ಆರ್‌ಎಸ್ಎಸ್, ಬಿಜೆಪಿ ನಕಲಿ ದೇಶಭಕ್ತರು: ಹೊಸಮನಿ.
✓ಭೀಮನಡೆ ಯಶಸ್ವಿ ಬಿಜೆಪಿ ಹತಾಶೆ, ✓ಬಿಜೆಪಿಗರ ಆರೋಪ ಸತ್ಯಕ್ಕೆ ದೂರ. ಚಿತ್ತಾಪುರ: ಆರ್‌ಎಸ್ಎಸ್ ನವರು ತ್ರಿವರ್ಣ ಧ್ವಜಗಳು ಹಿಡಿದಿಲ್ಲ ಕೈಯಲ್ಲಿ ಬಡಗಿ ಹಿಡಿದು ಪಥಸಂಚಲನ ಮಾಡಿದ್ದರೆ ನಾವು ತ್ರಿವರ್ಣ ಧ್ವಜಗಳು ಹಿಡಿದು ಹಾಗೂ ಸಂವಿಧಾನ ಪೀಠಕೆ ಜೊತೆಗೆ ಎಲ್ಲಾ ಸಮಾಜಗಳ ಗುರುಗಳ ಭಾವಚಿತ್ರಗಳೊಂದಿಗೆ ಮೆರವಣಿಗೆ ಮಾಡಿದ್ದೇವೆ ಹಾಗಾಗಿ ಆರ್‌ಎಸ್ಎಸ್ ಮತ್ತು ಬಿಜೆಪಿ ನವರು ನಕಲಿ ದೇಶಭಕ್ತರು ನಾವು ನಿಜವಾದ ದೇಶಭಕ್ತರು ಎಂದು ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ ಹೇಳಿದರು. ಪಟ್ಟಣದ ಬುದ್ಧ ಮಂದಿರದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಭೀಮ ನಡಿಗೆ ಪಥಸಂಚಲನದಲ್ಲಿ ಅಂಬೇಡ್ಕರ್ ಅನುಯಾಯಿಗಳು ಹಾಗೂ 22 ಸಮಾಜದ ಜನರು ಭಾಗವಹಿಸಿದ್ದರಿಂದ ಅಭೂತಪೂರ್ವ ಯಶಸ್ವಿಗೊಂಡಿದೆ, ಇದನ್ನು ಸಹಿಸಿಕೊಳ್ಳಲು ಆಗದ ಬಿಜೆಪಿ ಮುಖಂಡರು ಹತಾಶೆಗೊಂಡು ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು. ಆರ್.ಎಸ್.ಎಸ್ ನವರು ಕೈಯಲ್ಲಿ ಬಡಗಿ ಹಿಡಿದು ಪಥ ಸಂಚಲನ ಮಾಡುವ ಮೂಲಕ ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ, ಆದರೆ ನಾವು ಯಾವುದೇ ಮಾರಕಾಸ್ತ್ರ ಇಲ್ಲದೇ ಶಿಸ್ತುಬದ್ಧವಾಗಿ, ಶಾಂತಿಯುತವಾಗಿ ಐತಿಹಾಸಿಕ ಭೀಮ ನಡಿಗೆ ಪಥ ಸಂಚಲನ ಮಾಡಿದ್ದೇವೆ, ಭೀಮ ನಡಿಗೆ ಪಥಸಂಚಲನದಲ್ಲಿ ಸ್ವಯಂಪ್ರೇರಿತವಾಗಿ ಜನ ಬಂದಿದ್ದಾರೆ ಯಾರನ್ನೂ ಹಣ ನೀಡಿ ಕರೆಯಿಸಿ...