ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.
ಮುಂದಿನ ಚುನಾವಣೆಯಲ್ಲಿ 50 ಸಾವಿರ ಮತಗಳಿಂದ ಬಿಜೆಪಿ ಗೆಲ್ಲಿಸುವೆ:ಮಣಿಕಂಠ
ಚಿತ್ತಾಪುರ: ಕೆಲವು ಸಣ್ಣಪುಟ್ಟ ತಪ್ಪುಗಳಿಂದ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನನಗೆ ಸೋಲು ಉಂಟಾಗಿದೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನನಗೆ ಟಿಕೇಟ್ ಸಿಗಲಿ ಅಥವಾ ಯಾರೇ ಅಭ್ಯರ್ಥಿಯಾಗಲಿ ಅವರ ಪರ ಶ್ರಮಿಸಿ 50 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲಾಗುವುದು ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಹೇಳಿದರು.
ಪಟ್ಟಣದ ಬಾಪುರಾವ್ ಪಾಟೀಲ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ವಿಧಾನಸಭೆ ಚುನಾವಣೆ ನಿಮಿತ್ತ ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಮೊದಲ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ ನನಗೆ ಸ್ವಲ್ಪ ಮಾರ್ಗದರ್ಶನ ಕೊರತೆ ಇತ್ತು ನಾನು ಎಲ್ಲರನ್ನೂ ತೆಗೆದುಕೊಂಡು ಹೋಗಲು ಆಗಲಿಲ್ಲ, ಎಲ್ಲ ಮುಖಂಡರನ್ನು ಹಾಗೂ ಕಾರ್ಯಕರ್ತರ ಸಮೀಪ ಹೋಗುವುದಕ್ಕೆ ಆಗಲಿಲ್ಲ ಆದರೂ ಪಕ್ಷದ ಮೇಲೆ ಹಾಗೂ ನನ್ನ ಮೇಲೆ ವಿಶ್ವಾಸವಿಟ್ಟು ಕಾರ್ಯಕರ್ತರು ಹಗರಲಿರಳು ಶ್ರಮಿಸಿದ್ದರಿಂದ ೬೭ ಸಾವಿರಕ್ಕೂ ಅಧಿಕ ಮತಗಳು ಬಂದಿವೆ ಇದೊಂದು ದೊಡ್ಡ ಸಾಧನೆ ಈ ಮೂಲಕ ಚಿತ್ತಾಪುರದಲ್ಲಿ ಕಾರ್ಯಕರ್ತರೇ ಬಿಜೆಪಿಗೆ ದೊಡ್ಡ ಶಕ್ತಿಯಾಗಿದ್ದಾರೆ ಎಂಬುದು ತೋರಿಸಿಕೊಟ್ಟಿದ್ದಾರೆ ಎಂದರು.
ಕಾರ್ಯಕರ್ತರು ಯಾರೂ ಎದೆಗುಂದದೇ ನಿಮ್ಮ ಜೊತೆ ನಾನು ಇದ್ದೇನೆ ಪಕ್ಷದ ಸಂಘಟನೆಯಲ್ಲಿ ತೊಡಗಬೇಕು, ಈ ನಿಟ್ಟಿನಲ್ಲಿ ಬರುವ ತಾಲೂಕು ಪಂಚಾಯತ, ಜಿಲ್ಲಾ ಪಂಚಾಯತ ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವಂತೆ ಈಗಿನಿಂದಲೇ ಕಾರ್ಯಪ್ರವೃತರಾಗಿ ಎಂದು ಕರೆ ನೀಡಿದರು.
ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಎಮ್ಮೆನೋರ, ಚಂದ್ರಶೇಖರ ಅವಂಟಿ, ಸೋಮಶೇಖರ ಪಾಟೀಲ ಬೆಳಗುಂಪಾ, ಬಸವರಾಜ ಬೆಣ್ಣೂರಕರ್,ನಾಗರಾಜ ಭಂಕಲಗಿ ಅವರು ಮಾತನಾಡಿ,ಚುನಾವಣೆಯಲ್ಲಿ ಕೆಲವು ಸಣ್ಣಪುಟ್ಟ ತಪ್ಪುಗಳಿಂದ ನಮಗೆ ಸೋಲಾಗಿದೆ ಬರುವ ದಿನಗಳಲ್ಲಿ ಎಲ್ಲರೂ ಒಗ್ಗೂಡಿ ಪಕ್ಷದ ಸಂಘಟನೆಯಲ್ಲಿ ತೊಡಗಿ ಮತ್ತೇ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಹೇಳಿದರು.
ಬಿಜೆಪಿ ತಾಲೂಕು ಅಧ್ಯಕ್ಷ ನೀಲಕಂಠ ಪಾಟೀಲ, ತೊಗರಿ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ, ಮುಖಂಡರಾದ ವಿಠಲ್ ನಾಯಕ, ಶಶಿಧರ ಸೂಗುರ, ಧರ್ಮಣ್ಣ ಇಟಗಾ, ಬಸವರಾಜ ಬೆಣ್ಣೂರಕರ್, ಮಲ್ಲಿಕಾರ್ಜುನ ಪೂಜಾರಿ, ನಾಗುಬಾಯಿ ಜಿತುರೆ, ಆನಂದ ಪಾಟೀಲ ನರಬೋಳ, ಶರಣಗೌಡ ಪಾಟೀಲ ಭೀಮನಳ್ಳಿ, ಗುಂಡಣ್ಣ ಬಾಳಿ, ರವೀಂದ್ರ ಸಜ್ಜನಶೆಟ್ಟಿ, ಪೋಮು ರಾಠೋಡ, ಶಂಕರ ಚವ್ಹಾಣ, ಭೀಮರೆಡ್ಡಿ ಕುರಾಳ, ಮಹೇಂದ್ರ ಕೋರಿ, ಅಣ್ಣಾರಾವ ಬಾಳಿ, ಶ್ರೀಕಾಂತ ಸುಲೇಗಾಂವ ಇತರರು ಇದ್ದರು. ರಾಮದಾಸ ಚವ್ಹಾಣ ನಿರೂಪಿಸಿದರು, ನಾಗರಾಜ ಹೂಗಾರ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ