ಬಡ ಮಹಿಳೆಯರಿಗೆ ಸೀರೆ ವಿತರಣೆ.
ಚಿತ್ತಾಪುರ: ಕ್ಷೇತ್ರದ ಶಾಸಕ ಪ್ರಿಯಾಂಕ ಖರ್ಗೆ ಅವರ 44ನೇ ಜನ್ಮದಿನದ ನಿಮಿತ್ಯ ಪಟ್ಟಣದ ದೇವದಾಸಿ ಕಾಲೋನಿಯಲ್ಲಿನ ವಿಮುಕ್ತ ದೇವದಾಸಿ ಬಡ ಮಹಿಳೆಯರಿಗೆ ಸೀರೆ ವಿತರಣೆ ಮಾಡಿದರು.
ನಂತರ ಕೇಕ್ ಕಟ್ ಮಾಡಿ ಪ್ರತಿಯೊಬ್ಬರಿಗೆ ಸಿಹಿ ತಿನಿಸಿ, ಡಿಎಸ್ಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬೆಣ್ಣೂರಕರ್ ಮಾತನಾಡಿ ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕರು ಹಗಲು-ಇರುಳು ಅನ್ನದೆ ಶ್ರಮಿಸುತ್ತಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅವರನ್ನು ನಾವು ಬೆಂಬಲಿಸಿ ಗೆಲ್ಲಿಸುವ ಜೊತೆಗೆ ಅವರ ಸರಳ ಮನೋಭಾವನೆಯನ್ನು ನಾವೆಲ್ಲರೂ ಪಾಲಿಸೋಣ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಕಾಂತ್ ಶಿಂಧೆ, ಜಗನ್ನಾಥ ಮುಡಬೂಳಕರ್, ಆನಂದ್ ಮೊಗಲಾ, ಸಂಜಯ ಬುಳಕರ್, ವಿಜಯ್ ಕುಮಾರ್ ಚವ್ಹಾಣ, ಮಲ್ಲಿಕಾರ್ಜುನ್ ಕಲ್ಮರಿ, ಶರಣಬಸ್ಸು ಮುತ್ತಾಗಿ, ಸಿದ್ದಾರ್ಥ್, ಬಸವರಾಜ್, ರವಿ, ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ