ರಾಜ್ಯೋತ್ಸವ ಪ್ರಶಸ್ತಿಗೆ ಏಳು ಜನ ಸಾಧಕರ ಆಯ್ಕೆ.
ಚಿತ್ತಾಪುರ: ಕರ್ನಾಟಕ ರಾಜ್ಯೋತ್ಸವದ ನಿಮಿತ್ಯ ನಾಗಾವಿ ಸಾಹಿತ್ಯ ಸಾಂಸ್ಕೃತಿ ಪರಿಷತ್ತ್ ವತಿಯಿಂದ ಕೊಡಲ್ಪಡುತ್ತಿರುವ ರಾಜ್ಯೋತ್ಸವ ಪ್ರಶಸ್ತಿಗೆ ತಾಲೂಕಿನ ವಿವಿಧ ಕ್ಷೇತ್ರದ ಏಳು ಜನ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಪರಿಷತ್ತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತ್ ಪದಾಧಿಕಾರಿಗಳ ಸಭೆಯಲ್ಲಿದ್ದ ಎಲ್ಲ ಪದಾಧಿಕಾರಿಗಳ ಒಮ್ಮತದಿಂದ ಆಯಾ ಕ್ಷೇತ್ರದಲ್ಲಿ ಸಾಧನೆಗೈದ ಮತ್ತು ಗಣನೀಯ ಸೇವೆ ಸಲ್ಲಿಸಿದ್ದ ಸಾಧಕರನ್ನು ಗುರುತಿಸಿ ಯೋಗ್ಯ ಮತ್ತು ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ಬಸ್ಸಪ್ಪ ಮುಗುಳಖೋಡ (ಶಿಕ್ಷಣ ಕ್ಷೇತ್ರ), ವೀರಯ್ಯಸ್ವಾಮಿ ಸ್ಥಾವರಮಠ (ಸಾಹಿತ್ಯ ಕ್ಷೇತ್ರ), ಅಯ್ಯಣ್ಣ ಮಾಸ್ತರ ವಿಶ್ವಕರ್ಮ(ಸಂಗೀತ ಕ್ಷೇತ್ರ), ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ(ರಂಗಭೂಮಿ ಕ್ಷೇತ್ರ), ನರಸಿಂಹ ಆಲಮೇಲಕರ್ (ಚಿತ್ರಕಲೆ ಕ್ಷೇತ್ರ), ಮಹ್ಮದ ಇಬ್ರಾಹಿಂ (ಸಾಮಾಜಿಕ ಸೇವಾ ಕ್ಷೇತ್ರ), ಡಿ.ನರಸಯ್ಯಗೌಡ (ಕೃಷಿ ಕ್ಷೇತ್ರ) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತ್ ಉದ್ಘಾಟನೆ ಜೊತೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದ ದಿನಾಂಕವನ್ನು ಇಷ್ಟರಲ್ಲೇ ನಿಗದಿಪಡಿಸಿ ಶಾಸಕ ಪ್ರಿಯಾಂಕ್ ಖರ್ಗೆ ಸೇರಿದಂತೆ ಇತರೆ ಅತಿಥಿ ಗಣ್ಯಮಾನ್ಯರು ಹಾಗೂ ಸಾಹಿತಿಗಳನ್ನು ಅಹ್ವಾನಿಸಿ ಅರ್ಥಪೂರ್ಣವಾದ ಕಾರ್ಯಕ್ರಮ ಮಾಡಲು ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ವೀರಸಂಗಪ್ಪ ಸುಲೇಗಾಂವ, ಪದಾಧಿಕಾರಿಗಳಾದ ನರಸಪ್ಪ ಚಿನ್ನಕಟ್ಟಿ, ಶಾಂತಕುಮಾರ ಮಳಖೇಡ, ಭಾರತಿ ಸಿಂಪಿ, ರವಿಶಂಕರ ಬುರ್ಲಿ, ರಾಜಶೇಖರ ಬಳ್ಳಾ, ದೇವಪ್ಪ ನಂದೂರಕರ್, ಪ್ರದೀಪ ಕುಲಕರ್ಣಿ, ಜಗದೇವ ಕುಂಬಾರ, ಯಲ್ಲಯ್ಯ ಕಲಾಲ್ ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ