ರಾಜಸ್ಥಾನಿಗಳಿಂದ ಹಣ ವಸೂಲಿ: ರೈತರ ಆಕ್ರೋಶ.

ಚಿತ್ತಾಪುರ: ತೊಗರಿ ರಾಶಿ ಮಾಡುವ ರಾಜಸ್ಥಾನ ಯಂತ್ರಗಳ ಮಾಲಿಕರು ಸಿಕ್ಕಾಪಟ್ಟೆ ದರ ಹೆಚ್ಚಳ ಮಾಡಿ ರೈತರ ಹತ್ತಿರ ಹೆಚ್ಚಿನ ದರದಲ್ಲಿ ಹಣ ವಸೂಲಿ ಮಾಡಿರುವ ಅವರ ಮೇಲೆ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ರೈತ ಮುಖಂಡರು ಮಂಗಳವಾರ ತಹಸೀಲ್ದಾ‌ರ್ ನಾಗಯ್ಯ ಹಿರೇಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕಳೆದ ಸಾಲಿನಲ್ಲಿ ತೊಗರಿ ರಾಶಿ ಮಾಡುವ ರಾಜಸ್ಥಾನ ಯಂತ್ರಗಳ ಮಾಲಿಕರು ತೊಗರಿ 75 ಕೆ.ಜಿ ಒಂದು ಪಾಕೀಟ ರಾಶಿ ಮಾಡಲು ರೂ.150 ಕಡಲೆ ರಾಶಿಗೆ ರೂ.80 ತೆಗೆದುಕೊಂಡು ತಾಲೂಕಿನ ರೈತರ ಜಮೀನುಗಳನ್ನು ರಾಶಿ ಮಾಡಿರುತ್ತಾರೆ.

ಆದರೆ ಈ ವರ್ಷ ಅಂದರೆ 2024-25ನೇ ಸಾಲಿನಲ್ಲಿ ತೊಗರಿ 75 ಕೆ.ಜಿ ಒಂದು ಪಾಕೇಟಿಗೆ 250 ಹಾಗೂ ಕಡಲೆ ರಾಶಿಗೆ 150 ಹಣ ಪಡೆದುಕೊಳ್ಳುತ್ತಿದ್ದಾರೆ. ಈ ಕುರಿತು ರೈತರು, ಅವರಿಗೆ ತಕರಾರು ಮಾಡಿದರೆ ನಾವು ಮಾಡುವುದು ಹೀಗೆ ನೀವು ಮಾಡಿಕೊಳ್ಳಬೇಕಾದರೆ ಮಾಡಿಕೊಳ್ಳಿ ಇಲ್ಲವಾದರೆ ಬಿಡಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ತೊಗರಿ, ಕಡಲೆ ಬೆಲೆ ಬಹಳ ಕಡಿಮೆ ಇದ್ದು ಇದರಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ.

ಆದಕಾರಣ ರೈತರ ಹತ್ತಿರ ಹೆಚ್ಚಿನ ರೀತಿಯಲ್ಲಿ ಹಣ ವಸೂಲಿ ಮಾಡುತ್ತಿರುವ ರಾಜಸ್ಥಾನ ಮಶೀನಗಳ ಮಾಲಿಕರ ಮೇಲೆ ಸೂಕ್ತ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ರೈತ ಮುಖಂಡರಾದ ರಾಮಲಿಂಗ ಬಾನರ್‌, ಸಿದ್ಧರಾಮೇಶ್ವರ ಸಜ್ಜನಶೆಟ್ಟಿ, ನಿಂಗಣ್ಣ ಹೆಗಲೇರಿ, ಬಸವರಾಜ ಲೋಕನಳ್ಳಿ, ಪ್ರಭು ಹಲಕಟ್ಟಿ, ಲಕ್ಷ್ಮೀಕಾಂತ ಸಾಲಿ, ಮೈಪಾಲ ಮೂಲಿಮನಿ, ಬಸವರಾಜ ಮೈನಾಳಕ‌ರ್, ಕರಿಗೂಳಿ ವಾರ್ಡ್, ಕರ್ಣಕುಮಾರ ಅಲ್ಲೂರ, ಇಬ್ರಾಹಿಂ ನೈಕೋಡಿ, ಮಾರುತಿ ಇವಣಿ, ಶಿವಾಜಿ ಸೇರಿದಂತೆ ಇತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.