ನಾಳೆ ಧಮ್ಮ ಜನಜಾಗೃತಿ ಯಾತ್ರೆ: ಭವ್ಯ ಸ್ವಾಗತ ಹಾಗೂ ಬೈಕ್ ರ್ಯಾಲಿ.

ಚಿತ್ತಾಪುರ: ರಾಜ್ಯಾದ್ಯಂತ ಸಂಚರಿಸಿರುವ 70ನೇ ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆಯು ಅಕ್ಟೋಬರ್ 31ರಂದು ಪಟ್ಟಣಕ್ಕೆ ಆಗಮಿಸುತ್ತಿದ್ದು, ಯಾತ್ರೆಗೆ ಭವ್ಯ ಸ್ವಾಗತ ಕೋರಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮುಖಂಡ ಶ್ರೀಕಾಂತ್ ಶಿಂಧೆ ತಿಳಿಸಿದ್ದಾರೆ.

ನಾಳೆ ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಯರಗಲ್ ಕ್ರಾಸ್‌ನಿಂದ ಈ ಧಮ್ಮ ಜನಜಾಗೃತಿ ಯಾತ್ರೆ ಹಾಗೂ ಭವ್ಯ ಬೈಕ್ ರ್ಯಾಲಿ ಪ್ರಾರಂಭವಾಗಲಿದೆ. ಯರಗಲ್ ಕ್ರಾಸ್‌ನಿಂದ ಹೊರಡುವ ಈ ಬೈಕ್ ರಾಲಿಯು ಹೋಳಿಕಟ್ಟಾ, ಕಪಡಾ ಬಜಾರ್, ಜನತಾ ಚೌಕ್, ಭುವನೇಶ್ವರಿ ವೃತ್ತ (ಚೌಕ್), ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ (ಸಕಲ್) ಮೂಲಕ ಸಾಗಿ ಅಂಬೇಡ್ಕರ್ ನಗರವನ್ನು ತಲುಪಲಿದೆ. ನಂತರ ಮಧ್ಯಾಹ್ನ 2 ಗಂಟೆಗೆ ಅಂಬೇಡ್ಕರ್ ನಗರದಲ್ಲಿ ಯಾತ್ರೆಯ ಸಮಾರೋಪ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.

ಎಲ್ಲಾ ಬೌದ್ಧ ಬಾಂಧವರು, ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನಿಗಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಧಮ್ಮ ಕ್ರಾಂತಿ ಯಾತ್ರೆಯನ್ನು ಯಶಸ್ವಿಗೊಳಿಸಬೇಕಾಗಿ ಮುಖಂಡರು ಮನವಿ ಮಾಡಿದ್ದಾರೆ.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم