ್ ಸಹಕಾರ ಸಂಘಕ್ಕೆ ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ತದನಂತರ 1987 ರಿಂದ 1992 ರವರೆಗೆ ರಾವೂರ್ ಮಂಡಲ ಪಂಚಾಯತ್ ಸದಸ್ಯರಾಗಿ ಕಾಂಗ್ರೆಸ್ ಪಕ್ಷದಿಂದ ಸೇವೆ ಸಲ್ಲಿಸಿದ್ದಾರೆ. 1995 ರಲ್ಲಿ ರಾವೂರ್ ಕ್ಷೇತ್ರದಿಂದ ಚಿತ್ತಾಪುರ ತಾಲೂಕು ಪಂಚಾಯತ್ ಸಮಿತಿ ಸದಸ್ಯರಾಗಿ ಚುನಾಯಿತರಾಗಿದ್ದರು. ​ಕೃಷಿ ಮತ್ತು ಕಾರ್ಮಿಕರ ಪರ ಹೋರಾಟ: 1993 ರಲ್ಲಿ ಚಿತ್ತಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸದಸ್ಯರಾಗಿ ಮತ್ತು 1984 ರಲ್ಲಿ ವಾಡಿ ಸಿಮೆಂಟ್ ಕಾರ್ಖಾನೆಯ ಭೂ ಸಂತ್ರಸ್ತರ ಪುನರ್ವಸತಿ ಸಂಘದ ಉಪಾಧ್ಯಕ್ಷರಾಗಿ ಭೂಮಿ ಕಳೆದುಕೊಂಡ ನೂರಾರು ಸ್ಥಳೀಯ ನಿವಾಸಿಗಳಿಗೆ ಉದ್ಯೋಗ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.

​ಪಕ್ಷದ ಸಂಘಟನೆ: 1983-1990 ರವರೆಗೆ ಚಿತ್ತಾಪುರ ತಾಲೂಕು ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ, 1991-1995 ರವರೆಗೆ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ ಹಾಗೂ 1995-2000 ರವರೆಗೆ ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಪಕ್ಷದ ಬಲವರ್ಧನೆಗೆ ಶ್ರಮಿಸಿದ್ದಾರೆ.

​ರಾಜ್ಯ ಮತ್ತು ರಾಷ್ಟ್ರ ಮಟ್ಟದ ಜವಾಬ್ದಾರಿಗಳು: 1993 ರಲ್ಲಿ ಕರ್ನಾಟಕ ರಾಜ್ಯ ಆಗ್ರೋ ಇಂಡಸ್ಟ್ರೀಸ್ ಕಾರ್ಪೊರೇಶನ್‌ನ ನಾಮನಿರ್ದೇಶಿತ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.​2005 ರಿಂದ 2008 ರವರೆಗೆ ಮತ್ತು ಪ್ರಸ್ತುತ 2022 ರಿಂದ ಕೆ.ಪಿ.ಸಿ.ಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ) ಸದಸ್ಯರಾಗಿ ಸಕ್ರಿಯರಾಗಿದ್ದಾರೆ.​2011 ರಲ್ಲಿ ಸಿಕಂದರಾಬಾದ್‌ನ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ (Z.R.U.C.C) ಸದಸ್ಯರಾಗಿ ಮತ್ತು 2013 ರಿಂದ 2014 ರವರೆಗೆ ನವದೆಹಲಿಯ ರೈಲ್ವೆ ಬೋರ್ಡ್ ಪಿಎಸ್‍ಸಿ (ಪ್ರಯಾಣಿಕರ ಸೇವಾ ಸಮಿತಿ) ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

​"ಅವರು ಇಡೀ ಜೀವನವನ್ನು ಕಾಂಗ್ರೆಸ್ ಪಕ್ಷದ ಏಳಿಗೆಗಾಗಿ ಮುಡಿಪಾಗಿಟ್ಟಿದ್ದಾರೆ. ಪಕ್ಷವು ಅವರ ನಿಷ್ಠೆ ಮತ್ತು ಸುದೀರ್ಘ ಸೇವೆಯನ್ನು ಗುರುತಿಸಿ ವಿಧಾನ ಪರಿಷತ್ ಸದಸ್ಯರನ್ನಾಗಿ (MLC) ನಾಮನಿರ್ದೇಶನ ಮಾಡಿದರೆ, ಕಲ್ಯಾಣ ಕರ್ನಾಟಕ ಭಾಗದ ಜನರ ಧ್ವನಿಯಾಗಿ ಮತ್ತು ಪಕ್ಷದ ಬಲವರ್ಧನೆಗೆ ಇನ್ನಷ್ಟು ಶಕ್ತಿಮೀರಿ ಶ್ರಮಿಸಲು ಸಾಧ್ಯವಾಗುತ್ತದೆ.

-ಜಾಫರ್ ಮೀಯಾ
ಕಾಂಗ್ರೆಸ್ ಮುಖಂಡರು ರಾವೂರ.
 
​ಪ್ರಾದೇಶಿಕ ಸಮತೋಲನ ಮತ್ತು ಹಿಂದುಳಿದ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರು ಇವರ ಹೆಸರನ್ನು ಪರಿಗಣಿಸಬೇಕೆಂದು ಈ ಭಾಗದ ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರು ಪ್ರಬಲವಾಗಿ ಆಗ್ರಹಿಸಿದ್ದಾರೆ.

-ಆನಂದ ಯರಗಲ್
ಕಾಂಗ್ರೆಸ್ಶಯುವ ಮುಖಂಡರು ಚಿತ್ತಾಪೂರ 

ಹಿಂದುಳಿದವರು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಪರವಾಗಿ ಅವರು ನಿರಂತರವಾಗಿ ಧ್ವನಿ ಎತ್ತುತ್ತಾ ಬಂದಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಅವರ ಕೊಡುಗೆ ಅಪಾರವಾಗಿದೆ. ಇಂತಹ ನಿಷ್ಠಾವಂತ ಮತ್ತು ಹಿರಿಯ ನಾಯಕರಿಗೆ ವಿಧಾನ ಪರಿಷತ್‌ನಲ್ಲಿ ಪ್ರಾತಿನಿಧ್ಯ ನೀಡುವುದು ನ್ಯಾಯ ಸಮ್ಮತವಾಗಿದೆ 

- ಯುನೂಸ್ ಪ್ಯಾರೆ,
ಕಾಂಗ್ರೆಸ್ ಮುಖಂಡರು ರಾವೂರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಹುದ್ದೆ ನೀಡಲು ಆನಂದ್ ಯರಗಲ್ ಆಗ್ರಹ

  ಚಿತ್ತಾಪುರ: ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ಅತ್ಯುತ್ತಮ ಆಡಳಿತ ನೀಡುತ್ತಿರುವ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ (ಡಿಸಿಎ...