ಮಗನ ಸಾಧನೆಗೆ ತಂದೆ-ತಾಯಿ ಮೆಚ್ಚುಗೆ.
ಚಿತ್ತಾಪುರ: ಇತ್ತೀಚಿಗೆ ಕರ್ನಾಟಕ ಸರ್ಕಾರ ನೇಮಕ ಮಾಡಿಕೊಂಡ ಪಿಎಸ್ಐ ನೇಮಕಾತಿಯಲ್ಲಿ ಶಶಿಧರ್ 44ನೇ ರ್ಯಾಂಕ್ ಪಡೆದು ನೇಮಕವಾಗಿದ್ದು ಮಗನ ಸಾಧನೆ ಕಂಡು ತಂದೆ-ತಾಯಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ದಿಗ್ಗಾಂವ್ ಗ್ರಾಮದ ಸರ್ಕಾರಿ ಶಿಕ್ಷಕರಾದ ದೇವಿಂದ್ರಪ್ಪ ಶಹಾಬಾದಕರ್ ತಾಯಿ ಕವಿತಾ ಎಂಬುವರ ಮಗ ಶಶಿಧರ್ ಎನ್ನುವರು ತಾಲೂಕಿನ ಶಿಶು ವಿಹಾರ ಪ್ರಾಥಮಿಕ ಮತ್ತು ಬೆಂಥನಿ ಪ್ರೌಢಶಾಲೆ 1ನೇ ರಿಂದ 10ನೇ ತರಗತಿವರಿಗೆ ಓದಿ, ಎಸೆಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ, ಮುಂದಿನ ವಿದ್ಯಾಭ್ಯಾಸಕ್ಕಾಗಿ ಜಿಲ್ಲೆಯ ಶ್ರೀಗುರು ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಓದಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ, ನಂತರ ಬಿಸಿಎ ಪದವಿಯನ್ನು ಶರಣಬಸವೇಶ್ವರ ಪದವಿ ಕಾಲೇಜಿನಲ್ಲಿ ಮುಗಿಸಿ ಅಲ್ಲಿಯೂ ಸಹ ಉನ್ನತ ಶ್ರೇಣಿಯಲ್ಲಿ ಪಾಸಾಗಿ ಮುಂದಿನ ಓದನ್ನು ನಿಲ್ಲಿಸಿ. ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಚಿತ್ತಹರಿಸಿ. ದಾರವಾಡ ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್ ಸೆಂಟರ್ ಒಂದಕ್ಕೆ ಸೇರಿ ಸತತವಾಗಿ ಮೂರು ವರ್ಷಗಳಿಂದ ಕೋಚಿಂಗ್ ಪಡೆದು ಪರಿಶ್ರಮದಿಂದ ಮೊದಲ ಹಂತದ ಪಿಎಸ್ಐ ನೇಮಕಾತಿಯಲ್ಲಿ ಸ್ವಲ್ಪದರಲ್ಲಿಯೇ ವಿಫಲರಾಗಿದ್ದರು.
ಸೋಲೆ ಗೆಲುವಿನ ಮೆಟ್ಟಲು ಎಂದು ತಿಳಿದು ಕೋಚಿಂಗ್ ಅನ್ನು ಮುಂದುವರೆಸಿ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿ ನಿಂತು ಪಿಎಸ್ಐ ಹುದ್ದೆ ಕನಸು ನನಸು ಮಾಡಿಕೊಂಡು ಯಶಸ್ವಿಯಾಗಿದ್ದಾರೆ.
ಮಗನ ತಂದೆ ದೇವಿಂದ್ರಪ್ಪ ಶಹಾಬಾದಕರ್ ಅವರು ಸಂಜೆವಾಣಿ ಪತ್ರಿಕಾ ವರದಿಗಾರರ ಜೊತೆ ಮಾತನಾಡಿದ ಅವರು ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ನನ್ನ ಮಗ 44ನೇ ರ್ಯಾಂಕ್ ನೊಂದಿಗೆ ನೇಮಕಾತಿ ಹೊಂದಿದ್ದು ವರದಾನವಾಗಿದೆ. 23ನೇ ವಯಸ್ಸಿಗೆ ಮಗನ ಸಾಧನೆಗೆ ಗುರು-ಹಿರಿಯರು ಕುಟುಂಬಸ್ಥರು, ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳು ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
Good
ಪ್ರತ್ಯುತ್ತರಅಳಿಸಿ