ಗ್ರಾಪಂ ಅಧ್ಯಕ್ಷನಿಗೆ ಹೊಡೆದ ಅಬಕಾರಿ ಸಬ್ ಇನ್ಸ್ಪೆಕ್ಟರ್.

ಚಿತ್ತಾಪುರ: ಅಕ್ರಮ ಕಳ್ಳಭಟ್ಟಿ ಸಾರಾಯಿ ಮಾರಾಟಕ್ಕೆ ಸಂಬಂಧಿಸಿದಂತೆ ತಾಲೂಕಿನ ಬೀಮನಹಳ್ಳಿ ಗ್ರಾಮದ ಮಹಿಳೆಯೊಬ್ಬಳನ್ನು ವಶಕ್ಕೆ ಪಡೆಯಲು ಹೋಗಿದ್ದ ಚಿಂಚೋಳಿ ಅಬಕಾರಿ ಸಬ್ ಇನ್ಸ್ಪೆಕ್ಟರ್ ಜಟ್ಟೆಪ್ಪ ಎನ್ನುವರು ಭೀಮನಹಳ್ಳಿ ಗ್ರಾಪಂ, ಅಧ್ಯಕ್ಷ ಅಶೋಕ್ ಕಾಸಲ್ ಎಂಬುವರಿಗೆ ಹೊಡೆದಾಗ ಗ್ರಾಮಸ್ಥರು ಆಕ್ರೋಶ ಗೊಂಡಾಗ ಅಬಕಾರಿ ಇನ್ಸ್ಪೆಕ್ಟರ್ ಓಡಿಹೋದ ಘಟನೆ  ಶನಿವಾರ ನಡೆದಿದೆ.

ಚಿಂಚೋಳಿ ಅಬಕಾರಿಗೂ ನಮ್ಮ ಗ್ರಾಮಕ್ಕೂ ಏನು ಸಂಬಂಧ ಚಿತ್ತಾಪುರ ಅಬಕಾರಿ ಇಲಾಖೆಯವರು ಬಂದು ಕೇಳಲಿ. ಗ್ರಾಪಂ ಅಧ್ಯಕ್ಷರಿಗೆ ಅವರು ಯಾಕೆ ಹೊಡೆಯಬೇಕು ಎಂದು ಪ್ರಶ್ನಿಸಿದರು ಗ್ರಾಮಸ್ಥರ ಆಕ್ರೋಶಗೊಂಡ ಪರಿಣಾಮ ಚಿಂಚೋಳಿ ಅಬಕಾರಿ ಸಬ್ ಇನ್ಸ್ಪೆಕ್ಟರ್ ಓಡಿಹೋಗಿದರು ಉಳಿದ ಅಬಕಾರಿ ಸಿಬ್ಬಂದಿ ವರ್ಗದವರಿಗೆ ಹಾಗೂ ಅವರ ವಾಹನಗಳನ್ನು ಗ್ರಾಮದಿಂದ ಹೋಗದಂತೆ  ತಡೆದು ಮುಳ್ಳು ಕಂಟಿ ಹಚ್ಚಿ ವಾಹನಗಳಿಗೆ ಗಾಳಿ ಬಿಟ್ಟು ತಡೆದು ಗ್ರಾಮ ಪಂಚಾಯಿತಿಗೆ ಕರೆಸಿಕೊಂಡು ಗ್ರಾಮಸ್ಥರು ಓಡಿಹೋದ ಅಬಕಾರಿ ಸಬ್ ಇನ್ಸ್ಪೆಕ್ಟರ್ ಬರಬೇಕೆಂದು ಪಟ್ಟು ಹಿಡಿದರು ಕೆಲವೊತ್ತು ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಚಿತ್ತಾಪುರ ಸಿಪಿಐ ಪ್ರಕಾಶ್ ಯಾತನೂರ, ಹಾಗೂ ಅಬಕಾರಿ ಇಲಾಖೆಯ ಉಪ ಅಧೀಕ್ಷಕರು ವಿಜಯಕುಮಾರ್ ರಾಂಪುರೆ, ಅಬಕಾರಿ ಸಿಪಿಐ ಶರಣಗೌಡ ಬಿರಾದರ್, ಚಿತ್ತಾಪುರ ಅಬಕಾರಿ ಪಿಎಸ್ಐ ರಮೇಶ್ ಬಿರಾದರ್, ಆಗಮಿಸಿ ಪಂಚಾಯತ್ ಕಚೇರಿಯಲ್ಲಿ  ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಎಮ್ಮೆನೂರ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಿವಕುಮಾರ್ ಸುಣಗಾರ್,   ಹಾಗೂ ಶಿವಾಜಿ ಭೂವಿ, ಬಸವರಾಜ್ ಹಾದಿಮನಿ, ಮೌನೇಶ್ ಹೊಸಳ್ಳಿ, ರಾಜಣ್ಣ ಕಂಬಾರ್, ಗ್ರಾಮ ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ಚಿಂಚೋಳಿ ಸಬ್ ಇನ್ಸ್ಪೆಕ್ಟರ್ ಜಟ್ಟಪ್ಪ ಅವರಿಗೆ ಫೋನ್ ಮಾಡಿ ಭೀಮನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಕಾಸಲ್ ಅವರಿಗೆ ಫೋನಿನಲ್ಲಿ ಕ್ಷಮೆ ಯಾಚಿಸಿ ಸಂಧಾನ ಮಾಡಿಸಿದರು.

 ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸಿ ಮಾರಾಟ ಮಾಡುತ್ತಿದ್ದ  ಮಹಿಳೆಯನ್ನು ವಶಕ್ಕೆ ಪಡೆಯಲು ಅಬಕಾರಿ ಇಲಾಖೆ ಯವರು ಬಂದಿದ್ದರೆ ಮಹಿಳಾ ಅಬಕಾರಿ ಅಧಿಕಾರಿಯವರನ್ನು ಕರೆತಂದು ವಿಚಾರಣೆ ನಡೆಸಿ ವಶಕ್ಕೆ ಪಡೆಯಬೇಕಾಗಿತ್ತು ಅಥವಾ ಗ್ರಾಮ್ ಪಂಚಾಯತ್ ಪಿಡಿಓ, ಅಧ್ಯಕ್ಷರ ಮಾಹಿತಿ ಪಡೆಯಬೇಕಿತ್ತು ಆದರೆ ಏಕಾಏಕಿ ಗ್ರಾಮದ ಮಹಿಳೆಯ ಮನೆಗೆ ನುಗ್ಗಿ ಕಳ್ಳಬಟ್ಟಿ ಸಾರಾಯಿ ತುಂಬಿದ ಕೊಡಗಳನ್ನು ಚೆಲ್ಲಿ ಗಾಡಿಯಲ್ಲಿ ಕೂಡು ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ಇದು ಅವರು ಮಾಡಿದ ದೌರ್ಜನ್ಯ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

 ಈ ಗಲಾಟೆಗೆ ಸಂಬಂಧಿಸಿದಂತೆ ಅಬಕಾರಿ ಅಧಿಕಾರಿಗಳಿಗೆ ಕೇಳಿದರೆ ಮಾಹಿತಿ ನೀಡಲಿಲ್ಲ ನಮಗೆ ಮಾಹಿತಿ ನೀಡುವ ಹಕ್ಕು ಇಲ್ಲ ಜಿಲ್ಲಾ ಅಬಕಾರಿ ಅಧಿಕಾರಿಗಳ ಹತ್ತಿರ ಮಾಹಿತಿ ಪಡೆಯಿರಿ ಎಂದು ಹರುಕು ಉತ್ತರ ನೀಡಿದ್ದಾರೆ.

 ಇಂತಹ ಘಟನೆಗೆ ಸಂಬಂಧಿಸಿದಂತೆ ಒಂದು ಹೇಳಿಕೆ ನೀಡದ ಅಧಿಕಾರಿಗಳು ಇನ್ನು ಕರ್ತವ್ಯ ಹೇಗೆ ನಿರ್ವಹಿಸುತ್ತಾರೆ ಜನಸಾಮಾನ್ಯರ ಜೊತೆ ಹೀಗೆ ವರ್ತಿಸುತ್ತಾರೆ ಎಂಬುದೇ ಒಂದು ಸವಾಲಾಗಿದೆ.

-ಅಶೋಕ್ ಕಾಸಲ್ ಗ್ರಾಪಂ, ಅಧ್ಯಕ್ಷರು ಭೀಮನಹಳ್ಳಿ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.