ನಿಮ್ಮ ಮಗನಾಗಿ ಸೇವೆ ಮಾಡುವೆ: ಮಣಿಕಂಠ ರಾಠೋಡ.
ಚಿತ್ತಾಪೂರ: ಮೇ,೧೦ಕ್ಕೆ ನಡೆಯಲ್ಲಿರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡುವ ಮೂಲಕ ನನ್ನಗೆ ಗೆಲ್ಲಿಸಿ ನಾ ನಿಮ್ಮ ಮನೆಯ ಮಗನಾಗಿ ಕೆಲಸ ಮಾಡುವೆ ಎಂದು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಮತದಾರರಲ್ಲಿ ಮನವಿ ಮಾಡಿದರು.
ತಾಲ್ಲೂಕಿನ ಸಾತನೂರ, ಹೊಸೂರ, ಭಂಕಲಗಾ, ಅಣೀಕೇರ ತಾಂಡಾ, ಭೀಮನಹಳ್ಳಿ, ಆಲೂರ, ಸೂಲಹಳ್ಳಿ, ಕಮರವಾಡಿ, ಕಮರವಾಡಿ ತಾಂಡಾ, ಡಿಗ್ಗಿ ತಾಂಡಾದಲ್ಲಿ ಚುನಾವಣೆಯ ಪ್ರಚಾರ ಕುರಿತು ಮಾತನಾಡಿದ ಅವರು.
ನಾನು ಕ್ಷೇತ್ರದಲ್ಲಿ ಸಾಕಾಷ್ಟು ಸಮಾಜ ಸೇವೆ ಮಾಡಿರುವೆ. ಅದು ನಾ ಏನೂ ಹೇಳಬೇಕಿಲ್ಲ. ಅದು ನಿಮ್ಮೆಲ್ಲರಿಗೆ ಗೊತ್ತಿದೆ. ಪ್ರಿಯಾಂಕ್ ಖರ್ಗೆ ಅವರ ಬೇಜವಾಬ್ದಾರಿಯಿಂದ ಕೆಲ ಕ್ಷೇತ್ರಗಳಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲದೆ ಜನರು ಪರದಾಡುವ ಪರಿಸ್ಥಿತಿ ಉಂಟಾಗಿದೆ ಹೀಗಾಗಿ ಮುಂಬರುವ ದಿನಗಳಲ್ಲಿ ನನ್ನಗೆ ಒಂದು ಬಾರಿ ಅವಕಾಶ ಕೋಡಿ ಕ್ಷೇತ್ರದ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯ ಒದಗಿಸುವ ಕೆಲಸ ನಾನು ನಿಷ್ಠೆಯಿಂದ ಮಾಡಿ ತೋರಿಸುವೆ.
ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿಷದ ಹಾವು ಎಂದು ಹೇಳಿ ದೇಶದ ಪ್ರಧಾನಿಗೆ ಅಪಮಾನ ಮಾಡಿದ್ರೆ ಇಲ್ಲಿ ಪ್ರಿಯಾಂಕ್ ಖರ್ಗೆ ಕೊಡ ಮೋದಿಗೆ ನಾಲಾಯಕ ಅನ್ನುವ ಮೂಲಕ ಅಪಮಾನ ಮಾಡುತ್ತಿದ್ದಾರೆ. ಅವರು ಮಾಡುವ ಅಪಮಾನ ಬರಿ ನರೇಂದ್ರ ಮೋದಿಗಷ್ಟೇ ಅಲ್ಲಾ ದೇಶದ ಪ್ರತಿಯೊಬ್ಬ ಪ್ರಜೆಗೆ ಅಪಮಾನ ಮಾಡಿದಂತೆ ಹೀಗಾಗಿ ಅವರಿಗೆ ಮೇ,೧೦ಕ್ಕೆ ನೀವು ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡದೆ ಬಿಜೆಪಿ ಪಕ್ಷಕ್ಕೆ ಮತ ನೀಡಿ ಎಂದರು.
ಸುಮಾರು ೭೦ ವರ್ಷಗಳಿಂದ ನಮ್ಮ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸದೆ,
ಉದ್ಯೋಗ ನೀಡದೆ ತುಳಿದುಕೊಂಡು ಬಂದಿದ್ದರೆ. ಹೀಗಾಗಿ ನಮ್ಮ ಭಾಗದ ಜನರು ಬೆಂಗಳೂರ,ಮುಂಬೈ ,ಹೈದ್ರಾಬಾದ್ ನಲ್ಲಿ ಹೋಗಿ ಕೋಲಿ ನಲ್ಲಿ ಮಾಡಿ ಜೀವನ ನಡೆಸುತ್ತಿದ್ದಾರೆ ಎಂದು ಖರ್ಗೆ ಕುಟುಂಬದ ವಿರುದ್ಧ ಕಿಡಿಕಾರಿದರು.
ಇದೇ ವೇಳೆಯಲ್ಲಿ ನೂರಾರು ಹಿರಿಯರು ಹಾಗೂ ಯುವಕರು ಕಾಂಗ್ರೆಸ್ ಜೆಡಿಎಸ್ ಹಾಗೂ ಇತರ ಪಕ್ಷ ತೊರೆದು ಬಿಜೆಪಿಯ ತತ್ವ ಸಿದ್ಧಾಂತ ಹಾಗೂ ಮಣಿಕಂಠ ರಾಠೋಡ ಅವರ ಸಮಾಜ ಸೇವೆ ಮೆಚ್ಚಿ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ನಿಂಗಾರೆಡ್ಢಿ ಭಾಸರೆಡ್ಡಿ, ಶರಣಗೌಡ, ರಾಮರೆಡ್ಡಿ ಗೌಡ, ಮಲ್ಲಿಕಾರ್ಜುನ ಎಮ್ಮೆನೋರ, ಶಂಕ್ರಣ್ಣ ಗೌಡ, ತಮ್ಮಣ್ಣ ಡಿಗ್ಗಿ, ಮಹಿಪಾಲ್ ಮೂಲಿಮನಿ, ಹಿಬ್ರಾಹಿಂ ದಿಗ್ಗಾಂವ, ಸಣ್ಣ ದೇವಪ್ಪ ಹೋನಪ್ಪನೂರ, ಸೇರಿದಂತೆ ಅನೇಕ ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ