ನೇಟೆರೋಗ ತೊಗರಿ ಬೆಳೆ ನಾಶ, ಪರಿಹಾರಕ್ಕೆ ಆಗ್ರಹ.
ಚಿತ್ತಾಪೂರ: ತೊಗರಿ ಬೆಳೆಗೆ ನೇಟೆರೋಗ ಬಾದೆಯಿಂದ ಚಿತ್ತಾಪೂರ, ಕಾಳಗಿ, ಹಾಗೂ ಶಹಬಾದ ತಾಲೂಕಿನಾದ್ಯಂತ ತೊಗರಿ ಬೆಳೆ ಕಾಯಿ ಕಟ್ಟುವ ಹಂತದಲ್ಲಿ ನೇಟೆರೋಗ ಭಾದೆಯಿಂದ ತೊಗರಿ ಬೆಳೆ ನಾಶವಾಗಿವೆ ಹೀಗಾಗಿ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಅತ್ಯುತ್ತಮ ತೊಗರಿ ಬೆಳೆ ಬೆಳೆಯುವ 3 ತಾಲೂಕುಗಳಲ್ಲಿ ನೇಟೆರೋಗದಿಂದ ಸಂಪೂರ್ಣ ಬೆಳೆ ನಾಶವಾಗಿವೆ. ಈಗಾಗಲೇ ಅತಿವೃಷ್ಟಿಯಿಂದ ಅನೇಕ ಬೆಳೆಗಳು ನಾಶವಾಗಿವೆ. ಇನ್ನು ಅಳಿದು ಉಳಿದ ಬೆಳೆ ನೇಟೆರೋಗ ಬಾದೆಯಿಂದ ಸಂಪೂರ್ಣ ನಾಶವಾಗಿರುವುದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ.
ರೈತ ಪರ ಕಾಳಜಿ ವಹಿಸಿ ಜಿಲ್ಲಾದ್ಯಾದಂತ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮವನ್ನು ಯಶಸ್ವಿ ಮಾಡಿರುವ ಕೀರ್ತಿ ನಿಮಗೆ ಸಲ್ಲುತ್ತದೆ. ರೈತ ಪರ ಕಾಳಜಿ ಹೊಂದಿರುವಂತ ತಾವು ಚಿತ್ತಾಪೂರ ಕಾಳಗಿ, ಹಾಗೂ ಶಹಬಾದ ತಾಲೂಕುಗಳಲ್ಲಿ ಕೃಷಿ ಅಧಿಕಾರಿಗಳ ಮುಖಾಂತರ ಸರ್ವೆ ಮಾಡಿಸಿ. ನೇಟೆರೋಗಕ್ಕೆ ತುತ್ತಾದ ಬೆಳೆಗೆ 25 ಸಾವಿರ ರೂಪಾಯಿ ಪರಿಹಾರ ಒದಗಿಸಲು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ