ಬುಧವಾರ, ಫೆಬ್ರವರಿ 19, 2025

ಶಿವಾಜಿ ಪ್ರಬುದ್ಧ ಆಡಳಿತಗಾರ: ಕಂಬಳೇಶ್ವರ ಶ್ರೀ.


ಚಿತ್ತಾಪುರ: ಶಿವಾಜಿ ಮಹಾರಾಜರು ಅತ್ಯುತ್ತಮ ನಾಯಕತ್ವ, ಆಡಳಿತ ತಂತ್ರಗಳು ಮತ್ತು ಪ್ರಬುದ್ಧ ಆಡಳಿತಗಾರನಾಗಿದ್ದರು ಎಂದು ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ಹೇಳಿದರು.

ಪಟ್ಟಣದ ಭುವನೇಶ್ವರಿ ವೃತ್ತದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತ್ಯೋತ್ಸವ ನಿಮಿತ್ಯ ಶಿವಾಜಿ ಮೂರ್ತಿಗೆ ಶ್ರೀಗಳು ಪೂಜೆ ಸಲ್ಲಿಸಿ ಮಾತನಾಡಿದ ಅವರು ಅವರ ಆಳ್ವಿಕೆಯ ಅವಧಿಯು ಆಡಳಿತ ಮತ್ತು ನ್ಯಾಯಾಲಯ ವಲಯಗಳಲ್ಲಿ ಪರ್ಷಿಯನ್ ಭಾಷೆಗಿಂತ ಮರಾಠಿ ಮತ್ತು ಸಂಸ್ಕೃತಕ್ಕೆ ಆದ್ಯತೆ ನೀಡುವ ಮೂಲಕ ಗುರುತಿಸಲ್ಪಟ್ಟಿತು, ಇದು ಅವರ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಸೂಚಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಅನಿಲ್ ಯಂಡೆ, ಮುಖಂಡರಾದ ರೋಹಿತ್ ಚವ್ಹಾಣ್, ರೋಹಿತ್ ಯಂಡೆ, ಸಂತೋಷ ಗವಳಕರ್, ಆಕಾಶ್ ಸುಗಂಧಿ, ರಾಘವೇಂದ್ರ ಮೋಹಿತೆ, ಸಂಜು ಸೂರ್ಯವಂಶಿ, ಗುರು ಉಪ್ಪಾರ್, ನವೀನ್ ಚವ್ಹಾಣ್, ಅನುಪ್ ಉಬಾಳೆ, ಬಂಟ್ಟಿ ಹರಳೆ, ಸುನೀಲ್ ಯಂಡೆ, ನಿತೇಶ ಸುಗಂಧಿ, ಅನೀಲ್ ಚಪಟ್ಲೆ, ಅಂಬಣ್ಣ ಹೋಳಿಕಟ್ಟಿ, ಸಾಬಣ್ಣ ಹೋಳಿಕಟ್ಟಿ,
ಮಲ್ಲಿಕಾರ್ಜುನ ಅಲ್ಲೂರಕರ್, ಮೇಘರಾಜ ಗುತ್ತೇದಾರ್, ನರಹರಿ ಕುಲ್ಕರ್ಣಿ, ಮಹೇಶ್ ಸುಗಂಧಿ, ಪ್ರಶಾಂತ್ ಶಿಂದೆ,ರಾಜೇಶ ಹೋಳಿಕಟ್ಟಿ, ಹರ್ಷ ಸೂರ್ಯವಂಶಿ ಸೇರಿದಂತೆ ಪಿಎಸ್‌ಐ ಚಂದ್ರಾಮಪ್ಪ, ದತ್ತು ಜಾನೆ, ಸವಿಕುಮಾರ, ಇತರರು ಇದ್ದರು.

ಬುಧವಾರ, ಫೆಬ್ರವರಿ 12, 2025

ಸಂಘಟನೆಗೆ ಯುವಕರ ಪಾತ್ರ ಮುಖ್ಯ: ಬ್ಲಾಕ್ ಅಧ್ಯಕ್ಷ.

ಚಿತ್ತಾಪುರ: ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಯುವ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯುವಕರು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷದ ಕಡೆ ಮುಖ ಮಾಡಲು ಕಾಂಗ್ರೇಸ್ ಯುವ ಘಟಕ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಅದರ ಜೊತೆಗೆ ಯುವಕರಲ್ಲಿ ಏನೇ ವೈ ಮನಸುಗಳಿದ್ದಲ್ಲಿ ಯುವಕರು ಸರಿಪಡಿಸಿಕೊಂಡು ಪಕ್ಷದ ಸಿದ್ಧಾಂತದ ಅಡಿಯಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷದ ಕೆಲಸ ಮಾಡಬೇಕೆಂದು ಹೇಳಿದರು.

ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಮಾತನಾಡಿ
ಹಿಂದಿನ ಕಾಂಗ್ರೆಸ್ ಯುವ ಘಟಕ ಅಧ್ಯಕ್ಷ ಸಂಜು ಬೂಳ್ಕರ್ ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದರು ಅದೇ ರೀತಿ ನೂತನ ಅಧ್ಯಕ್ಷರು ಸಹ ಸಕ್ರಿಯವಾಗಿ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡುವುದರ ಜೊತೆಗೆ ಯುವಕರಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ತಿಳಿಸುವಂತಹ ಕೆಲಸಗಳು ಆಗಲಿ ಹೇಳಿದರು.

ಪಕ್ಷದಲ್ಲಿನ ನನ್ನ ಸೇವೆಯನ್ನು ಗುರುತಿಸಿ ನನಗೆ ನೂತನ ತಾಲೂಕು ಯುವ ಘಟಕ ಅಧ್ಯಕ್ಷ ಸ್ಥಾನ ಸಿಕ್ಕಿದ್ದು ಸಂತೋಷವಾಗಿದೆ, ಇನ್ನು ಹೆಚ್ಚಿನ ರೀತಿಯಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳ ಅಡಿಯಲ್ಲಿ ಯುವ ಘಟಕ ಸಂಘಟನೆ ಸಲುವಾಗಿ ಸಕ್ರಿಯವಾಗಿ ನಾನು ಪಕ್ಷದಲ್ಲಿ ಸೇವೆ ಸಲ್ಲಿಸುವುದಾಗಿ ತಿಳಿಸಿ, ಹಿರಿಯರ ಮಾರ್ಗದರ್ಶನ ನನ್ನ ಮೇಲೆ ಇರಲಿ ಎಂದು ಹೇಳಿದರು.

- ದೇವೇಂದ್ರ ಯಾಬಾಳ್ 
ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಚಿತ್ತಾಪುರ.

ಪ್ರಾಸ್ತಾವಿಕವಾಗಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಕ್ತರ್ ಪಾಟೀಲ್ ಮಾತನಾಡಿದರು ಈ ಸಂದರ್ಭದಲ್ಲಿ ಮಾಜಿ ಪುರಸಭೆ ಅಧ್ಯಕ್ಷ ಹಾಲಿ ಸದಸ್ಯ ಚಂದ್ರಶೇಖರ ಕಾಶಿ, ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮಲ್ಲಿಕಾರ್ಜುನ ಕಾಳಗಿ, ಮುಖಂಡರಾದ ಗೋಪಸೇನ, ಶರಣು ಡೋಣಗಾಂವ್ , ಸಂಜು ಬುಳಕರ್, ಬಸವರಾಜ ಚಿನ್ನಮಳ್ಳಿ, ಸಾಬಣ್ಣ ಡಿಗ್ಗಿ, ನಾಜಿರ ಅಡಕಿ, ರಾಮಲಿಂಗ ಬಾನರ್, ಹಣಮಂತ ಸಂಕನೂರ, ನಿಂಗಣ್ಣ ಹೆಗಲೇರಿ, ಸೇರಿದಂತೆ ಇತರರು ಇದ್ದರು.

ಭಾನುವಾರ, ಫೆಬ್ರವರಿ 9, 2025

ಪ್ರಯಾಗರಾಜ್ ಪವಿತ್ರ ತೀರ್ಥಸ್ಥಳ: ಕಂಬಳೇಶ್ವರ ಶ್ರೀ.

ಚಿತ್ತಾಪುರ: ಸಮುದ್ರ ಮಂಥನದ ಸಮಯದಲ್ಲಿ ಭಗವಾನ್ ವಿಷ್ಣು ಮೋಹಿನಿಯ ವೇಷದಲ್ಲಿ ಅಮೃತದ ಪಾತ್ರೆಯನ್ನು ಹೊತ್ತೊಯ್ದಾಗ, ದೇವತೆಗಳು ಮತ್ತು ದಾನವರ ನಡುವಿನ ಹೋರಾಟದಲ್ಲಿ ಅಮೃತದ ನಾಲ್ಕು ಹನಿಯು ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿಯಲ್ಲಿ ಬಿದ್ದಿತು ಹೀಗೆ ಮೂರು ಪವಿತ್ರ ತೀರ್ಥಸ್ಥಳ ಜೊತೆಗೆ ಪ್ರಯಾಗರಾಜ್ ಕೂಡ ಒಂದು ಪವಿತ್ರ ತೀರ್ಥಸ್ಥಳವಾಗಿದೆ ಎಂದು ಕಂಬಳೇಶ್ವರ ಮಠ ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು.

ಪಟ್ಟಣದಿಂದ ಪ್ರಯಾಗರಾಜ್ ಕುಂಭಮೇಳಕ್ಕೆ ಹೊರಟ ಭಕ್ತರ ವಾಹನಕ್ಕೆ ವರುಣನಗರದ ಶರಣ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಎರಡು ಬಸ್ ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಪ್ರಯಾಗರಾಜ್‌ದಲ್ಲಿ ಜನವರಿ 13 ರಿಂದ ಪ್ರಾರಂಭವಾಗಿ ಫೆಬ್ರವರಿ 26 ರವರೆಗೆ ಮಹಾಕುಂಭಮೇಳ ನಡೆಯುತ್ತಿದ್ದು 144 ವರ್ಷಗಳ ಬಳಿಕ ಈ ಕುಂಭಮೇಳ ನಡೆಯುತ್ತಿದೆ ಎಂದರು. 
ಹಿಂದೂ ಪುರಾಣಗಳ ಪ್ರಕಾರ ಕುಂಭಮೇಳದಲ್ಲಿ ದೇವರುಗಳು ಭೂಮಿಗೆ ಇಳಿದು ಭಕ್ತರನ್ನು ಆಶೀರ್ವದಿಸುತ್ತಾರೆ ಎಂದು ನಂಬಲಾಗಿದೆ ಜೊತೆಗೆ ಪ್ರಯಾಗರಾಜ್‌ ಈ ಸ್ಥಳದಲ್ಲಿ ಹರಿಯುವ ನದಿಯಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ನಾಗರಾಜ್ ಸಾಹುಕಾರ ಬಂಕಲಗಿ ಮಾತನಾಡಿ ಮಹಾಕುಂಭ ಮೇಳ ಕೇವಲ ಉತ್ಸವ ಮಾತ್ರವಲ್ಲ ಸಾವಿರಾರು ವರ್ಷಗಳ ಐತಿಹ್ಯ, ಪುರಾತನ ಇತಿಹಾಸ ಹೊಂದಿರುವ ಉತ್ಸಾಹಭರಿತ ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ. ಈ ಉತ್ಸವವು ಪ್ರಾಚೀನ ಹಿಂದೂ ಪುರಾಣ ಮತ್ತು ಭಾರತದ ಶ್ರೀಮಂತ ಧಾರ್ಮಿಕ ಪರಂಪರೆಗೆ ಸಾಕ್ಷಿಯಾಗಿದೆ. ಚಿತ್ತಾಪುರದಿಂದ ಪ್ರಯಾಗರಾಜ್, ಅಯೋಧ್ಯ, ಕಾಶಿ, ಮತ್ತು ಗೋರಕಪೂರ ವರೆಗೆ ಎರಡು ಬಸ್ ವ್ಯವಸ್ಥೆ ಮೂಲಕ 60ಕ್ಕೂ ಅಧಿಕ ಭಕ್ತರು ಹೋಗುತ್ತಿದ್ದೇವೆ ಎಂದು ಹೇಳಿದರು.
ಇದೆ ವೇಳೆ ಕಲ್ಬುರ್ಗಿ ಘಟಕ-1ರ ವ್ಯವಸ್ಥಾಪಕ ಅಶೋಕ್ ದೊಡ್ಮನಿ, ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಸಯ್ಯದ್ ನಿಜ್ಮೊ ದಿನ್ ಚಿಸ್ತಿ, ರವರಿಗೆ ಭಕ್ತರು ಧನ್ಯವಾದಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಭಕ್ತರಾದ ಮಲ್ಲಿಕಾರ್ಜುನ ಪೂಜಾರಿ, ಶಾಂತಕುಮಾರ್ ಹತ್ತಿ, ಅನಿಲ್ ವಟ್ಟಡಗಿ, ಸಂತೋಷ ಕಲಾಲ್, ಬಸವರಾಜ ಬೊಮ್ಮನಳ್ಳಿ, ಅಶ್ವಥ್ ರಾಠೋಡ, ರಮೇಶ್ ಬೊಮ್ಮನಳ್ಳಿ, ಪಂಕಜಗೌಡ, ಚಂದ್ರು ಅಲ್ಲೂರ, ಮಲ್ಲಿಕಾರ್ಜುನ ಇಜೇರಿ,ಮಲ್ಲಿಕಾರ್ಜುನ ಪಡಶೆಟ್ಟಿ, ಚಂದ್ರು, ಸಂಜು ಪಲಾಫ್, ರಾಜಶೇಖರ ಬಳ್ಳಾ, ನಾಗರಾಜ್ ಸುಲ್ತಾನಪೂರ, ಪ್ರಭು ಬೊಮ್ಮನಳ್ಳಿ, ಸೇರಿದಂತೆ ಇತರರು ಇದ್ದರು.

ಮಂಗಳವಾರ, ಫೆಬ್ರವರಿ 4, 2025

ರಸ್ತೆ ದುರಸ್ತಿಗೆ ಸ್ಪಂದನೆ: ಗ್ರಾಪಂ ಅಧ್ಯಕ್ಷ ಸ್ಪಷ್ಟನೆ.

ಚಿತ್ತಾಪುರ: ಭಾಗೋಡಿ ಮತ್ತು ಮುಡಬೂಳ ರಸ್ತೆ ದುರಸ್ತಿ ಬಗ್ಗೆ ಜನವರಿ 30ಕ್ಕೆ ಅಧಿಕಾರ ವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ತಿಳಿದು ವರದಿಗಾರರ ಜೊತೆ ಭಾಗೋಡಿ ಗ್ರಾಪಂ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಜಗದೀಶ್ ಪಾಟೀಲ್ ಮಾತನಾಡಿ ಭಾಗೋಡಿಯಿಂದ ಡಿಗ್ರಿ ಕಾಲೇಜು ಮಾರ್ಗವಾಗಿ ಮತ್ತು ಮುಡಬೂಳ ಮಾರ್ಗವಾಗಿ ಚಿತ್ತಾಪುರ ಹೋಗುವ ರಸ್ತೆ ಹಾಗೂ ಭಾಗೋಡಿಯಿಂದ ಗುಂಡಗುರ್ತಿ ರಸ್ತೆ ದುರಸ್ತಿ ಬಗ್ಗೆ ಈಗಾಗಲೇ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ರವರಿಗೆ ಮನವಿ ಮಾಡಲಾಗಿದ್ದು ಸಚಿವರು ಸ್ಪಂದಿಸಿ ಅದೋಷ್ಟು ಬೇಗನೆ ರಸ್ತೆ ದುರಸ್ತಿ ಮಾಡಿಸುವ ಭರವಸೆ ನೀಡಿರುವುದಾಗಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

ಶ್ರೀ ಅಯ್ಯಪ್ಪಯ್ಯ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ.

ಚಿತ್ತಾಪುರ: ತಾಲೂಕಿನ ಅಳ್ಳೋಳ್ಳಿ ಮಹಾತ್ಮಾಪೀಠ ಗದ್ದಗಿಮಠದ ಶ್ರೀ ಅಯ್ಯಪ್ಪಯ್ಯ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ ಫೆ. 3 ರಿಂದ ಪ್ರಾರಂಭವಾಗಿ ಫೆ. 27 ಕ್ಕೆ ಮುಕ್ತಾಯವಾಗಲಿದೆ ಎಂದು ಪೀಠಾಧಿಪತಿ ನಾಗಪ್ಪಯ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಫೆ.3 ರಂದು ಗಂಗಸ್ಥಳ, 4 ರಂದು ಮಹಾಪ್ರಸಾದ ಉಷಾ:ಕಾಲ ಕಾರಣಿಕ ಪೂಜೆ, 5 ರಂದು ಮಹಾಸೇವಾ ಹಾಗೂ ರಾತ್ರಿ 9 ಗಂಟೆಗೆ, ಪೂಜ್ಯ ಶ್ರೀ ನಾಗಪ್ಪಯ್ಯ ಮಹಾಸ್ವಾಮಿಗಳ ತುಲಾಭಾರ ಕಾರ್ಯಕ್ರಮ ಜರುಗುವುದು. 6 ರಂದು ಕೈ ಕುಸ್ತಿ, 7 ರಂದು ದಶಮಿ ಮೌನೇಶ್ವರ ಮಹಾಪ್ರಸಾದ, 8 ರಂದು ದಶಮಿ ಸೇವಾ, 12 ರಂದು ಹಾಲೋಕುಳಿ, 14 ರಂದು ಗಂಗಮ್ಮನ ಪೂಜೆ, 18 ರಂದು ತುರಕರ ಲಂಕಿ ಪ್ರಸಾದ, 26 ರಂದು ಶಿವರಾತ್ರಿ ಜಾಗರಣೆ, 27 ರಂದು ಶಿವರಾತ್ರಿ ಅಮಾವಾಸ್ಯೆ ಹೀಗೆ ವಿವಿಧ ಕಾರ್ಯಕ್ರಮಗಳು ಹಾಗೂ ಸೇವೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.

11ನೇ ಶತಮಾನದ ಧರ್ಮಕ್ರಾಂತಿಕಾರರು ಧಾರ್ಮಿಕ ಸಂಘರ್ಷಣೆಯಲ್ಲಿ ಭಾಗವಹಿಸಿ ಹಿಂದೂ ಧರ್ಮದ ಆರೂಢ ಮತವನ್ನು ಎತ್ತಿ ಹಿಡಿದಿದ್ದ ಶ್ರೀ ವಿರಾಟ ವಿಶ್ವಕರ್ಮ ಜಗದ್ಗುರು ಶ್ರೀ ಮೌನೇಶ್ವರರು ಕರ್ನಾಟಕದಲ್ಲೆಲ್ಲಾ ಅನೇಕ ಪವಾಡಗಳನ್ನು ಮಾಡಿದ ಮಹಾಯೋಗಿಗಳವರು ಅವರ ವರಪ್ರಸಾದಿಕರಾದ ಶ್ರೀ ಅಯ್ಯಪ್ಪಯ್ಯ ಮಹಾಸ್ವಾಮಿಗಳು ಮಹಾಮಹಿಮರಾಗಿದ್ದರು. ಇವರ ಪವಾಡಗಳು ಒಂದಲ್ಲ ಸಾವಿರಾರು ಪವಾಡಗಳಾಗಿವೆ. ಇವರ ತರುವಾಯ ಬಂದ ಮಠದ ಲೀಲಾ ಪುರುಷರು ಸರ್ವಧರ್ಮಗಳನ್ನು ಸಮನಾಗಿ ಕಂಡು ಜನರಲ್ಲಿ ಭಾವೈಕ್ಯತೆಯನ್ನುಂಟು ಮಾಡಿದ ಅಗ್ರಗಣ್ಯರು. ಇಂತಹ ಮಹಾತ್ಮರ ನಿಲುಮೆ ಈ ಅಳ್ಳೋಳ್ಳಿ ಗ್ರಾಮವಾಗಿದೆ ಎಂದು ಹೇಳಿದ್ದಾರೆ.

ಇಲ್ಲಿಯ ಕಾರಣಿಕ ಪೂಜೆಯು ತುಂಬಾ ಮಹತ್ವದಾಗಿದ್ದು, ದೇಶದ ಭವಿಷ್ಯ, ಮಳೆ, ಬೆಳೆ ಮತ್ತು ರಾಜಕೀಯ ಪರಿವರ್ತನೆಗಳನ್ನು ಸೂಚಿಸುವಂಥದ್ದಾಗಿದೆ. ಇಂತಹ ಪವಿತ್ರ ಕ್ಷೇತ್ರದ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಶಕೆ 1946 ಕ್ರೋಧಿನಾಮ ಸಂವತ್ಸರ ಮಾಘ ಶುದ್ದ 5 ಪಂಚಮಿಯಿಂದ ಬಹುಳ 30 ರ ವರೆಗೆ ಜರಗುವುದು. ಆದಕಾರಣ ಭಕ್ತಾದಿಗಳು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಿ ಕ್ಷೇತ್ರಾಧಿಪತಿಗಳ ಕೃಪೆಗೆ ಪಾತ್ರರಾಗಬೇಕೆಂದು ಕೋರಿದ್ದಾರೆ.

ಫೆ.6 ರಿಂದ 10 ದಿನಗಳ ವರೆಗೆ ದನಗಳ ಜಾತ್ರೆ ಇರುತ್ತದೆ. ಕಾರಣ ರೈತರೆಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ಫೆ.5 ರಿಂದ ಸತತ (4 ದಿನಗಳವರೆಗೆ) ಪ್ರತಿದಿನ ರಾತ್ರಿ 10.30 ಗಂಟೆಗೆ “ಎಚ್ಚರ ತಂಗಿ ಎಚ್ಚರ” ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶಿಸಲಾಗುವುದು. ಫೆ.5 ರಿಂದ 9 ರ ವರೆಗೆ ಯಾದಗಿರ, ಗುರುಮಠಕಲ್‌, ಕಲಬುರಗಿ, ಸೇಡಂ, ಚಿತ್ತಾಪೂರ ಡಿಪೋಗಳಿಂದ ಹೆಚ್ಚಿನ ಬಸ್ಸುಗಳ ಸೌಕರ್ಯ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

“ಅಳ್ಳೋಳ್ಳಿ ಸುಕ್ಷೇತ್ರದ ಗದ್ದಗಿಮಠ ಹಿಂದು ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿದ್ದು, ಈ ಮಠಕ್ಕೆ 600 ವರ್ಷದ ಇತಿಹಾಸ ಇದೆ. ಕಷ್ಟ ಅಂತ, ಸಮಸ್ಯೆ ಅಂತ ಬಂದವರಿಗೆ ಪರಿಹರಿಸುವ ಅಯ್ಯಪ್ಪಸ್ವಾಮಿ, ಭಕ್ತಿಯಿಂದ ಬೇಡಿದ್ದನ್ನು ಕರುಣಿಸುವ ಆರಾಧ್ಯ ದೈವ ಆಗಿದ್ದಾರೆ, ಈಗಾಗಲೇ ನಾಗಪ್ಪಯ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ಸಿದ್ಧತೆ ಪೂರ್ಣಗೊಂಡಿದೆ, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ".

-ರಾಜಣ್ಣ ಕರದಾಳ ಮಠದ ಪರಮ ಭಕ್ತರು ಹಾಗೂ ಅಧ್ಯಕ್ಷರು ಬಾಬು ಜಗಜೀವನರಾಮ್ ಸಮಿತಿ ಚಿತ್ತಾಪುರ.

ತಾಂಡಾದಲ್ಲಿ ವಿಜೃಂಭಣೆಯಿಂದ ಜರುಗಿದ ಪಲ್ಲಕ್ಕಿ ಉತ್ಸವ.


ಚಿತ್ತಾಪುರ: ಸ್ಟೇಷನ್‌ ತಾಂಡಾದಲ್ಲಿ 8 ನಾಯಕರ ನೇತೃತ್ವದಲ್ಲಿ ಎರಡನೇ ವರ್ಷದ ಪಲ್ಲಕ್ಕಿ ಉತ್ಸವ ಬಹು ವಿಜೃಂಭಣೆಯಿಂದ ನಡೆಯಿತ್ತು.

ನಂತರ ಮೆರವಣಿಗೆ ಮುಖಾಂತರ ಸದ್ಗುರು ಸೇವಾಲಾಲ್‌ ಮಹಾರಾಜರ ಜಗಧಂಬಾ ದೇವಿಯ ಭಾವಚಿತ್ರದೊಂದಿಗೆ ಸ್ಟೇಷನ್‌ ತಾಂಡಾದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿಯನ್ನು ಪೂಜಿಸುತ್ತಾ ಬಂಜಾರ ಸಮಾಜದ ಸಂಸ್ಕೃತಿಯನ್ನು ಎತ್ತಿ ಇಡಿಯುತ್ತಾ ಬಗೆ ಬಗೆಯ ಬಂಜಾರ ವೇಷಗಳನ್ನು ಧರಿಸಿ ಯುವತಿಯರು ಕುಂಭಮೇಳ ಆರುತಿ ಹಿಡಿದುಕೊಂಡು ಭಜನೆ ಮತ್ತು ಡೊಳ್ಳು, ಡಿಜೆ ಮುಖಾಂತರ ಪಲ್ಲಕಿಯು ಸೇವಾಲಾಲ್ ದೇವಸ್ಥಾನಕ್ಕೆ ತಲುಪಿತ್ತು.
ಈ ಸಂದರ್ಭದಲ್ಲಿ ಕಿಶನ್ ರೂಪಲಾ ನಾಯಕ, ಕಿರಣ್ ಭೀಮಾ ನಾಯಕ, ಮೋತಿಲಾಲ್ ಬಾಬು ನಾಯಕ, ಲಕ್ಷ್ಮಣ ವಿಠಲ್ ನಾಯಕ್, ಚಂದು ನಾಯಕ, ಚಂರ್ದ ಭೀಕು ನಾಯಕ, ಪೊಮ್ಯಾ ನಾಯಕ, ರವೀಂದ್ರ ತಾರಾನಾಥ್,ನಾಯಕ, ದೇವಸ್ಥಾನ ಪೂಜಾರಿ, ಪೋಮು ಪಾಂಡು ಚವ್ಹಾಣ, ಬಂಜಾರ ಸಮಾಜದ ಗೌರವಾಧ್ಯಕ್ಷ ಗೋಪಾಲ ರಾಠೋಡ, ಸೇವಾಲಾಲ್‌ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಭೀಮಸಿಂಗ್ ಚವ್ಹಾಣ, ಪುರಸಭೆ ಸದಸ್ಯ ಜಗದೀಶ್ ಡಿ ಚವ್ಹಾಣ, ಭಮು ಪವಾರ, ಶಂಕರ್ ಬಾಬು ನಾಯಕ, ರಮೇಶ್ ನಾಗು ರಾಠೋಡ, ಚಂದ‌ರ್ ಮೋಟನಳ್ಳಿ, ದೇವಲಾ ನಾಮು ಚವ್ಹಾಣ, ಸಂಜು ರಾಠೋಡ, ಕುಶಾನ ಜಾಧವ, ಮನೋಜ್ ರಾಠೋಡ್ ಗೋರ್ ಸಿಕವಾಡಿ ಅಧ್ಯಕ್ಷ ಮನೋಜ್ ರಾಠೋಡ, ಅಂಬು ರಾಠೋಡ, ನಾಗ್ಯಾ ದೇವಲಾ, ಗೋಪಿ ರಾಠೋಡ, ಪಾಂಡು ರಾಠೋಡ, ರಾಮ ಚವ್ಹಾಣ, ರವಿ ಜಾಧವ, ಸುಭಾಷ್‌ ಜಾಧವ, ದೇವಿದಾಸ್ ಚವ್ಹಾಣ್ ಸೇವಾಲಾಲ್ ದೇವಸ್ಥಾನ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ದೇವಿದಾಸ್‌ ಚವ್ಹಾಣ, ಸೇವಾಲಾಲ್‌ ಜಗಧಂಬಾ ದೇವಿ ದೇವಸ್ಥಾನ ಅಧ್ಯಕ್ಷ ಶ್ರೀಕಾಂತ್ ರಾಠೋಡ, ಆಕಾಶ್ ಚವ್ಹಾಣ, ವಿಜಯ್ ಕುಮಾರ್ ಚವ್ಹಾಣ, ಗಣೇಶ್ ಚವ್ಹಾಣ, ಬಾಲರಾಜ್‌ ಚವ್ಹಾಣ, ವಿನೋದ್ ಪವಾರ, ದೀಪಕ್ ಜಾಧವ, ಸಂತೋಷ ರಾಠೋಡ, ಅಂಬದಾಸ್‌ ರಾಠೋಡ, ವಿಕಾಸ್ ರಾಠೋಡ, ವಾಸು ರಾಠೋಡ, ಸುನಿಲ್ ಚವ್ಹಾಣ, ಪ್ರೇಮ್ ಜೈರಾಮ್ ನಾಯಕ್, ಚಂದ್ರಕಾಂತ್ ಪವಾರ, ಕಿರಣ್ ಡಿಜೆ, ಪ್ರೇಮ್ ತುಳಜಾರಾಮ್ ಚವ್ಹಾಣ, ಧತು ಪವಾರ್ ಪೊಲೀಸ್, ಅನಿಲ್‌ ಪವಾರ, ಗೋಪಿ ಚವ್ಹಾಣ, ಸುಭಾಷ್ ರಾಠೋಡ, ಕಿಶು ರಾಠೋಡ, ಸುನಿಲ್‌ ಚವ್ಹಾಣ, ಗುರುನಾಥ ರಾಠೋಡ, ಅರ್ಜುನ್ ಚವ್ಹಾಣ, ಆಕಾಶ್ ಚವ್ಹಾಣ, ಕುಮಾ‌ರ್ ಚವ್ಹಾಣ, ಅಂಬದಾಸ್‌ ಚವ್ಹಾಣ, ಅವಿನಾಶ್ ಪವಾರ, ರಮೇಶ್‌ ಪವಾರ, ಸಂಜು ರಾಠೋಡ್, ಕಾಶಿನಾಥ್ ಚವ್ಹಾಣ, ಚಂದು ಚವ್ಹಾಣ, ನರೇಶ್ ಚವ್ಹಾಣ ಸೇರಿದಂತೆ ಅನೇಕ ಜನ ಸಮಾಜದ ಮುಖಂಡರು ತಾಯಂದಿರು ಸೇರಿದಂತೆ ಇತರರು ಇದ್ದರು.

ತಹಸೀಲ್‌ ಕಚೇರಿಯಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಣೆ.

ಚಿತ್ತಾಪುರ: ತಹಸೀಲ್‌ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಚನ ಸಾಹಿತ್ಯದ ಸಂರಕ್ಷಕ ಮಹಾನ್ ವಚನಕಾರ ಮಡಿವಾಳ ಮಾಚಿದೇವ ಜಯಂತ್ಯುತ್ಸವ ನಿಮಿತ್ತ ಭಾವಚಿತ್ರಕ್ಕೆ ತಹಸೀಲ್ದಾ‌ರ್ ನಾಗಯ್ಯ ಹಿರೇಮಠ ಪೂಜೆ ಸಲ್ಲಿಸಿ ಗೌರವ ನಮನಗಳು ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು, ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕ‌ರ್, ಮಡಿವಾಳ ಸಮಾಜದ ತಾಲೂಕಾಧ್ಯಕ್ಷ ಸಾಬಣ್ಣ ಮಡಿವಾಳ, ಮುಖಂಡರಾದ ವಿಜಯಕುಮಾ‌ರ್ ಮಡಿವಾಳ, ದೇವೇಂದ್ರಪ್ಪ ಮಡಿವಾಳ, ಸುರೇಶಕುಮಾರ್ ಮಡಿವಾಳ, ಮಾದೇವ ಮಡಿವಾಳ, ಲಕ್ಷ್ಮಣ್ ಮಡಿವಾಳ, ಸೂರ್ಯಕಾಂತ್ ಮಡಿವಾಳ, ರವಿಕುಮಾರ್ ಮಡಿವಾಳ, ವಿಶ್ವನಾಥ ಮಡಿವಾಳ, ಗೌರೀಶ್ ಮಡಿವಾಳ, ನಾಗಣ್ಣ ಮಡಿವಾಳ ದಿಗ್ಗಾಂವ, ಶರಣಪ್ಪ ಮಡಿವಾಳ, ನಾಗರಾಜ ಮಡಿವಾಳ, ಹುಸನಪ್ಪ ಮಡಿವಾಳ ಕಾಶಿನಾಥ ಮಡಿವಾಳ, ಸೇರಿದಂತೆ ಇತರರು ಇದ್ದರು.

ಜಿಲ್ಲಾಧ್ಯಕ್ಷ ಸ್ಥಾನ ನೀಡಲು ಕೋಲಿ ಸಮಾಜದ ಮುಖಂಡರ ಆಗ್ರಹ.

ಚಿತ್ತಾಪುರ: ಕೋಲಿ ಸಮಾಜದ ಹಿರಿಯ ಮುಖಂಡರು ಹಾಗೂ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾದ ಅವ್ವಣ್ಣ ಮ್ಯಾಕೇರಿ ಅವರಿಗೆ ಕಲಬುರ್ಗಿ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕು ಎಂದು ಕೋಲಿ ಸಮಾಜದ ಮುಖಂಡರಾದ ಅಂಬು ಹೋಳಿಕಟ್ಟಿ, ತಿಪ್ಪಣ್ಣ ಇವಣಿ, ರಾಜಶೇಖರ ಮೂಲಿಮನಿ ಹೊಸ್ಸುರ್‌ ಅವರು ಆಗ್ರಹಿಸಿದ್ದಾರೆ.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅವ್ವಣ್ಣ ಮ್ಯಾಕೇರಿ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಪಕ್ಷದ ಸಂಘಟನೆಗೆ ಹಗಲಿರಳು ಶ್ರಮಿಸುತ್ತಾ ಬಂದಿರುತ್ತಾರೆ. ಅಲ್ಲದೇ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳು ಸೇರಿದಂತೆ ಅನೇಕ ಚುನಾವಣೆಯಲ್ಲಿ ಸಕ್ರೀಯವಾಗಿ ಶ್ರಮಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣಿಕರ್ತರಾಗಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಇಲ್ಲಿವರೆಗೆ ಹಿಂದುಳಿದವರಿಗೆ ಅವಕಾಶ ನೀಡಿಲ್ಲ ಬರೀ ಮೇಲ್ವರ್ಗದವರಿಗೆ ಮಣೆ ಹಾಕಲಾಗಿದೆ ಹೀಗಾಗಿ ಹಿಂದುಳಿದವರಿಗೆ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾಧ್ಯಕ್ಷ ಆಯ್ಕೆ ಮಾಡುವಲ್ಲಿ ಅವ್ವಣ್ಣ ಮ್ಯಾಕೇರಿ ಅವರಿಗೆ ಅವಕಾಶ ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮುಡ್ ಅವರು ಭರವಸೆಯನ್ನು ನೀಡಿದ್ದರು. ಆದರೆ ಭರವಸೆ ಈಡೇರಿಲ್ಲ ಇದರಿಂದ ಜಿಲ್ಲೆಯ ಕಾರ್ಯಕರ್ತರಿಗೆ ತೀವ್ರ ಬೇಸರವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.

ಸದ್ಯ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಅಶೋಕ ಬಗಲಿ ಇವರನ್ನು ಬದಲಾವಣೆ ಮಾಡಿ ಅವ್ವಣ್ಣ ಮ್ಯಾಕೇರಿ ಇವರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಇವರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡದೆ ಇದ್ದ ಪಕ್ಷದಲ್ಲಿ ಪಕ್ಷದ ಮುಖಂಡರ ವಿರುದ್ಧ ಉಗ್ರಸ್ವರೂಪ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ರಾಜಸ್ಥಾನಿಗಳಿಂದ ಹಣ ವಸೂಲಿ: ರೈತರ ಆಕ್ರೋಶ.

ಚಿತ್ತಾಪುರ: ತೊಗರಿ ರಾಶಿ ಮಾಡುವ ರಾಜಸ್ಥಾನ ಯಂತ್ರಗಳ ಮಾಲಿಕರು ಸಿಕ್ಕಾಪಟ್ಟೆ ದರ ಹೆಚ್ಚಳ ಮಾಡಿ ರೈತರ ಹತ್ತಿರ ಹೆಚ್ಚಿನ ದರದಲ್ಲಿ ಹಣ ವಸೂಲಿ ಮಾಡಿರುವ ಅವರ ಮೇಲೆ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ರೈತ ಮುಖಂಡರು ಮಂಗಳವಾರ ತಹಸೀಲ್ದಾ‌ರ್ ನಾಗಯ್ಯ ಹಿರೇಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕಳೆದ ಸಾಲಿನಲ್ಲಿ ತೊಗರಿ ರಾಶಿ ಮಾಡುವ ರಾಜಸ್ಥಾನ ಯಂತ್ರಗಳ ಮಾಲಿಕರು ತೊಗರಿ 75 ಕೆ.ಜಿ ಒಂದು ಪಾಕೀಟ ರಾಶಿ ಮಾಡಲು ರೂ.150 ಕಡಲೆ ರಾಶಿಗೆ ರೂ.80 ತೆಗೆದುಕೊಂಡು ತಾಲೂಕಿನ ರೈತರ ಜಮೀನುಗಳನ್ನು ರಾಶಿ ಮಾಡಿರುತ್ತಾರೆ.

ಆದರೆ ಈ ವರ್ಷ ಅಂದರೆ 2024-25ನೇ ಸಾಲಿನಲ್ಲಿ ತೊಗರಿ 75 ಕೆ.ಜಿ ಒಂದು ಪಾಕೇಟಿಗೆ 250 ಹಾಗೂ ಕಡಲೆ ರಾಶಿಗೆ 150 ಹಣ ಪಡೆದುಕೊಳ್ಳುತ್ತಿದ್ದಾರೆ. ಈ ಕುರಿತು ರೈತರು, ಅವರಿಗೆ ತಕರಾರು ಮಾಡಿದರೆ ನಾವು ಮಾಡುವುದು ಹೀಗೆ ನೀವು ಮಾಡಿಕೊಳ್ಳಬೇಕಾದರೆ ಮಾಡಿಕೊಳ್ಳಿ ಇಲ್ಲವಾದರೆ ಬಿಡಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ತೊಗರಿ, ಕಡಲೆ ಬೆಲೆ ಬಹಳ ಕಡಿಮೆ ಇದ್ದು ಇದರಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ.

ಆದಕಾರಣ ರೈತರ ಹತ್ತಿರ ಹೆಚ್ಚಿನ ರೀತಿಯಲ್ಲಿ ಹಣ ವಸೂಲಿ ಮಾಡುತ್ತಿರುವ ರಾಜಸ್ಥಾನ ಮಶೀನಗಳ ಮಾಲಿಕರ ಮೇಲೆ ಸೂಕ್ತ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ರೈತ ಮುಖಂಡರಾದ ರಾಮಲಿಂಗ ಬಾನರ್‌, ಸಿದ್ಧರಾಮೇಶ್ವರ ಸಜ್ಜನಶೆಟ್ಟಿ, ನಿಂಗಣ್ಣ ಹೆಗಲೇರಿ, ಬಸವರಾಜ ಲೋಕನಳ್ಳಿ, ಪ್ರಭು ಹಲಕಟ್ಟಿ, ಲಕ್ಷ್ಮೀಕಾಂತ ಸಾಲಿ, ಮೈಪಾಲ ಮೂಲಿಮನಿ, ಬಸವರಾಜ ಮೈನಾಳಕ‌ರ್, ಕರಿಗೂಳಿ ವಾರ್ಡ್, ಕರ್ಣಕುಮಾರ ಅಲ್ಲೂರ, ಇಬ್ರಾಹಿಂ ನೈಕೋಡಿ, ಮಾರುತಿ ಇವಣಿ, ಶಿವಾಜಿ ಸೇರಿದಂತೆ ಇತರರು ಇದ್ದರು.

ಪಲ್ಲಕ್ಕಿ ಉತ್ಸವಕ್ಕೆ ಕಂಬಳೇಶ್ವರ ಶ್ರೀ ಚಾಲನೆ

ಚಿತ್ತಾಪುರ: ಪಟ್ಟಣದ ಸ್ಟೇಷನ್ ತಾಂಡಾದಲ್ಲಿ ಸೇವಾಲಾಲ್ ಮಹಾರಾಜರ ಪಲ್ಲಕ್ಕಿ ಉತ್ಸವಕ್ಕೆ ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಚಾಲನೆ ನೀಡಿದರು. ತುಕಾರಾಮ ಖೀರು ನಾಯಕ ಅವರ ಮನೆಯಿಂದ ಸೇವಾಲಾಲ್ ಮಹಾರಾಜರ ಪಲ್ಲಕ್ಕಿ ಉತ್ಸವ ಪ್ರಾರಂಭಗೊಂಡು ತಾಂಡಾದ ಎಲ್ಲ ಬೀದಿಗಳಲ್ಲಿ ಪಲ್ಲಕ್ಕಿಯ ಮೆರವಣಿಗೆ ನಡೆಯಿತು.

ಈ ಸಂದರ್ಭದಲ್ಲಿ ತಾಂಡಾದ ನಾಯಕರಾದ ತುಕಾರಾಮ ಖೀರು ನಾಯಕ, ಕನ್ನು ಯಂಕು ನಾಯಕ, ಚಂದ್ರಾಮ ಚವ್ಹಾಣ, ಡಾವ ಕಿಶನ, ಕಿಶನ ಕಾರಭಾರಿ, ಸರಪಂಚ ಭೋಜು ಪವಾರ, ಕಾಂತು ಚವ್ಹಾಣ, ಲಕ್ಷಣ ಪಾಂಡು, ಅನಿಲ, ಶಂಕರ, ನಾಗರಾಜ, ವಿಠಲ ರಾಠೋಡ, ಖುಬ್ಬು ರಾಠೋಡ, ವಿಕಾಸ ಪವಾರ, ಸುರೇಶ ರೂಪಲಾ, ರಮೇಶ್ ನಾಗು, ರವಿ ಹೀರು, ಆಕಾಶ ನಿಲು ಚವ್ಹಾಣ, ಖುಬ್ಬು ಚವ್ಹಾಣ, ಶಿವರಾಮ ಚವ್ಹಾಣ, ಅಶ್ವಥ ರಾಠೋಡ ಸೇರಿದಂತೆ ತಾಂಡಾದ ತಾಯಂದಿರು ಹಲವಾರು ಗಣ್ಯಮಾನ್ಯರು ಇದ್ದರು.

ತೋಟೇಂದ್ರ ಸ್ವಾಮೀಜಿ ಅಳಿಯ ಆತ್ಮಹತ್ಯೆ.

ಚಿತ್ತಾಪುರ: ತಾಲೂಕಿನ ನಾಲವಾರದ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ಭಕ್ತನೋರ್ವ ಹಾಡಹಗಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

ಗುಂಡು ಹಿರೇಮಠ ಆತ್ಮಹತ್ಯೆಗೆ ಒಳಗಾದ ವ್ಯಕ್ತಿ (34) ಮಠದಲ್ಲಿನ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಮೃತ ಗುಂಡು ಮಠದ ಪೀಠಾಧಿಪತಿ ಪೂಜ್ಯ ಶ್ರೀ ತೋಟೇಂದ್ರ ಶಿವಾಚಾರ್ಯ ಅವರ ತಂಗಿಯ ಪುತ್ರ ಎನ್ನಲಾಗಿದ್ದು, ಒಂದು ವರ್ಷದ ಹಿಂದೆ ಇವರ ಮದುವೆಯಾಗಿತ್ತು. ಪೂಜ್ಯರ ಸೇವೆ ಮಾಡುತ್ತ ಮಠದಲ್ಲೇ ವಾಸವಿದ್ದರು ಎಂಬುದು ಸಾರ್ವಜನಿಕರ ಮೂಲಗಳಿಂದ ತಿಳಿದುಬಂದಿದೆ. ಇನ್ನೊಂದು ಕಡೆ ಶ್ರೀ ಕೋರಿಸಿದ್ದೇಶ್ವರರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಮುಗಿದು ಒಂದು ವಾರ ಕಳೆದಿಲ್ಲ ಮಠದಲ್ಲಿ ಆತ್ಮಹತ್ಯೆ ಘಟನೆ ತಿಳಿದು ಭಕ್ತರಲ್ಲಿ ದು:ಖದ ವಾತಾವರಣ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ.

ಸ್ಥಳಕ್ಕೆ ಸಿಪಿಐ ಚಂದ್ರಶೇಖರ ತಿಗಡಿ ಹಾಗೂ ವಾಡಿ ಠಾಣೆ ಪಿಎಸ್‌ಐ ತಿರುಮಲೇಶ ಕುಂಬಾರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...