ಸಾಹಿತ್ಯಿಕ, ಸಾಂಸ್ಕೃತಿಕ ವಾತಾವರಣ ನಿರ್ಮಿಸುವ ಗುರಿ: ಗುತ್ತೇದಾರ್
ಚಿತ್ತಾಪುರ: ನಾಗಾವಿ ನಾಡು ಎಂದು ಖ್ಯಾತಿ ಪಡೆದ ಚಿತ್ತಾಪುರ ತಾಲೂಕಿನಲ್ಲಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಹೊಸದಾಗಿ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತ್ ಹುಟ್ಟು ಹಾಕಲಾಗಿದೆ ಎಂದು ಪರಿಷತ್ತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತ್ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲ್ಲಿನ ಐತಿಹಾಸಿಕ ನಾಗಾವಿ ಕ್ಷೇತ್ರದ ಇತಿಹಾಸದ ಕೈಪಿಡಿಯನ್ನು ಸಿದ್ದಪಡಿಸುವ ಮೂಲಕ ಮನೆ ಮನೆಗೆ ಮುಟ್ಟಿಸುವ ಗುರಿ ಹೊಂದಲಾಗಿದೆ ಈ ನಿಟ್ಟಿನಲ್ಲಿ ನಮ್ಮ ನೆಲದ ಇತಿಹಾಸವನ್ನು ಪರಿಚಯಿಸುವ ಕೆಲಸ ಮಾಡಲಾಗುವುದು ಎಂದರು.
ಪ್ರತಿ ವರ್ಷ ನಾಗಾವಿ ಉತ್ಸವ ಹಾಗೂ ವಿವಿಧ ಸಾಧಕರನ್ನು ಗುರುತಿಸಿ ನಾಗಾವಿ ಪ್ರಶಸ್ತಿ ಪ್ರಧಾನ ಮಾಡುವುದು, ತಾಲೂಕಿನ ಸಾಹಿತಿಗಳನ್ನು ಒಂದಡೇ ಸೇರಿಸಿ ಸಾಹಿತಿಗಳ ಸಂಗಮ, ಶಿಕ್ಷಕರ ಕವಿಗೋಷ್ಠಿ, ಮಕ್ಕಳ ಕವಿಗೋಷ್ಠಿ, ಸಾಹಿತ್ಯ ವಿಚಾರ ಸಂಕೀರ್ಣ, ಕವಿ ಕಲಾವಿಧರನ್ನು ಗುರುತಿಸಿ ಮುಖ್ಯವಾಹಿನಿಗೆ ತರುವುದು, ನಾಗಾವಿ ನೆಲದಲ್ಲಿ ಬೆಳದಿಂಗಳು ಊಟ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಹತ್ತು ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ನ.೨೯ ರಂದು ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತ್ ಉದ್ಘಾಟನೆ ಜೊತೆಗೆ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಮಾಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಅಹ್ವಾನ: ಚಿತ್ತಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಶಿಕ್ಷಣ ಕ್ಷೇತ್ರ, ಸಾಹಿತ್ಯ ಕ್ಷೇತ್ರ, ಸಂಗೀತ ಕ್ಷೇತ್ರ, ನಾಟಕ (ರಂಗಭೂಮಿ) ಕ್ಷೇತ್ರ, ಕೃಷಿ ಕ್ಷೇತ್ರ, ಕಲಾ, ಸಮಾಜ ಸೇವಾ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು ರಾಜ್ಯೋತ್ಸವ ಪ್ರಶಸ್ತಿಗಾಗಿ ತಮ್ಮ ಸೂಕ್ತ ದಾಖಲೆಗಳೊಂದಿಗೆ ಸ್ವ ವಿವರ ಮಾಹಿತಿಯನ್ನು ನರಸಪ್ಪ ಚಿನ್ನಕಟ್ಟಿ ಶಿಕ್ಷಕರು ಅಣ್ಣೆಮ್ಮ ಗೊಬ್ಬುರ ಪ್ರೌಢ ಶಾಲೆ ಶಹಾಬಾದ ರಸ್ತೆ ಚಿತ್ತಾಪುರ ವಿಳಾಸಕ್ಕೆ ಇದೇ ನ.೨೫ರ ಒಳಗೆ ಸಲ್ಲಿಸಬೇಕು ಹೆಚ್ಚಿನ ಮಾಹಿತಿಗಾಗಿ ಮೋ.೯೮೮೦೬೩೭೪೧೮, ೯೯೭೨೮೯೫೭೭೧ ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಪದಾಧಿಕಾರಿಗಳ ಆಯ್ಕೆ: ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತ್ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಕಾಶಿನಾಥ ಗುತ್ತೇದಾರ (ಅಧ್ಯಕ್ಷರು) ಸಾಯಬಣ್ಣಾ ಗುಡುಬಾ, ರವೀಂದ್ರ ಇವಣಿ, ನರಸಪ್ಪ ಚಿನ್ನಕಟ್ಟಿ (ಉಪಾಧ್ಯಕ್ಷರು), ವೀರಸಂಗಪ್ಪ ಸುಲೇಗಾಂವ (ಪ್ರಧಾನ ಕಾರ್ಯದರ್ಶಿ), ನಟರಾಜ ಶಿಲ್ಪಿ (ಸಹ ಕಾರ್ಯದರ್ಶಿ), ಶಾಂತಕುಮಾರ ಮಳಖೇಡ (ಸಂಘಟನಾ ಕಾರ್ಯದರ್ಶಿ), ರವಿಶಂಕರ ಬುರ್ಲಿ (ಖಜಾಂಚಿ), ಮಹ್ಮದ ಮಶಾಕ್, ಜಗದೇವ ಕುಂಬಾರ, ಯಲ್ಲಯ್ಯಾ ಕಲಾಲ್, ರಾಜಶೇಖರ ಬಳ್ಳಾ, ದೇವಪ್ಪ ನಂದೂರಕರ್, ಮುನಿಯಪ್ಪ ಕಡಬೂರ, ಮಲ್ಲಿಕಾರ್ಜುನ ಮದನಕರ್, ಶಿವಲೀಲಾ ಕಲಗುರ್ಕಿ, ಭಾರತಿ ಸಿಂಪಿ, ವಿಷ್ಣುವರ್ಧನರೆಡ್ಡಿ, ಮೋನಯ್ಯ ಪಂಚಾಳ, ದೇವಿಂದ್ರಪ್ಪ ಇಮಡಾಪೂರ, ಪ್ರದೀಪ ಕುಲಕರ್ಣಿ (ಸದಸ್ಯರು) ಆಯ್ಕೆಯಾಗಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ