ವಿವಿಧೆಡೆ ಸರ್ವಜ್ಞ ಜಯಂತಿ ಆಚರಣೆ.
ಚಿತ್ತಾಪುರ: ಪಟ್ಟಣದ ವಿವಿಧೆಡೆ ಕನ್ನಡ ಪರಂಪರೆಯ ಮಹಾನ್ ಮಾನವತಾವಾದಿ, ತತ್ವಜ್ಞಾನಿ, ತ್ರಿಪದಿಗಳ ಬ್ರಹ್ಮ ಕವಿ ಸರ್ವಜ್ಞ ಅವರ 505ನೇ ಜಯಂತಿ ಆಚರಿಸಲಾಯಿತು.
ತಹಸೀಲ್ ಕಾರ್ಯಾಲಯದಲ್ಲಿ ಸರ್ವಜ್ಞ ಅವರ ಭಾವಚಿತ್ರಕ್ಕೆ ಪೂಜೆ ಮಾಡಿ ಜಯಂತಿ ಆಚರಣೆ ಕುರಿತು ತಹಸೀಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿ ಜನರು ಆಡುವ ಭಾಷೆಯಲ್ಲಿ ತ್ರಿಪದಿಯಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಸಮಾಜ ಸುಧಾರಕ, ತ್ರಿಪದಿಗಳ ಮೂಲಕ ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆ ನೀಡಿದ ಶ್ರೇಷ್ಠ ವಚನಕಾರ ಸರ್ವಜ್ಞ ರವರ ಆದರ್ಶಗಳು ಪ್ರತಿಯೊಬ್ಬರು ಪಾಲಿಸಬೇಕು ಎಂದು ಸಲಹೆ ನೀಡಿದರು.
ಈ ವೇಳೆಯಲ್ಲಿ ರಾಜ್ಯ ಕುಂಬಾರರ ಯುವ ಸೈನ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಗದೇವ ಕುಂಬಾರ, ಅಧ್ಯಕ್ಷ ಪ್ರಭು ಕುಂಬಾರ, ಭೀಮರಾಯ ಕುಂಬಾರ, ಶರಣು ಕುಂಬಾರ, ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.
ಪುರಸಭೆ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸರ್ವಜ್ಞ ಜಯಂತಿಯ ನಿಮಿತ್ಯ ಸರ್ವಜ್ಞ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿ ಆಚರಿಸಿದರು ಈ ವೇಳೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ್, ಸುನೀಲ ಕುಮಾರ, ಶರಣಪ್ಪ, ವೆಂಕಟೇಶ ಕುಮಾರ, ಭೀಮು ಇಲಾಖೆಯ ಇತರರು ಇದ್ದರು.
ತಾಲ್ಲೂಕ ಪಂಚಾಯತ ಇಲಾಖೆಯಯಲ್ಲಿ ಹಮ್ಮಿಕೊಂಡಿದ್ದ ಸರ್ವಜ್ಞ ಜಯಂತಿಯ ಪ್ರಯುಕ್ತ ಗುರುವಾರ ಸರ್ವಜ್ಞ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸು ಮೂಲಕ ಆಚರಿಸಿದರು.ಈ ಸಂದರ್ಭದಲ್ಲಿ ಹರೀಶ ಶಿಂಧೆ, ಗೋಪಾಲ, ಸಂದೇಶ, ಇರ್ಫಾನ್, ಅನೀಲ ಪಾಟೀಲ್, ಸಂಗೀತ ಸಜ್ಜನ್ ಇತರರು ಇದ್ದರು.
ಸರ್ಕಾರಿ ಪ್ರೌಢ ಶಾಲೆಯಲ್ಲಿ ಸರ್ವಜ್ಞ ಜಯಂತಿ ಆಚರಿಸಿ ಬಳಿಕ ಶಾಲೆಯ ಮುಖ್ಯಗುರುಗಳಾದ ಕಾಶಿರಾಯ ಕಲಾಲ್ ಮಾತನಾಡಿ ತ್ರಿಪದಿಗಳ ಮೂಲಕ ಸಮಾಜದಲ್ಲಿ ಪ್ರಖರ ಚಿಂತನೆಗಳನ್ನು ಸಾರಿದ ಹೆಮ್ಮೆಯ ಕವಿ ಸರ್ವಜ್ಞರು ತೋರಿದ ದಾರಿಯಲ್ಲಿ ಸಾಗುವ ಮೂಲಕ ಜೀವನಾನುಭವ ಪಡೆದುಕೊಳ್ಳೋಣ. ತ್ರಿಪದಿ ಕವಿಗೆ ಮನದುಂಬಿ ಸ್ಮರಿಸೋಣ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಇದ್ದರು.
ಪಶುವೈದ್ಯಕೀಯ ಇಲಾಖೆಯಲ್ಲಿ ಸರ್ವಜ್ಞ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು ಈ ವೇಳೆಯಲ್ಲಿ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.
ಮಾತೋಶ್ರೀ ಮಹಾದೇವಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಂತ ಶ್ರೇಷ್ಠ ಕವಿ ಸರ್ವಜ್ಞ ಜಯಂತಿಯ ಪ್ರಯುಕ್ತ ಗುರುವಾರ ಸರ್ವಜ್ಞ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಿದರು.
ಜಗದೇವ ಕುಂಬಾರ ಮಾತನಾಡಿ ಸರ್ವಜ್ಞರ ತ್ರಿಪದಿಗಳು ಕೇವಲ ಕಾವ್ಯವಲ್ಲ, ಅವು ಜೀವನದ ತತ್ವಶಾಸ್ತ್ರ. ಅವರ ವಾಣಿ ಸರಳವಾಗಿದ್ದರೂ ಅತ್ಯಂತ ಗಹನವಾದ ಅರ್ಥವನ್ನು ಹೊಂದಿದೆ. ಜಾತಿ, ಅಸ್ಪೃಶ್ಯತೆ, ಮೂಢನಂಬಿಕೆಗಳಂತಹ ಸಮಾಜದ ಕುಂದುಗಳನ್ನು ಅವರು ತಮ್ಮ ತ್ರಿಪದಿಗಳ ಮೂಲಕ ಧೈರ್ಯದಿಂದ ಟೀಕಿಸಿದರು. ಅವರ ಮಾನವತಾವಾದಿ ದೃಷ್ಟಿಕೋನ ಮತ್ತು ತಾತ್ವಿಕ ಚಿಂತನೆ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಅಮೂಲ್ಯ ಕೊಡುಗೆಯಾಗಿಯನ್ನು ನೀಡಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳು ಮಹಾನ್ ವ್ಯಕ್ತಿಗಳು ನಮಗೆ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುವುದರ ಜೊತೆಗೆ ಅವರ ಆದರ್ಶಗಳು ನಾವು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ವಿಶ್ವನಾಥ ಮಡಿವಾಳ, ಶಿಕ್ಷಕಿ ಸಂಗೀತ, ಸಹಾಯಕಿ ಶ್ರೀಮತಿ ಜಯಶ್ರೀ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ