ಕ್ಷೇತ್ರದ ಅಭಿವೃದ್ದಿ ಕೆಲಸಕ್ಕೆ ಬಿಜೆಪಿ ಅಡ್ಡಿ: ಮಲ್ಲಿಕಾರ್ಜುನ ಕಾಳಗಿ.
●ಆರೋಪ ಸತ್ಯಕ್ಕೆ ದೂರ, ●ಅಸ್ತಿತ್ವ ಉಳಿವಿಗಾಗಿ ಅಧ್ಯಕ್ಷರ ಪರದಾಟ.
ಚಿತ್ತಾಪುರ: ಪಟ್ಟಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿ ಮುಖಂಡರು ಹಾಗೂ ಪುರಸಭೆ ಸದಸ್ಯರು ಅಡ್ಡಿಪಡಿಸುತ್ತಿರುವುದು ಖಂಡನೀಯ ಎಂದು ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಲ್ಲಿಕಾರ್ಜುನ ಕಾಳಗಿ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿ.ವೈ.ವಿಜಯೇಂದ್ರ ತಮ್ಮ ರಾಜ್ಯಾಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ ಚಿತ್ತಾಪುರದಲ್ಲಿ ರವೀಂದ್ರ ಸಜ್ಜನಶೆಟ್ಟಿ ಅವರು ತಮ್ಮ ತಾಲೂಕು ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪಟ್ಟಣದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ತಂದಿದ್ದಾರೆ ಆದರೆ ಅಭಿವೃದ್ಧಿ ಕೆಲಸ ಕಾಮಗಾರಿಳು ನಡೆಯುತ್ತಿಲ್ಲ ಎಂದು ಹೇಳುವುದು ಬಿಟ್ಟು ಯಾಕೆ ಅಭಿವೃದ್ದಿ ಕೆಲಸ ಕಾರ್ಯಗಳು ವಿಳಂಬ ಆಗುತ್ತಿವೆ ಎಂಬುದು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಲ್ಲಿ ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ ಕೆಲ ತಾಂತ್ರಿಕ ದೋಷಗಳಿಂದ ಕುಂಠಿತಗೊಂಡಿವೆ ಎಂದು ಸ್ಪಷ್ಟತೆ ನೀಡಿದರು.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಂದ ಪಟ್ಟಣದ ನಾಗಾವಿ ಹೊರವಲಯದಲ್ಲಿ ನಿರ್ಮಾಣವಾದ 1000 ಮನೆಗಳಿಗೆ ಮೂಲಭೂತ ಸೌಕಾರ್ಯಗಳಾದ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ರಸ್ತೆ, ಸಾಮೂಹಿಕ ಶೌಚಾಲಯಗಳ ಅಭಿವೃದ್ದಿಗೆ ಇನ್ನೂ ಹೆಚ್ಚಿನ ಹಣ ಬಿಡುಗಡೆ ಮಾಡಿಸಿ ಅಭಿವೃದ್ದಿಯಾದ ನಂತರ ಹಂಚಿಕೆ ಮಾಡುವುದು ಇದೆ ಆದ್ರೇ ಬಿಜೆಪಿಯವರಿಗೆ ಕಾಂಗ್ರೆಸ್ ಅಭಿವೃದ್ದಿ ಕೆಲಸ ಕಾರ್ಯಗಳು ನೋಡಿ ರಾತ್ರಿಯಿಡೀ ನಿದ್ದೆ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು
ಕೆನಾರ ಬ್ಯಾಂಕ್ ಎದುರಗಡೆ ನಿರ್ಮಿಸಿದ ವ್ಯಾಣಿಜ್ಯ ಮಳಿಗೆಗೆ ಬಾಡಿಗೆ ಹೆಚ್ಚು ಆಗಿದೆ ಎಂದು ಹೇಳುತ್ತಿದ್ದರು ಈಗ ಬಾಡಿಗೆ ಕಡಿಮೆ ಮಾಡಲಾಗಿದೆ ಟೆಂಡರ್ ಕರೆದು ಬೇಗನೆ ಮಳಿಗೆ ಹಂಚಿಕೆ ಮಾಡುವುದಿದೆ ಸ್ಪಷ್ಟನೆ ನೀಡಿದರು. ಕಳೆದ ಬಾರಿ ತಮ್ಮದೇ ಸರ್ಕಾರ ಯಾಕೆ ಕ್ಷೇತ್ರದ ಅಭಿವೃದ್ದಿ ಕೆಲಸಗಳ ಬಗ್ಗೆ ಮಾತನಾಡಿಲ್ಲ ಈಗ ಪ್ರಶ್ನೆ ಮಾಡುವುದು ಸರಿಯಲ್ಲ ತಮ್ಮ ಸರ್ಕಾರದಲ್ಲಿ ಆಗದ ಅಭಿವೃದ್ದಿ ಕಾಮಗಾರಿಗಳು ಈಗ ಆಗುವುದು ನೋಡಿ ಸಹಿಸಿಕೊಳ್ಳಕ್ಕಾಗದೆ ಆರೋಪ ಮಾಡುತ್ತಿದ್ದಾರೆ ಎಂದರು.
ಪಟ್ಟಣದಲ್ಲಿ ಎಸ್.ಸಿಪಿ ಅನುದಾನದಲ್ಲಿ ನಡೆದ ರಸ್ತೆ ಕಾಮಗಾರಿಯು ಪರಿಶಿಷ್ಟ ಜಾತಿ ವಾರ್ಡ್ ನಲ್ಲಿ ನಡೆದಿದೆ ಎನ್ನುವುದಕ್ಕೆ ಮುಖ್ಯವಾಗಿ ಅಲ್ಲಿ ಎರಡು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಸತಿ ನಿಲಯಗಳು ಇದ್ದು, ಅಲ್ಲಿ ವಾಸವಾಗಿರುವ ಬಹುಜನರು ಎಸ್ಸಿ.ಎಸ್ಟಿ ಆಗಿದ್ದು ಅವರ ಸಂಚಾರಕ್ಕೆ ಆ ರಸ್ತೆ ಮುಖ್ಯವಾಗಿದೆ ಹೀಗಾಗಿ ಅಲ್ಲಿ ರಸ್ತೆ ಕಾಮಗಾರಿ ಮಾಡಿದ್ದು ಇದು ಜನತೆಗೆ ಗೋತ್ತಿರುವ ವಿಷಯ ಆದ್ರೇ ಬಿಜೆಪಿ ಕಾರ್ಯಕರ್ತರು ಪುರಸಭೆ ಸದಸ್ಯರು ಜನರಲ್ಲಿ ತಪ್ಪು ಸಂದೇಶ ಕೊಡುವುದು ತಿದ್ದಿಕೋಳ್ಳಬೇಕು. ಕ್ಷೇತ್ರದಲ್ಲಿ ಸಚಿವರು ಕಾಂಗ್ರೆಸ್, ಬಿಜೆಪಿ ಅಂತಾ ತಾರತಮ್ಯ ಮಾಡದೆ ಪಟ್ಟಣದ ಎಲ್ಲಾ ವರ್ಡ್ ಗಳಿಗೆ ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ದಿ ಕೆಲಸಗಳು ಮಾಡುತ್ತಿದ್ದಾರೆ ಆದರೂ ಬಿಜೆಪಿಯವರು ಟೀಕೆ ಮಾಡುವುದು ಬಿಡುತ್ತಿರಲ್ಲ ಎಂದು ವ್ಯಂಗ್ಯ ಮಾಡಿದ್ರು.
-ಚಂದ್ರಶೇಖರ ವಾಯ್ ಕಾಶಿ
ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರು ಪುರಸಭೆ ಚಿತ್ತಾಪೂರ.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ವಿನೋದ್ ಗುತ್ತೇದಾರ್, ಶಿವರಾಜ್ ಪಾಳೆದ್, ಸುಭಾಷ್ ಜಾಧವ್, ಜಗದೀಶ್ ಚವ್ಹಾಣ್, ಮುಖಂಡರಾದ ಶಿವಕಾಂತ ಬೆಣ್ಣೂರಕರ್, ಅಹೆಮದ್ ಸೇಠ್, ನಜೀರ್ ಅಡಕಿ, ವಿಶ್ವನಾಥ ಬೀದಿಮನಿ, ಎಕ್ಬಲ್ ಸೇಠ್, ಸೇರಿದಂತೆ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ