ಶಿಕ್ಷಣ,ಉದ್ಯೋಗಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಪ್ರಿಯಾಂಕ್ ಖರ್ಗೆ.
ಚಿತ್ತಾಪೂರ: ಕ್ಷೇತ್ರದ ಜನತೆಗೆ ಒಳ್ಳೆಯ ಶಿಕ್ಷಣ ಹಾಗೂ ಉದ್ಯೋಗ ಸೀಗಬೇಕಾದರೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ ಹೇಳಿದರು.
ತಾಲ್ಲೂಕಿನ ತೋನಸನಳ್ಳಿ, ಮಲಕೂಡ, ಮರಗೋಳ, ಮುಡಬೂಳ, ಮೋಗಲಿ,
ದಂಡೋತಿ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಹಿಂದೆ ಹೋದರೆ ಜೈಲು ಹಾಗೂ ಬೇಲು ಗ್ಯಾರಂಟಿ ಜನರಿಗೆ ತಿಳಿ ಹೇಳಿದರು.
ಬಿಜೆಪಿಗರು ಮೋದಿ ಫೋಟೋ ತೋರಿಸಿ ಕಳ್ಳನಿಗೆ ಟಿಕೆಟ್ ಕೊಟ್ಟರೆ ಆರಿಸಿ ಕಳಿಸಲು ಚಿತ್ತಾಪುರದ ಪ್ರಬುದ್ಧ ಮತದಾರರು ಮತ ಹಾಕುತ್ತಾರೆಯೇ? ಎಂದು ಪ್ರಶ್ನಿಸಿದರು.
ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡನಿಗೆ ಚುನಾವಣೆಯಲ್ಲಿ ಅಪ್ಪಿತಪ್ಪಿ ಗೆಲ್ಲಿಸಿದರೆ ಅಂಗನವಾಡಿಗೆ ಹೋಗುವ ಮಕ್ಕಳಿಗೆ ಹಾಲು ಸಿಗಲ್ಲ. ಯಾಕೆಂದರೆ, ಅವನು ಅಕ್ರಮವಾಗಿ ಹಾಲಿನಪುಡಿ ಸಾಗಾಣಿಕೆ ಮಾಡಿದ್ದಕ್ಕೆ ಯಾದಗಿರಿ ಕೋರ್ಟ್ ಶಿಕ್ಷೆ ನೀಡಿದೆ. ಅವನ ವಿರುದ್ದ ತೆಲಂಗಾಣ, ಆಂಧ್ರ,ಕರ್ನಾಟಕ ಹಾಗೂ ಮಹಾರಾಷ್ಟ್ರ ಹೀಗೆ ನಾಲ್ಕು ರಾಜ್ಯದ ಆರು ಜಿಲ್ಲೆಗಳಲ್ಲಿ ಅಕ್ರಮ ಅಕ್ಕಿ ಸಾಗಾಣಿಕೆ ಮಾಡಿದಕ್ಕೆ ಒಟ್ಟು 40 ಕೇಸುಗಳಿವೆ. ಹೀಗಾಗಿ ಅವನು ಕೇವಲ ರಾಜ್ಯದ ಫಿಗರ್ ಅಲ್ಲ ದಕ್ಷಿಣ ಭಾರತದ ಫಿಗರ್ ಆಗಿದ್ದಾನೆ ಎಂದು ವ್ಯಂಗ್ಯಮಾಡಿದರು.
ನನಗೆ ನೀವು ಹೇಗೆ ಆಶೀರ್ವಾದ ಮಾಡಬೇಕೆಂದರೆ ಮತ್ತೊಮ್ಮೆ ಬಿಜೆಪಿಗೆ ಚಿತ್ತಾಪುರದಲ್ಲಿ ಅಭ್ಯರ್ಥಿಗೆ ಮತ ಹಾಕಿರಬಾರದು ಎಂದು ಜನತೆಯಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ,ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಬೀಮಣ್ಣ ಸಾಲಿ, ನಾಗರೆಡ್ಡಿಗೌಡ ಪಾಟೀಲ, ರಾಜಶೇಖರ ತಿಮ್ಮನಾಯಕ, ತೆಲಂಗಾಣದ ಸುಜಾತ, ಶರಣಪ್ಪ ನಾಟೀಕಾರ್, ರಾಮಲಿಂಗ ಬಾನರ್, ಸಾಬಣ್ಣ ಡಿಗ್ಗಿ, ಬಸವರಾಜ ಚಿಮ್ಮನ್ನಳ್ಳಿ, ಗುಂಡು ಐನಾಪುರ, ಶರಣು ಡೋಣಗಾಂವ್, ರಮೇಶ ಕವಡೆ, ಸೇರಿದಂತೆ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ