ಮುಖ್ಯ ಶಿಕ್ಷಕರನ್ನು ಬದಲಾಯಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ.
ಚಿತ್ತಾಪೂರ: ನಾಗಾವಿ ಕ್ಯಾಂಪಸ್ ನಲ್ಲಿರುವ ಸರಕಾರಿ ಆದರ್ಶ ವಿದ್ಯಾಲಯ (ಆರ್.ಎಂ.ಎಸ್.ಎ) ಶಾಲೆಯ ಮುಖ್ಯ ಶಿಕ್ಷಕರನ್ನು ಬದಲಾಯಿಸಿ ಬೇರೆಯವರನ್ನು ನಿಯೋಜನೆ ಮಾಡಬೇಕು ಶಾಲೆಯಲ್ಲಿನ ಶಿಕ್ಷಕರ ಕೊರತೆ ನೀಗಿಸಬೇಕು. ಇತರೆ ಮೂಲಭೂತ ಸೌಲಭ್ಯಗಳು ಒದಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಪಟ್ಟಣದ ನಾಗಾವಿ ಕ್ಯಾಂಪಸನ ಮುಖ್ಯ ರಸ್ತೆ,ಹಾಗೂ ಸಾತನೂರ ಮತ್ತು ಕರದಾಳ ಹೋಗುವ ರಸ್ತೆ ಬಂದ ಮಾಡಿ ವಿದ್ಯಾರ್ಥಿಗಳು ಹಾಗೂ ಎಸ್‌ಡಿಎಂಸಿ ಅವರು ಪ್ರತಿಭಟನೆ ಹಮ್ಮಿಕೊಂಡು ಗ್ರೇಡ್ 2 ತಹಸೀಲ್ದಾರ್ ಅಮಿತ ಕುಲ್ಕರ್ಣಿ, ಹಾಗೂ ಶಿಕ್ಷಣಾಧಿಕಾರಿಗಳಾದ ಸಿದ್ದವೀರಯ್ಯ ರುದ್ನೂರ ಅವರಿಗೆ ಪ್ರತಿಭಟನೆ ಮನವಿ ಪತ್ರವನ್ನು ಎಸ್‌ಡಿಎಂಸಿ ಅಧ್ಯಕ್ಷ ಕಾಶಿನಾಥ ಗುತ್ತೇದಾರ್ ನೇತೃತ್ವದಲ್ಲಿ ಸಲ್ಲಿಸಿ ಮಾತನಾಡಿದ ಅವರು ಶಾಲೆಯ ಶೈಕ್ಷಣಿಕ ವಾತಾವರಣ ಹಾಗೂ ಶಾಲಾ ಆಡಳಿತದ ಮತ್ತು ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಅಸಮರ್ಥ, ಅಸಹಾಯಕ ದೃಷ್ಠಿಕೋನವಿರುವ ಮುಖ್ಯಶಿಕ್ಷಕಿಯನ್ನು ಕೂಡಲೇ ಇಲ್ಲಿಂದ ಬದಲಾವಣೆ ಮಾಡುವ ಕ್ರಮ ಕೈಗೊಂಡು ಹೊಸದಾಗಿ ಮತ್ತು ನಕರಾತ್ಮಕ ಸಮರ್ಥವಿರುವ ಮುಖ್ಯಶಿಕ್ಷಕರನ್ನು ನಿಯೋಜಿಸಬೇಕು.
6ನೇ ತರಗತಿಯಿಂದ 10ನೇ ತರಗತಿ ಇರುವ ಈ ಶಾಲೆಯಲ್ಲಿ 350 ಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದಾರೆ. ಈಗಿರುವ ಮುಖ್ಯಶಿಕ್ಷಕರು ಅಡಳಿತದ ಅನುಭವದ ಕೊರತೆಯಿಂದ ಶಾಲೆಯನ್ನು ನಿರ್ವಹಣೆ ಮಾಡಲು ಆಗುತ್ತಿಲ್ಲ. ಇದರಿಂದ ಶಾಲೆಯ ಎಲ್ಲ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದರಿಂದ ಬೇಸತ್ತಿದ್ದಾರೆ. ಇಂತಹ ಅಸಮರ್ಥ ಮುಖ್ಯಶಿಕ್ಷಕರಿಂದ ಶಾಲೆಯ ಶೈಕ್ಷಣಿಕ ವಾತಾವರಣ ಹಾಳಾಗಿದೆ ಈ ಕುರಿತು ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ಅವರಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೆಳ್ಳದೇ ಇರುವುದರಿಂದ ಇಂದು ರಸ್ತೆತಡೆ ಮಾಡಿ ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದರು.
ಶಾಲಾಭಿವೃದ್ಧಿಯಲ್ಲಿ ಎಸ್‌ಡಿಎಂಸಿ ಪಾತ್ರ ಬಹಳ ಪ್ರಮುಖವಾಗಿದೆ ಆದರೆ ಮುಖ್ಯಶಿಕ್ಷಕರು ಮಾತ್ರ ಎಸ್‌ಡಿಎಂಸಿ ಅವರ ಗಮನಕ್ಕೆ ಯಾವುದೇ ವಿಷಯ ಅಥವಾ ಸರಕಾರದ ಯೋಜನೆಗಳ ಬಗ್ಗೆ (ಉದಾ: ಶೂ, ಸಾಕ್ಸ್, ಬಟ್ಟೆ ಇತ್ಯಾದಿ) ಮಾಹಿತಿ ನೀಡದೇ ತಾವೇ ಎಲ್ಲ ಕೆಲಸ ಕಾರ್ಯಗಳು ಮಾಡುತ್ತಾರೆ, ಇಲ್ಲಿವರೆಗೆ ಶಾಲಾಭಿವೃದ್ಧಿಗೆ ಬಂದ ಅನುದಾನದ ಮಾಹಿತಿ ನೀಡಿಲ್ಲ ಮತ್ತು ಖರ್ಚು ವೆಚ್ಚದ ಬಗ್ಗೆ ಮಾಹಿತಿ ನೀಡಿಲ್ಲ. ಅದರಲ್ಲೂ ಲೆಕ್ಕಪತ್ರದ ರೀಜಿಸ್ಟರ್ ನಿರ್ವಹಣೆ ಮಾಡಿಲ್ಲ ಹಾಗೂ ಇಲ್ಲಿ ಸಾಕಾಷ್ಟು ಅವ್ಯವಹಾರ ನಡೆದಿರುವುದು ಅನುಮಾನ ಮೂಡಿದೆ. ಶಾಲೆಯ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಜೊತೆ ಅಸಭ್ಯ ರೀತಿಯಿಂದ ವರ್ತಿಸುತ್ತಾರೆ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದನೆ ನೀಡುತಿಲ್ಲ. ಇಂತಹ ಅನಾನುಭವಿ ಮತ್ತು ಬೇಜವಾಬ್ದಾರಿ ಮುಖ್ಯಶಿಕ್ಷಕಿಯನ್ನು ಕೂಡಲೇ ಇಲ್ಲಿಂದ ಬದಲಾಯಿಸಬೇಕು.
ಶಾಲೆಯಲ್ಲಿ ಮುಖ್ಯಶಿಕ್ಷಕರು, ಸಹಶಿಕ್ಷಕರು ಸೇರಿ 18 ಹುದ್ದೆಗಳಿವೆ ಆದರೆ ಈಗ ಮುಖ್ಯಶಿಕ್ಷಕರು ಸೇರಿ 7 ಜನ ಶಿಕ್ಷಕರು ಕರ್ತವ್ಯದಲ್ಲಿದ್ದಾರೆ ಹೀಗಾಗಿ ಇಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಮಕ್ಕಳ
ವಿದ್ಯಾಭ್ಯಾಸದ ಮೇಲೆ ಕೆಟ್ಟ ಪರಿಣಾಮ ಬೀರಿದೆ, ಕೂಡಲೇ ಅಗತ್ಯ. ಶಿಕ್ಷಕರ ನಿಯೋಜನೆ ಮಾಡಬೇಕು. ಶಿಕ್ಷಕರ ಸಮಸ್ಯೆಯ ನಡುವೆ 8 ಜನ ಅತಿಥಿ ಶಿಕ್ಷಕರ ಮೇಲೆಯೇ ಶಾಲೆ ನಡೆಯುತ್ತಿದೆ. ವಿಳಂಬಕ್ಕೆ ಅವಕಾಶ ನೀಡದೇ ತಕ್ಷಣದಿಂದ ಮುಖ್ಯಶಿಕ್ಷಕಿಯನ್ನು ಬದಲಾಯಿಸಿ ಹೊಸದಾಗಿ ಮುಖ್ಯಶಿಕ್ಷಕರನ್ನು ನಿಯೋಜನೆ ಮಾಡುವ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಈಗ ರಸ್ತೆತಡೆ ಪ್ರತಿಭಟನೆ ಮಾಡುತ್ತಿದ್ದೇವೆ ಬರುವ ದಿನಗಳಲ್ಲಿ ಶಾಲೆಗೆ ಬೀಗ ಹಾಕಿ ಪಾದಯತ್ರೆ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರಿಗೆ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಮಾತನಾಡಿ ಶಾಲೆಯಲ್ಲಿನ ಶಿಕ್ಷಕರ ಕೊರತೆ ನಿಗಿಸಿ ಅಗತ್ಯ ಸಮಾಜ ವಿಜ್ಞಾನ, ಇಂಗ್ಲೀಷ್, ಗಣಿತ, ಕನ್ನಡ, ವಿಜ್ಞಾನ, ಹಿಂದಿ ವಿಷಯಗಳ ಶಿಕ್ಷಕರನ್ನು ಹಾಗೂ ಕ್ಲರ್ಕ್ ಮತ್ತು ಪ್ಯೂನ್, ವಾಚಮನ್ ನಿಯೋಜಿಸಬೇಕು.ಶಾಲೆಗೆ ಶುದ್ಧ ಕುಡಿಯುವ ನೀರು, ವಿದ್ಯುತ್, ಸ್ವಚ್ಛತೆ ಹಾಗೂ ಶೌಚಾಲಯದ ವ್ಯವಸ್ಥೆ ಮಾಡಬೇಕು.
ನಮಗೆ ಮದ್ಯಾಹ್ನದ ಬಿಸಿಯೂಟ ಸರಿಯಾಗಿ ನೀಡುತ್ತಿಲ್ಲ. ಪ್ರತಿ ಬಾರಿ ಗ್ಯಾಸ್ ಸಮಸ್ಯೆ ಹೇಳುತ್ತಾರೆ. ಸರಕಾರದ ಆದೇಶದ ಪ್ರಕಾರ ವಿದ್ಯಾರ್ಥಿಗಳಿಗೆ ಬಾಳೆಹಣ್ಣು, ಮೊಟ್ಟೆ ಮತ್ತು ಹಾಲು ಸರಿಯಾಗಿ ನೀಡುತ್ತಿಲ್ಲ.ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ನಾಗಾವಿ ಕ್ಯಾಂಪಸ್ ಒಳಗಡೆ ಸಾರಿಗೆ ಬಸ್ಸುಗಳು ವಾಯ್ಡಾ ಮಾಡಿ ಹೋಗುವಂತೆ ಮಾಡಬೇಕು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷ ಶ್ರೀಮತಿ ಸುನಿತಾ ತಳವಾರ, ಸದಸ್ಯರಾದ ಸುಭಾಶ್ಚಂದ್ರ ಅವಂಟಿ, ಅನಂದ ಕುಮಾರ್, ಹುಸನಯ್ಯ ಗುತ್ತೇದಾರ್, ಮಲ್ಲಿಕಾರ್ಜುನ, ಮಲ್ಲಿನ್ನಾಥ ಕಡ್ಲಿ, ಚನ್ನಬಸಪ್ಪ ಸಾತನೂರಕರ್, ದೇವಸುಂದರ್ ಕರದಾಳ, ಸೇರಿದಂತೆ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ