ಬಜಾಜ್ ಕಾಂಪ್ಲೆಕ್ಸ್ ನಲ್ಲಿ ಅನೈತಿಕ ಚಟುವಟಿಕೆ.
ಚಿತ್ತಾಪುರ: ಪಟ್ಟಣದ ಬಜಾಜ್ ಕಾಂಪ್ಲೆಕ್ಸ್ ಮಾಳಿಗೆ ಬಿ68 ಸ್ವಾಮಿ ಬರ್ತಡೇ ಸೆಲೆಬ್ರೇಶನ್ ಇವೆಂಟ್ ನಲ್ಲಿ ಸಂಶಯದ ಮೆರೆಗೆ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಮೂಲನಿವಾಸಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸೇರ್ ಅಲಿ
ಶೇಖ್ ತಿಳಿಸಿದ್ದಾರೆ.
ಜ,13 ಸೋಮವಾರ ಬೆಳಗ್ಗೆ 10:45ಕ್ಕೆ ಬರ್ತಡೇ ಸೆಲೆಬ್ರೇಶನ್ ಸಲುವಾಗಿ ಹುಡುಗ/ಹುಡುಗಿ ಸ್ವಾಮಿ ಬರ್ತಡೆ ಸೆಲೆಬ್ರೇಶನ್ ಇವೆಂಟ್ ಬಂದಿರುತ್ತಾರೆ ಬರ್ತಡೆ ಆಚರಣೆ ಮಾಡಿಕೊಳ್ಳಲು ಬಿಟ್ಟು ಹೋಗಿರುತ್ತಾರೆ ಮಧ್ಯಾಹ್ನ 2 ಗಂಟೆಯ ನಂತರ ಹುಡುಗ/ ಹುಡುಗಿ ಮಳಿಗೆಯಿಂದ ಹೊರಗೆ ಬರುವ ದೃಶ್ಯ ಕಂಡು ಪಕ್ಕದ ಮಳಿಗೆಯವರು ಸಂಶಯದ ಮೇಲೆ ಅವರಿಗೆ ವಿಚಾರಿಸಿದಾಗ ಭಯದಿಂದ ಅವರು ಓಡಿ ಹೋಗಿರುತ್ತಾರೆ ಇಂದು ಒಂದೆ ಘಟನೆ ಅಲ್ಲಾ ಇಲ್ಲಿ ಸುಮಾರು ಸಾರಿ ಈ ರೀತಿ ಘಟನೆಗಳು ಆಗಿವೆ ಎಂದಿದ್ದಾರೆ.
ಬರ್ತಡೇ ಸೆಲೆಬ್ರೇಶನ್ ಇವೆಂಟ್ ಒಳಗಡೆ ನೋಡಿದರೆ ಎಲ್ಲೆಂದರಲ್ಲಿ ಕಾಂಡೊಮ್ ಬಿದ್ದಿದು ಕಂಡುಬಂದಿತ್ತು.
ಡಸ್ಟ್ ಬಿನ್ ಒಂದರಲ್ಲಿ ಕಾಂಡೊಮ್ ಬಳಕೆ ಮಾಡಿ ಬಿಸಾಡಿದ ದೃಶ್ಯ ಸಹ ಕಂಡಿತು, ಹಾಗೂ ಸಿಸಿ ಕ್ಯಾಮೆರಾ ಕಿತ್ತಿ ಹಾಕಲಾಗಿತ್ತು. ಹಾಗೆ ಬೆಳಗ್ಗೆಯಿಂದ ರಾತ್ರಿವರೆಗೂ ಇಲ್ಲಿ ಒಂದಲ್ಲ ಒಂದು ಕಾರ್ಯಕ್ರಮ ನಡೆಯುತ್ತಿರುತ್ತವೆ. ಸಮಯದ ಮಿತಿ ಇಲ್ಲ, ಒಳಗಡೆ ಮಧ್ಯಪಾನ ಸಹ ಮಾಡುತ್ತಾರೆ ಎನ್ನಲಾಗುತ್ತಿದೆ. ಇಷ್ಟೆಲ್ಲ ವಿಷಯ ಕಂಡು ಪಕ್ಕದ ಮಾಳಿಗೆಯವರಿಗೆ ಸಂಶಯ ಉಂಟಾಗಿದೆ ಎನ್ನುತ್ತಾರೆ.
ಈ ಮಾಳಿಗೆಯ ಅಕ್ಕ-ಪಕ್ಕ ಮತ್ತು ಹಿಂದೆ-ಮುಂದೆ ಹೈಟೆಕ್ ಕಂಪ್ಯೂಟರ್ ತರಬೇತಿ, ಬ್ಯೂಟಿ ಪಾರ್ಲರ್, ಮುತ್ತೂಟ್ ಫೈನಾನ್ಸ್, ಮೇಲೆ ಶಾಲಾ ಕಾಲೇಜು, ಹೀಗೆ ಅನೇಕ ಮಾಳಿಗೆಗಳಿದ್ದು ಈ ವಿಷಯ ತಿಳಿದು ಅವರೆಲ್ಲರಿಗೂ ಮುಜುಗರ ಉಂಟಾಗಿದೆ ಎನ್ನಲಾಗಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ವಾಮಿ ಬರ್ತಡೇ ಸೆಲೆಬ್ರೇಶನ್ ಇವೆಂಟ್ ಮಾಲೀಕರನ್ನು ಕರೆಸಿ ವಿಚಾರಿಸಿ ಅಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆ ನಿಜಾನಾ ಸುಳ್ಳ ಎಂಬ ತನಿಖೆಯನ್ನು ಕೈಗೊಂಡು ಸತ್ಯ ಸತ್ಯತೆಯನ್ನು ಮೂಲಕ ತಪ್ಪಿತಸ್ಥನಿಗೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿದ್ದಾರೆ.
1) ಬರ್ತಡೇ ಸೆಲೆಬ್ರೇಶನ್ ಇವೆಂಟ್ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ಸುದ್ದಿ ತಿಳಿದ ಬಂದಿದೆ ಕೂಡಲೆ ಅವರನ್ನು ಮಳಿಗೆ ಖಾಲಿ ಮಾಡಿಸುವುದಾಗಿ ತಿಳಿಸಿದ್ದಾರೆ.
- ನಂದ ಕಿಶೋರ್
ಬಜಾಜ್ ಕಾಂಪ್ಲೆಕ್ಸ್ ಮಾಲೀಕರು ಚಿತ್ತಾಪುರ.
2)ಬರ್ತಡೇ ಸೆಲೆಬ್ರೇಶನ್ ಇವೆಂಟ್ ಮಾಲೀಕರಾದ ಶಾಂತು ಚಿಕ್ಕಮಠ/ ಸುರೇಶ್ ಎಂಬುವರಿಗೆ ಪತ್ರಕರ್ತರು ಫೋನ್ ಮಾಡಿ ವಿಚಾರಿಸಿದರೆ ಹರಕೆ ಉತ್ತರ ನೀಡಿರುತ್ತಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ