ಪ್ರಿಯಾಂಕ್ ಖರ್ಗೆ ಬೆಂಬಲಿಗರಿಂದ ಗುಂಡಾವರ್ತನೆ: ಅರವಿಂದ್ ಚವ್ಹಾಣ್.
ಚಿತ್ತಾಪುರ: ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್ ಅಂಟಿಸಿದ್ದೇನೆ ಅದರಲ್ಲಿ ವೈಯಕ್ತಿಕ ಟೀಕೆ ಆಗಲಿ ಅಥವಾ ಅವರ ಬಗ್ಗೆ ಹವ್ಯಾಚ್ಯ ಶಬ್ದಗಳ ಬಳಕೆ ಮಾಡಿಲ್ಲ. ಆದರೆ ಶಾಸಕ ಪ್ರಿಯಾಂಕ ಖರ್ಗೆ ಅವರ ಬೆಂಬಲಿಗರಿಂದ ನನ್ನ ಮೇಲೆ ಮರಣಾಂತಿಕ ಹಲ್ಲೆ ಮಾಡುವ ಮೂಲಕ ಗುಂಡಾವರ್ತನೆ ಮಾಡಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅರವಿಂದ ಚವ್ಹಾಣ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಓರಿಯಂಟ್ ಸಿಮೆಂಟ್ ಕಂಪನಿ ವಿರುದ್ಧ ಇಟಗಾ ಗ್ರಾಮದ ರೈತರು ಧರಣಿ ಕುಳಿತು 80 ದಿನಗಳಾದರೂ ಶಾಸಕರು ಭೇಟಿ ನೀಡಿಲ್ಲ. ಕೆಲ ದಿನಗಳ ಹಿಂದೆ ಶಂಕರ್ ವಾಡಿ ಬ್ರಿಜ್ ಹತ್ತಿರ ಸರ್ಕಾರಿ ಬಸ್ ಪಲ್ಟಿ ಪಲ್ಟಿಯಾಗಿ ಸುಮಾರು ಜನ ಆಸ್ಪತ್ರೆ ಸೇರಿದರು ಆಗ ಕ್ಷೇತ್ರದ ಶಾಸಕರು ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಲಿಲ್ಲ. ಹಾಗೂ ಇನ್ನೂ ಅನೇಕ ಸಮಸ್ಯೆಗಳು ಕ್ಷೇತ್ರದಲ್ಲಿ ಇದ್ದು. ಇಂತಹ ಸಮಸ್ಯೆಗಳು ಜನಸಾಮಾನ್ಯರು ಕೇಳುವುದಾದರೂ ಯಾರಿಗೆ ಅವರ ಬೆಂಬಲಿಗರು ಬೆಂಗಳೂರಿಗೆ ಹೋಗಿ ತಮ್ಮ ಕೆಲಸಗಳನ್ನು ಮಾಡಿಕೊಂಡು ಬರುತ್ತಾರೆ. ಆದರೆ ಕ್ಷೇತ್ರದ ಜನಸಾಮಾನ್ಯ ಜನರು ಬೆಂಗಳೂರಿಗೆ ಹೋಗಲು ಆಗದೆ ತಮ್ಮ ಸಮಸ್ಯೆಗಳನ್ನು ಯಾರಿಗೆ ಹೇಳಬೇಕು ಎಂದು ಸುಮ್ಮನೆ ಕುಳಿತುಕೊಳ್ಳುತ್ತಿದ್ದಾರೆ.
ತಾವು "ಪೇ ಸಿಎಂ" ಎಂದು ಪೋಸ್ಟರ್ ಅಂಟಿಸಿಲ್ಲವೇ ?
ಹೀಗಿರುವಾಗ ಕ್ಷೇತ್ರದ ಶಾಸಕರು ಕಾಣೆಯಾಗಿದ್ದಾರೆ ಅವರನ್ನು ಹುಡುಕಿ ಕ್ಷೇತ್ರಕ್ಕೆ ಕಳುಹಿಸಿ ಎಂದು ಪ್ರಕಟಣೆ ನೀಡಿದ್ದು ತಪ್ಪೇ ಎಂದು ಪ್ರಶ್ನಿಸಿದರು.
ತಮ್ಮ ಬೆಂಬಲಿಗರು, ರೌಡಿ ಶೀಟರ್ ಗಳು ನನ್ನ ಮೇಲೆ ಮರಣಾಂತಿಕ ಹಲ್ಲೆ ಮಾಡುವ ಮೂಲಕ ಕಾನೂನನ್ನು ಉಲ್ಲಂಘಿಸಿದ್ದಾರೆ. ಪಿಎಸ್ಐ ಸಮ್ಮುಖದಲ್ಲಿ ನನ್ನ ಮೇಲೆ ಹಲ್ಲೆ ಮಾಡಿ ನಮ್ಮ 40 ಜನರ ಮೇಲೆ ಕಾಂಗ್ರೆಸ್ನವರು ಜಾತಿ ನಿಂದನೆ ಕೇಸ್ ಹಾಕಿದ್ದಾರೆ. ಆದರೆ ಆ 40 ಜನರಲ್ಲಿ ಸ್ಥಳದಲ್ಲಿ ಇರದ ಹಾಗೂ ಆಸ್ಪತ್ರೆಯಲ್ಲಿದ್ದವರ ಮೇಲೆ ಕೇಸ್ ಮಾಡಲಾಗಿದೆ ಇದು ನ್ಯಾಯವೇ ಎಂದರು.
ನಿಮ್ಮ ಗುಂಡಾ ವರ್ತನೆಗೆ ನಾವು ಹೆದರುವುದಿಲ್ಲ. ಈಗ ಕ್ಷೇತ್ರದಲ್ಲಿ ಪ್ರಿಯಾಂಕ ಖರ್ಗೆ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್ ಅಂಟಿಸಿದ್ದೇವೆ. ಇನ್ನು ಮುಂದೆ ಕ್ಷೇತ್ರದ ಪ್ರತಿ ಬೂತ್ ಗಳಲ್ಲಿ ಪ್ರಿಯಾಂಕ ಖರ್ಗೆ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್ ಅಂಟಿಸುತ್ತೇವೆ ಏನು ಮಾಡುತ್ತೀರಿ ಮಾಡಿಕೊಳ್ಳಿ ಎಂದು ಸವಾಲ್ ಹಾಕಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಉಸ್ತುವಾರಿ ಶಶಿಧರ್ ಸೂಗೂರು, ತಾಲೂಕ್ ಅಧ್ಯಕ್ಷ ನೀಲಕಂಠರಾವ್ ಪಾಟೀಲ್, ನಗರಾಧ್ಯಕ್ಷ ಮಲ್ಲಿಕಾರ್ಜುನ್ ಪೂಜಾರಿ, ಶ್ರೀಮತಿ ಕವಿತಾ ಚವ್ಹಾಣ್, ಶರಣಪ್ಪ ನಾಟಿಕರ್, ಭೀಮಣ್ಣ ಸೀಭಾ, ಶಿವರಾಮ್ ಪವಾರ್, ಮಹೇಶ್ ಬಟಗೇರಿ, ಮೇಘರಾಜ್ ಗುತ್ತೇದಾರ್, ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ