ಸಂಗಣ್ಣಗೌಡ ಪ್ಯಾನಲ್‌ಗೆ ಭರ್ಜರಿ ಜಯ – 'ಶಿಕ್ಷಕ ಸ್ನೇಹಿ' ಪ್ಯಾನಲ್‌ಗೆ ತೀವ್ರ ಮುಖಭಂಗ

ಚಿತ್ತಾಪುರ: ಕರ್ನಾಟಕ ರಾಜ್ಯ (6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ ತಾಲೂಕು ಘಟಕ ಇದರ 2026–2031 ನೇ ಸಾಲಿನ ನಿರ್ದೇಶಕರ ಸ್ಥಾನಗಳಿಗೆ ರವಿವಾರ ನಡೆದ ಚುನಾವಣೆಯಲ್ಲಿ ಸಂಗಣ್ಣಗೌಡ ನೇತೃತ್ವದ ಪ್ಯಾನಲ್ ಅಭೂತಪೂರ್ವ ಜಯಭೇರಿ ಬಾರಿಸಿದೆ. ತೀವ್ರ ಕುತೂಹಲ ಕೆರಳಿಸಿದ್ದ ಈ ಚುನಾವಣೆಯಲ್ಲಿ ಎದುರಾಳಿ 'ಶಿಕ್ಷಕ ಸ್ನೇಹಿ ಪ್ಯಾನಲ್' ತೀವ್ರ ಮುಖಭಂಗ ಅನುಭವಿಸಿದೆ.

ಈ ಚುನಾವಣೆಯಲ್ಲಿ ಒಟ್ಟು 124 ಮತದಾರರಿದ್ದು, ಈ ಪೈಕಿ 123 ಮತಗಳು ಚಲಾವಣೆಯಾಗಿದ್ದವು. ಚಲಾವಣೆಯಾದ ಮತಗಳಲ್ಲಿ 1 ಮತ ಅಸಿಂಧುಗೊಂಡಿದ್ದು, ಉಳಿದ ಮತಗಳ ಎಣಿಕೆ ಕಾರ್ಯ ಶಾಂತಿಯುತವಾಗಿ ನಡೆಯಿತು. ಇಡೀ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಕಿಶನ್ ರಾಠೋಡ್ ಅತ್ಯಂತ ಪಾರದರ್ಶಕ ಹಾಗೂ ದಕ್ಷತೆಯಿಂದ ನಡೆಸಿ ಫಲಿತಾಂಶ ಪ್ರಕಟಿಸಿದರು.

ತಾಲೂಕಿನ ವಿವಿಧ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಟ್ಟು 12 ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.   ಸಂಗಣ್ಣಗೌಡ (ಸ. ಹಿರಿಯ ಪ್ರಾಥಮಿಕ ಶಾಲೆ, ಇಂಗಳಗಿ) - 79 ಮತಗಳು (ಸಾಮಾನ್ಯ ಮೀಸಲಾತಿ) - ಅತ್ಯಧಿಕ ಮತ ಪಡೆದ ಅಭ್ಯರ್ಥಿ ಈರಫಾನ (ಸ. ಹಿರಿಯ ಪ್ರಾಥಮಿಕ ಶಾಲೆ, ಸಂಕನೂರು) - 72 ಮತಗಳು, ಸುರೇಶ (ಸ. ಹಿರಿಯ ಪ್ರಾಥಮಿಕ ಶಾಲೆ, ರಾಮತೀರ್ಥ) - 75 ಮತಗಳು, ಗೀತಾ (ಸ. ಹಿರಿಯ ಪ್ರಾಥಮಿಕ ಶಾಲೆ, ದಿಗಾಂವ) - 75 ಮತಗಳು (ಮಹಿಳಾ ಮೀಸಲಾತಿ), ಸಂತೋಷ ಬಿ. ಸನ್ಮುಖಿ (ಸ. ಹಿರಿಯ ಪ್ರಾಥಮಿಕ ಶಾಲೆ, ಕುಲಕುಂದಾ) - 70 ಮತಗಳು, ಅಮರನಾಥ (ಸ. ಹಿರಿಯ ಪ್ರಾಥಮಿಕ ಶಾಲೆ, ಕರದಾಳ) - 67 ಮತಗಳು, ಪವನಕುಮಾರ ಕೆ. (ಸ. ಹಿರಿಯ ಪ್ರಾಥಮಿಕ ಶಾಲೆ, ಕುಂಬಾರಹಳ್ಳಿ) - 65 ಮತಗಳು, ದೀಪಿಕಾ (ಸ. ಹಿರಿಯ ಪ್ರಾಥಮಿಕ ಶಾಲೆ, ಕಮರವಾಡಿ) - 64 ಮತಗಳು, ಸಿದ್ಧಣ್ಣ (ಸ. ಹಿರಿಯ ಪ್ರಾಥಮಿಕ ಶಾಲೆ, ದಂಡಗುಂಡ) - 63 ಮತಗಳು

ಈ ಬಾರಿಯ ಚುನಾವಣೆಯಲ್ಲಿ 'ಶಿಕ್ಷಕ ಸ್ನೇಹಿ ಪ್ಯಾನಲ್'ನಿಂದ ಕೇವಲ ಮೂರು ಜನ ಅಭ್ಯರ್ಥಿಗಳು ಮಾತ್ರ ಗೆಲುವಿನ ನಗೆ ಬೀರಲು ಸಾಧ್ಯವಾಯಿತು, ಸಾಬಣ್ಣ (ಸ. ಹಿರಿಯ ಪ್ರಾಥಮಿಕ ಶಾಲೆ, ಆಲೂರು ಬಿ) - 75 ಮತಗಳು, ಅಂಬಣ್ಣ (ಸ. ಹಿರಿಯ ಪ್ರಾಥಮಿಕ ಶಾಲೆ, ಆಲೂರು ಕೆ) - 70 ಮತಗಳು, ಮರೆಮ್ಮ (ಸ. ಹಿರಿಯ ಪ್ರಾಥಮಿಕ ಶಾಲೆ, ಕೊಳ್ಳೂರು) - 62 ಮತಗಳು

ಬಹುತೇಕ ಸ್ಥಾನಗಳನ್ನು ಸಂಗಣ್ಣಗೌಡ ಪ್ಯಾನಲ್ ವಶಪಡಿಸಿಕೊಳ್ಳುವ ಮೂಲಕ ಸಂಘದ ಮೇಲಿನ ತನ್ನ ಸ್ಪಷ್ಟ ಮೇಲುಗೈಯನ್ನು ಸಾಧಿಸಿದೆ. ಜಯಗಳಿಸಿದ ಎಲ್ಲಾ ನೂತನ ನಿರ್ದೇಶಕರಿಗೆ ಶಿಕ್ಷಕ ವೃಂದ ಹಾಗೂ ಅಭಿಮಾನಿಗಳು ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم