ಲುಂಬಿನಿ ಗಾರ್ಡನ್ ಲೋಕಾರ್ಪಣೆಗೊಳಿಸಿದ ಸಚಿವ ಪ್ರಿಯಾಂಕ್ ಖರ್ಗೆ.
ಚಿತ್ತಾಪುರ: ಕಲಬುರಗಿ ಜಿಲ್ಲೆಯ ಗ್ರಾಮೀಣ ಭಾಗದ ಅದರಲ್ಲೂ ಚಿತ್ತಾಪುರ ತಾಲೂಕಿನ ಜನರ ಮನೋರಂಜನೆಗಾಗಿ ಹಾಗೂ ವಾರದ ಕೊನೆ ದಿನದಲ್ಲಿ ಮಕ್ಕಳ ಆಟೋಪೋಹಾರಕ್ಕಾಗಿ ಒಂದು ಸುಸಜ್ಜಿತ ಉದ್ಯಾನವನದ ಸ್ಥಾಪನೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ತಾಲೂಕಿನ ಗುಂಡಗುರ್ತಿ ಗ್ರಾಮದ ಬಳಿ ಜನಾಕರ್ಷಕ ಲುಂಬಿನಿ ಉದ್ಯಾನವನವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು ಸುಮಾರು 10 ಎಕರೆ ವಿಸ್ತಾರ ಪ್ರದೇಶದಲ್ಲಿ ಅರಣ್ಯ ಇಲಾಖೆ ಹಾಗೂ ಡಿಎಂಎಫ್ ಅನುದಾನ ಅಂದಾಜು 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಉದ್ಯಾನವನ ವಿವಿಧ ಬಗೆಯ ಸೌಲಭ್ಯಗಳಿಂದ ಜನರನ್ನು ಆಕರ್ಷಿಸುವುದರ ಜೊತೆಗೆ ವಿಭಿನ್ನ ಪ್ರಬೇಧದ ಚಿಟ್ಟೆಗಳು ಹಾಗೂ ಮರಗಿಡಗಳು ಹಾಗೂ ಹಚ್ಚ ಹಸಿರಿನ ಹುಲ್ಲು ಮನಸಿಗೆ ಉಲ್ಲಾಸವನ್ನುಂಟು ಮಾಡುತ್ತವೆ ಮತ್ತು ಮಿಯಾವಾಕಿ ಅರಣ್ಯ ಚಿಟ್ಟೆ ಪಾರ್ಕ್, ಮರದ ಸೇತುವೆ, ಕಾರಂಜಿ, ವಿವಿಧ ಬಗೆಯ ಗಿಡಗಳು, ಹಸಿರು ಹುಲ್ಲಿನ ಹೊದಿಕೆ, ಮಕ್ಕಳ ಆಟದ ಸಾಮಾಗ್ರಿಗಳು, ವಾಟರ್ ಫಾಲ್ಸ್ ಇತ್ಯಾದಿ ಉದ್ಯಾನವನದ ಪ್ರಮುಖ ಆಕರ್ಷಣೆಯಾಗಿವೆ ಎಂದರು.
ಎಂಎಲ್‌ಸಿಗಳಾದ ತಿಪ್ಪಣ್ಣಪ್ಪ ಕಮಕನೂರು,ಜಗದೇವ ಗುತ್ತೇದಾರ, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಜಿಪಂ ಸಿಇಒ ಭಂವರ್ ಸಿಂಗ್ ಮೀನಾ, ಎಸ್.ಪಿ ಅಡ್ಡರು ಶ್ರೀನಿವಾಸಲು, ಸೇಡಂ ಸಹಾಯಕ ಆಯುಕ್ತ
ಪ್ರಭು ರೆಡ್ಡಿ, ತಹಶೀಲ್ದಾರ್ ನಾಗಯ್ಯ ಹಿರೇಮಠ, ಸಿಸಿಎಫ್'ಗಳಾದ ಸುಮೀತ್ ಕುಮಾರ ಪಾಟೀಲ್, ಚೇತನ್ ಗಸ್ತಿ, ಸಾಗರ ತವಡೆ, ಎಸಿಎಫ್ ಮುನೀರ್ ಅಹ್ಮದ್, ಆರ್'ಎಫ್'ಒ ವಿಜಯಕುಮಾರ್ ಬಡಿಗೇರ್, ಚಂದ್ರಶೇಖರ ಹೇಮಾ, ಜಗನ್ನಾಥ ಕೊರಳ್ಳಿ ವಿಶ್ವನಾಥ ಪಾಟೀಲ್, ಗ್ರಾಪಂ ಅಧ್ಯಕ್ಷೆ ಸಂಪೂರ್ಣ ಬಣ್ಣಕ್ಕಿ ಪ್ರಮುಖರಾದ ಭೀಮಣ್ಣ ಸಾಲಿ, ರಮೇಶ ಮರಗೋಳ, ಶಿವಾನಂದ ಪಾಟೀಲ್, ಸುನೀಲ ದೊಡ್ಡಮನಿ, ಮುಕ್ತಾರ ಪಟೇಲ್, ಮನ್ಸೂರ್ ಪಟೇಲ್, ಬಸವರಾಜ ಹೊಸಳ್ಳಿ, ಯಲ್ಲಾಲಿಂಗ ಮುಗಟಿ, ಅಶೋಕ ವೀರನಾಯಕ, ಮಲ್ಲಪ್ಪ ಹೊಸ್ಮನಿ ಇಂಗನಕಲ್, ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಶೀಲಾ ಕಾಶಿ, ರಾಮಲಿಂಗ ಬಾನಾರ್, ಹಣಮಂತ ಸಂಕನೂರ, ನಯಿಮ್, ಶೇಖ ಬಬ್ಲು ಮಹ್ಮದ್ ಇಬ್ರಾಹಿಂ, ಕರಣ ಅಲ್ಲೂರ್, ಸುನೀಲ್ ಅಮಗೋಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ