ಭವ್ಯ ಮೆರವಣಿಗೆ, ಡಿಜೆ ಸೌಂಡಗೆ ಕುಣಿದು ಕುಪ್ಪಳಿಸಿದ ಯುವಕರು.

ಚಿತ್ತಾಪುರ: ನಿಜಶರಣ ಅಂಬಿಗರ ಚೌಡಯ್ಯ ನವರ 905 ನೇ ಜಯಂತ್ಯೋತ್ಸವ ನಿಮಿತ್ತ ತಾಲೂಕು ಯುವ ಕೋಲಿ ಸಮಾಜದ ಅಧ್ಯಕ್ಷ ರಾಜೇಶ್ ಹೋಳಿಕಟ್ಟಿ ನೇತೃತ್ವದಲ್ಲಿ ಮಂಗಳವಾರ ರಾತ್ರಿ ಪಟ್ಟಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನವರ 9 ಅಡಿ ಎತ್ತರದ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು.

ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಿಂದ ಪ್ರಾರಂಭವಾಗದ ಮೆರವಣಿಗೆ ಸ್ಟೇಷನ್ ರಸ್ತೆ, ನಾಗಾವಿ ವೃತ್ತ, ಜನತಾ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕ‌ರ್ ವೃತ್ತ, ಬಸ್‌ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತ, ಲಾಡ್ಡಿಂಗ್ ಕ್ರಾಸ್ ವರೆಗೆ ನಡೆಯಿತ್ತು.

ಈ ವೇಳೆ ತಾಲೂಕು ಯುವ ಅಧ್ಯಕ್ಷ ರಾಜೇಶ್ ಹೋಳಿಕಟ್ಟಿ ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯ ನವರ ಮೂರ್ತಿಯ ಶೋಭಾಯಾತ್ರೆ ಮಾಡುವುದಕ್ಕೆ ಎಷ್ಟೇ ಅಡೆತಡೆ ಹಾಗೂ ಯುವಕರ ಉತ್ಸಾಹ ಕುಗ್ಗಿಸುವ ಎಷ್ಟೇ ಪ್ರಯತ್ನ ಮಾಡಿದರೂ ಸಹ ಯುವಕರ ಒಗ್ಗಟ್ಟಿನಿಂದ ಮತ್ತು ಸಹಕಾರದಿಂದ ಯಶಸ್ವಿಯಾಗಿದೆ, ಇದರಿಂದ ಯುವಶಕ್ತಿ ಏನೆಂಬುದು ತೋರಿಸಿಕೊಟ್ಟಿದೆ. ಇದೊಂದು ಐತಿಹಾಸಿಕ ಶೋಭಾಯಾತ್ರೆ ಎಂದರೆ ತಪ್ಪಾಗಲಾರದು ಈ ನಿಟ್ಟಿನಲ್ಲಿ ಬಹಳ ಅದ್ದೂರಿಯಾಗಿ ಹಾಗೂ ಅಚ್ಚುಕಟ್ಟಾಗಿ ಹಾಗೂ ಶಾಂತಿಯುತವಾಗಿ ನಡೆದಿದೆ ಇದಕ್ಕೆ ಸಹಕರಿಸಿದ ಕೋಲಿ ಸಮಾಜದವರಿಗೂ ಹಾಗೂ ಇತರೆ ಸಮಾಜದ ಮುಖಂಡರಿಗೂ, ಯುವಕರಿಗೂ ಹಾಗೂ ರಕ್ಷಣೆ ನೀಡದ ಪೊಲೀಸ್ ಅಧಿಕಾರಿಗಳಿಗೂ ಧನ್ಯವಾದಗಳು ಸಲ್ಲಿಸಿದರು.

ಮೆರವಣಿಗೆಯಲ್ಲಿ ಅಂಬಿಗರ ಚೌಡಯ್ಯ ನವರ 9 ಅಡಿ ಎತ್ತರದ ಮೂರ್ತಿ ಜೊತೆಗೆ ಬುದ್ಧ, ಬಸವ, ಅಂಬೇಡ್ಕ‌ರ್ ಸೇರಿದಂತೆ ಎಲ್ಲ ಸಮಾಜಗಳ ಗುರುಗಳ ಭಾವಚಿತ್ರದ ಮೆರವಣಿಗೆ ವಿಶೇಷವಾಗಿತ್ತು. ಡಿಜೆ ಸೌಂಡ್ ಗೆ ಯುವಕರು ಉತ್ಸಾಹ ಮತ್ತು ಹರ್ಷೋಲಾಸದಿಂದ ಕುಣಿದು ಹರ್ಷೋಲ್ಲಾಸದಿಂದ ಕುಣಿದು ಕುಪ್ಪಳಿಸಿದರು, ಸೋಲ್ಲಾಪುರದ ಡೊಳ್ಳು ಕುಣಿತ ವಿಶೇಷವಾಗಿ ಆಕರ್ಷಿಸಿತು, ಕುಂಬ ಹೊತ್ತ ಮಹಿಳೆಯರಿಂದ ಮೆರವಣಿಗೆಗೆ ಮೆರುಗು ನೀಡಿತು ಬ್ಯಾಂಜೋ ಮತ್ತು ಹಲಗೆ ವಾದನದ ಅಬ್ಬರ ಜೋರಾಗಿತ್ತು.

ಪಿಎಸ್‌ಐ ಶ್ರೀಶೈಲ್ ಅಂಬಾಟಿ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರ ಯುವ ಅಧ್ಯಕ್ಷ ಬಸವರಾಜ್ ಮೈನಾಳಕರ, ಯುವ ಮುಖಂಡರಾದ ಸಾಬಣ್ಣ ಹೋಳಿಕಟ್ಟಿ, ಬಸವರಾಜ್‌ ರಾಜೋಳ್ಳಿ, ದೇವರಾಜ್ ತಳವಾರ, ಪರಮಾನಂದ ಕಲಗುರ್ಕಿ, ರೇವಣಸಿದ್ದು, ಜಗದೀಶ್ ಹಳ್ಳಿ, ಆಕಾಶ್ ಬೆನಕನಳ್ಳಿ, ಬಾಗೇಶ್ ಹಳ್ಳಿ, ಸಾಬಣ್ಣ ಹೋಳಿಕಟ್ಟಿ, ಅಭಿಷೇಕ್ ಯಾರಗಲ್, ಗೌತಮ್, ಮೈಲಾರಿ, ಜಗ್ಗು, ಸುನಿಲ್ ದಂಡೋತಿ, ನಾಗರಾಜ್ ಮೈನಾಳಕರ, ಭೀಮು ಹೋಳಿಕಟ್ಟಿ, ಭೀಮು ಹೋನಗೆರಿ, ಕಾಶಪ್ಪ ಬಾಗೋಡಿ, ಮುನಿಯಪ್ಪ ಬಾಗೋಡಿ, ದಶರಥ ಹೊತಿನಮಡಿ ಸೇರಿದಂತೆ ನೂರಾರು ಯುವಕರು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.