ವಿದ್ಯಾರ್ಥಿಯ ಕಾಲು ಮುರಿತ: ಶಾಲಾ ಆಡಳಿತ ನಿರ್ಲಕ್ಷ್ಯ.
ಶಹಾಬಾದ:ಬಸವ ಸಮಿತಿ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಬಾಗೇಶ್ ತಂದೆ ವಿಶ್ವನಾಥ್ ಎಂಬ ವಿದ್ಯಾರ್ಥಿಯ ಕಾಲು ಮುರಿದಿದ್ದು ಶಾಲಾ ಆಡಳಿತ ವಿದ್ಯಾರ್ಥಿಯ ಚಿಕಿತ್ಸೆಗೆ ಮುಂದಾಗದೆ ಸಂಪೂರ್ಣವಾಗಿ ನಿರ್ಲಕ್ಷತನ ತೋರಿದೆ ಎಂದು ವಿದ್ಯಾರ್ಥಿಯ ಅಜ್ಜನಾದ ಮಲ್ಲಿಕಾರ್ಜುನ್ ತಳವಾರ್ ತಿಳಿಸಿದ್ದಾರೆ.
ತಾಲೂಕಿನ ಭಂಕೂರ ಗ್ರಾಮದ ಬಸವ ಸಮಿತಿ ಪ್ರಾಥಮಿಕ ಶಾಲೆಗೆ ಅಗಸ್ಟ್- 19, ವಿದ್ಯಾರ್ಥಿಯು ಶಾಲಾ ಸಮಯಕ್ಕೆ ಸರಿಯಾಗಿ ಬೆಳಿಗ್ಗೆ, 9:20ಕ್ಕೆ ಬಂದು ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಆಟವಾಡುವಾಗ 5ನೇ ತರಗತಿಯ ರೀಯಾನ್ ಎಂಬ ವಿದ್ಯಾರ್ಥಿ ಗೋಡೆಯ ಮೇಲಿಂದ ಬಾಗೇಶ್ ಎಂಬ ವಿದ್ಯಾರ್ಥಿಯ ಮೇಲೆ ಹಾರಿದ್ದರಿಂದ ವಿದ್ಯಾರ್ಥಿ ನೋವು ತಾಳಲಾರದೆ ಅಳಲು ಆರಂಭಿಸಿದಾಗ ಶಿಕ್ಷಕರು ಫೋನ್ ಮಾಡಿ ತಿಳಿಸಿದ್ದಾರೆ.
ದಿಡೀರನೆ ನಮ್ಮ ಮೊಮ್ಮಗನನ್ನು ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಹೇಳಿಕೆ ಪ್ರಕಾರ ವಿದ್ಯಾರ್ಥಿಯ ಕಾಲು ಮುರಿತವಾಗಿ ಕಾಲಿಗೆ ರಾಡ್ ಹಾಕಬೇಕು ತುಂಬಾ ಹಣ ಖರ್ಚು ಆಗುತ್ತದೆ ಎಂದಾಗ ನಮಗೆ ದಿಕ್ಕು ತೋಚದಂತಾಯ್ತು. ಕೂಡಲೇ ಶಾಲಾ ಆಡಳಿತಕ್ಕೆ ತಿಳಿಸಿದಾಗ ನಮಗೆ ಅದು ಯಾವುದು ಗೊತ್ತಿಲ್ಲ. ನೋಡೋಣ, ಆ ವಿದ್ಯಾರ್ಥಿಯ ಪಾಲಕರ ಜೊತೆ ಮಾತನಾಡುವೆ ಎಂದರು, ಮತ್ತೆ ನಾವು ರಿಯಾನ್ ಎಂಬ ವಿದ್ಯಾರ್ಥಿಯ ಪಾಲಕರಿಗೆ ಈ ವಿಷಯ ತಿಳಿಸಿದಾಗ ಅವರು ಸಹ ಸ್ಪಂದನೆ ನೀಡಿಲ್ಲ. ವಿಧಿ ಇಲ್ಲದೆ ಬೇರೆಯವರ ಹತ್ತಿರ ಸಾಲ ಮಾಡಿ ಮೊಮ್ಮಗನ ಚಿಕಿತ್ಸೆಗೆ ಮುಂದಾದೇವು ಈಗ ಸದ್ಯ ಮೊಮ್ಮಗನ ಚಿಕಿತ್ಸೆಗೆ 1ಲಕ್ಷ, 50ಸಾವಿರ ರೂಪಾಯಿ ಖರ್ಚಾಗಿದೆ.
ಇನ್ನು ಮೊಮ್ಮಗನ ಚಿಕಿತ್ಸೆಗೆ ಹಣ ಬೇಕಾಗಿದೆ. ಹಾಗೂ ಮೊಮ್ಮಗನ ಚಿಕಿತ್ಸೆಗೆ ಸಾಲ ಕೊಟ್ಟವರು ಹಣ ಕೇಳುತ್ತಿದ್ದಾರೆ. ಈಗ ನಮಗೆ ಏನು ಮಾಡಬೇಕು ಎಂದು ತಿಳಿಯದಾಗಿದೆ. ಕೂಡಲೇ ಬಸವ ಸಮಿತಿ ಶಾಲಾ ಆಡಳಿತ ಹಾಗೂ ರಿಯಾನ್ ಪಾಲಕರು ಕೂಡಲೇ ನಮ್ಮ ಕಷ್ಟಕ್ಕೆ ಸ್ಪಂದಿಸಬೇಕು. ಇಲ್ಲದಿದ್ದರೆ ನಾವು ಬಸವ ಸಮಿತಿ ಶಾಲಾ ಆಡಳಿತದ ವಿರುದ್ಧ ಹಾಗೂ ರಿಯಾನ್ ಪಾಲಕರ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಅವರ ವಿರುದ್ಧ ದೂರ ದಾಖಲಿಸುವೆ, ಹಾಗೂ ನ್ಯಾಯಾಲಯದ ಮರೆ ಹೋಗುವುದಾಗಿ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ