ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮ ಆಂಗ್ಲ ಶಾಲೆಯಲ್ಲಿ : ಇಂದೂರು ಆಕ್ಷೇಪ.
ಚಿತ್ತಾಪುರ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದಲ್ಲಿ ಸಿರಿನುಡಿ ಸಂಭ್ರಮ ಎಂಬ ಕಾರ್ಯಕ್ರಮ ಇಂದು ಶನಿವಾರ ಹಮ್ಮಿಕೊಂಡಿರುವ ಶೇಷಗಿರಿರಾವ್ ಹಿರಿಯ ಮತ್ತು ಪ್ರೌಢ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸುವ ಮೂಲಕ ಕನ್ನಡ ಭಾಷೆಗೆ ಅವಮಾನ ಮಾಡಲಾಗುತ್ತಿದೆ ಎಂದು ತಾಲೂಕಾ ಜೈ ಕರ್ನಾಟಕ ಮಾಜಿ ಅಧ್ಯಕ್ಷ ಮಲ್ಲಿನಾಥ ಇಂದೂರು ಅವರು ಉದಯಕಾಲ ಪತ್ರಿಕೆ ಜೊತೆಗೆ ಮಾತನಾಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ
ಕನ್ನಡ ನಾಡು, ನುಡಿ, ನೆಲ,ಜಲ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಗೆ ಕೊಡುಗೆ ನೀಡಿರುವ ಮತ್ತು ಶ್ರಮಿಸುತ್ತಿರುವವರನ್ನು ಗುರುತಿಸಿ ಪರಿಷತ್ತಿನಿಂದ ಸನ್ಮಾನಿಸಿ, ಪ್ರಶಸ್ತಿ ನೀಡಿ ಗೌರವಿಸುವುದು ಪರಿಷತ್ತಿನ ಸಂಪ್ರದಾಯ. ಅದನ್ನು ಮೀರಿ ಆಂಗ್ಲ ಭಾಷೆಯಲ್ಲಿ ಬೋಧನೆ ಮಾಡುವ ಉಪನ್ಯಾಸಕರಿಗೆ ಪ್ರಶಸ್ತಿಗೆ ಆಯ್ಕೆ ಮಾಡುವುದು ಅಲ್ಲದೇ ಮಾಧ್ಯಮ ಕ್ಷೇತ್ರವನ್ನು ಕಡೆಗಣಿಸುವ ಮೂಲಕ ಕನ್ನಡ ಭಾಷೆ ಬೋಧಿಸುವ ಶಿಕ್ಷಕ, ಉಪನ್ಯಾಸಕರಿಗೆ, ಹಾಗೂ ನಾಲ್ಕನೆ ಅಂಗವಾದ ಪತ್ರಿಕಾ ರಂಗವನ್ನು ಅವಮಾನ ಮಾಡಿದಂತೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಕೇಳಿದಾಗ ತಾಲೂಕಾ ಅಧ್ಯಕ್ಷರಿಗೆ ಕೇಳಿ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ತಾಲೂಕಾ ಅಧ್ಯಕ್ಷರಿಗೆ ಕೇಳಿದರೆ ಆಗಿರುವ ತಪ್ಪು ಮುಂದಿನ ಕಾರ್ಯಕ್ರಮದಲ್ಲಿ ಸರಿಪಡಿಸಿಕೊಳ್ಳೋಣ ಎಂದು ಹೇಳುವ ಮೂಲಕ ತಪ್ಪು ಒಪ್ಪಿಕೊಂಡು ಕನ್ನಡ ಭಾಷೆಗೆ ಮಾಡಿರುವ ಅವಮಾನ ಸಮರ್ಥಸಿಕೊಂಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ