ವಿಜೃಂಭಣೆಯ ಗಣೇಶ ಉತ್ಸವ: 53 ಸಾವಿರ ರೂ.ಗೆ ಶ್ರೀಶಕ್ತಿ ವಿನಾಯಕನ ಲಡ್ಡು ಹರಾಜು

ಚಿತ್ತಾಪುರ: ಪಟ್ಟಣದ ಇಂದಿರಾನಗರದಲ್ಲಿ ಶ್ರೀಶಕ್ತಿ ವಿನಾಯಕ ಯುವಕರ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 11 ದಿನಗಳ ಗಣೇಶ ಉತ್ಸವ ಕಾರ್ಯಕ್ರಮವು ಅತ್ಯಂತ ವಿಜೃಂಭಣೆ ಹಾಗೂ ಅದ್ಧೂರಿಯಾಗಿ ನೆರವೇರಿತು.

ಉತ್ಸವದ ಕೊನೆಯ ದಿನದಂದು ಸಾರ್ವಜನಿಕ ಸನ್ಮಾನ ಹಾಗೂ ವಿಶೇಷ ಆಕರ್ಷಣೆಯಾಗಿದ್ದ ಗಣೇಶನ ಪ್ರಸಾದದ ಲಡ್ಡು ಹರಾಜು ಪ್ರಕ್ರಿಯೆ ನಡೆಯಿತು. ಈ ಜಿದ್ದಾಜಿದ್ದಿನ ಹರಾಜಿನಲ್ಲಿ ಭಕ್ತರಾದ ನಾಗು ಕೊಲ್ಲೂರ ಎಂಬುವರು ಬರೋಬ್ಬರಿ 53 ಸಾವಿರ ರೂಪಾಯಿಗಳಿಗೆ ಲಡ್ಡನ್ನು ತಮ್ಮದಾಗಿಸಿಕೊಂಡರು.

ಈ ಶುಭ ಸಂದರ್ಭದಲ್ಲಿ ಮಂಡಳಿಯ ವತಿಯಿಂದ ಲಡ್ಡು ಹರಾಜಿನಲ್ಲಿ ಪಾಲ್ಗೊಂಡು ಸಫಲರಾದ ನಾಗು ಕೊಲ್ಲೂರ ಹಾಗೂ ಅವರ ಕುಟುಂಬದವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಶಕ್ತಿ ವಿನಾಯಕ ಯುವಕರ ಮಂಡಳಿಯ ಅಧ್ಯಕ್ಷರಾದ ಅಂಬರೀಷ ಟೇಲರ್ ಭೋವಿ, ಉಪಾಧ್ಯಕ್ಷ ಗೌತಮ ಪಾಮನೂರ, ಮಂಡಳಿಯ ಪ್ರಮುಖ ಸದಸ್ಯರಾದ ಅಂಬರೀಷ ಎದುರಮನಿ, ರಾಜು ಭಜಂತ್ರಿ, ನಾಗರಾಜ ಕೊಡದೂರಕರ್, ಅಯೂಬ್ ಸೇರಿದಂತೆ ಮಂಡಳಿಯ ಎಲ್ಲಾ ಪದಾಧಿಕಾರಿಗಳು, ಸ್ಥಳೀಯ ಯುವಕರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದು, ಉತ್ಸವದ ಯಶಸ್ಸಿಗೆ ಕಾರಣರಾದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم