ವಿಜೃಂಭಣೆಯಿಂದ ಜರುಗಿದ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ನುಲಿಯ ಚಂದಯ್ಯ ಜಯಂತಿ

ಚಿತ್ತಾಪುರ: ಪಟ್ಟಣದ ಪ್ರಜಾ ಸೌಧದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಕಾಯಕಯೋಗಿ ನುಲಿಯ ಚಂದಯ್ಯ ಅವರ ಜಯಂತಿಯನ್ನು ಶ್ರದ್ಧಾ-ಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿ ಮಹಾಪುರುಷರ ತತ್ವ-ಸಿದ್ಧಾಂತಗಳು ಹಾಗೂ ವಚನ ಚಳುವಳಿಯ ಕಾಯಕ ನಿಷ್ಠೆ ಪ್ರತಿಯೊಬ್ಬರಿಗೂ ದಾರಿದೀಪವಾಗಬೇಕು ಎಂದು ಹೇಳಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ಸಮುದಾಯದ ಪರವಾಗಿ ಸಮಾಜದ ಅಧ್ಯಕ್ಷರಾದ ಶಂಕರಗೌಡ ರಾವೂರಕರ ಹಾಗೂ ಪ್ರಮುಖ ಮುಖಂಡರಾದ ವಿನೋದ ಗುತ್ತೇದಾರ, ಶಾಮಸುಂದರಗೌಡ ಮುಕ್ತೇದಾರ, ನರಸಯ್ಯ, ದೇವಿಂದ್ರಪ್ಪ ಮಾಸ್ಟರ್‌, ಹಣಪಯ್ಯ ಲಾಡ್ಲಾಪೂರ, ಸಿದ್ದಯ್ಯ ಸೂಲಹಳ್ಳಿ, ನರಸಯ್ಯ ಕರದಳ್ಳಿ, ಸುರೇಶ ಗುತ್ತೇದಾರ ಕರದಳ್ಳಿ, ರಾಜೇಶ ಗುತ್ತೇದಾರ ನಾಲವಾರ, ಪಂಕಜ ಗೌಡ, ಅಂಬ್ರೇಶ ಮರಗೋಳ, ಉಮೇಶ ಕುಕುಂಬಿ, ಅಂತಯ್ಯ ಮುಸ್ತಾಜರ, ಮೋನಯ್ಯ ಮುಸ್ತಾಜರ, ಯಗೇಶ ಗುತ್ತೇದಾರ, ಆನಂದ ಗುತ್ತೇದಾರ, ಕಾಶಿರಾಯ ಮಾಸ್ಟರ್‌ ಮತ್ತು ದಸ್ತಯ್ಯ ಯರಗಲ್‌ ಉಪಸ್ಥಿತರಿದ್ದರು.

ಹಾಗೆಯೇ ನುಲಿಯ ಚಂದಯ್ಯನವರ ಸಮುದಾಯದ ಪರವಾಗಿ ಸಮಾಜದ ಮಾಜಿ ಅಧ್ಯಕ್ಷರಾದ ಮಲ್ಲು ಮಾಸ್ಟರ್‌, ಶಿವು ಭಜಂತ್ರಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಶಾಂತಾ ಭಜಂತ್ರಿ, ಸಿದ್ರಾಮ ಭೈರಿ, ಮುರಗೇಂದ್ರ ಭಜಂತ್ರಿ ಅಲ್ಲೂರ, ಜಗದೀಶ ಜಾಧವ ವಾಡಿ, ಶಂಕರ ಭಜಂತ್ರಿ, ಸತೀಶ ಭಜಂತ್ರಿ, ರವಿಶಂಕರ ಭೈರಿ, ಸಾಬಣ್ಣ ಭಜಂತ್ರಿ ಹಾಗೂ ರಾಜು ಭಜಂತ್ರಿ ಭಾಗವಹಿಸಿದ್ದರು.

ಉಪ ಖಜಾನಾಧಿಕಾರಿ ಸೈಯದ ನಸೀರ್‌ ಹಶ್ಮಿ, ಉಪ ನೋಂದಣಾಧಿಕಾರಿ ಆನಂದರಾವ್‌ ಕುಲಕರ್ಣಿ, ಸರ್ವೆ ಇಲಾಖೆಯ ಪ್ರಸನ್ನ ದೇಶಪಾಂಡೆ, ಕಾರ್ಮಿಕ ನಿರೀಕ್ಷಕರು, ವಿವಿಧ ಇಲಾಖೆಗಳ ಅಧಿಕಾರಿಗಳು, ತಹಸೀಲ್ ಕಚೇರಿಯ ಶಿರಸ್ತೇದಾರರು ಹಾಗೂ ಸಿಬ್ಬಂದಿವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು