ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.
ಚಿತ್ತಾಪುರ: ತಾಲೂಕಿನ ಕದ್ದರ್ಗಿ ಗ್ರಾಮಕ್ಕೆ ಬಿಜೆಪಿ ಪಕ್ಷದ ಯೋಜನೆಗಳ ಮಾಹಿತಿಯನ್ನು ಜನರಿಗೆ ಮುಟ್ಟಿಸಲು ಆಗಮಿಸಿದ ವಾಹನಕ್ಕೆ ಬಿಜೆಪಿ ಕಾರ್ಯಕರ್ತರು ಖುಷಿಯಿಂದ ಹಾಲಿನ ಅಭಿಷೇಕ ಮಾಡಿ ಬರಮಾಡಿಕೊಂಡರು.
ಗ್ರಾಮದ ಬಿಜೆಪಿ ಮುಖಂಡ ಅಡೆಪ್ಪ ಮಾಲಿ ಪಾಟೀಲ್ ಮಾತನಾಡಿ "ಜನ ಸೇವೆಯೇ ಜನಾರ್ದನ ಸೇವೆ" ಎಂಬ ಆಶಯದೊಂದಿಗೆ ಸಮಾಜ ಸೇವಕ ಮಣಿಕಂಠ ರಾಠೋಡ್ ಅವರು ತಾಲೂಕಿನಲ್ಲಿ ಬಿಜೆಪಿ ಪಕ್ಷದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸುವ ನಿಟ್ಟಿನಲ್ಲಿ ತಾಲೂಕಿನ ಚಿತ್ತಾಪುರ ಪಟ್ಟಣ, ವಾಡಿ, ನಾಲವಾರ, ದಂಡೋತಿ, ಹೆಬ್ಬಾಳ, ರಾವೂರ, ಮಾಡಬೂಳ, ಭೀಮನಹಳ್ಳಿ, ಭಂಕೂರ ಹೀಗೆ 9 ಕಡೆ ಜನ ಸ್ನೇಹಿ ಕೇಂದ್ರಗಳನ್ನು ತೆರೆದು ಸೇವೆ ಮಾಡುತ್ತಿದ್ದಾರೆ. ಹಾಗೂ ಪಕ್ಷದ ಯೋಜನೆಗಳ ಮಾಹಿತಿ ಪ್ರತಿ ಗ್ರಾಮದ ಜನ ಸಾಮಾನ್ಯರಿಗೆ ತಿಳಿಯಲಿ ಎಂದು ವಾಹನದ ಮೂಲಕ ಪ್ರಚಾರ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಸವರಾಜ್ ಬೆಳಗುಂಪಿ,
ಗಣಪತಿ ನಾಯಕ, ವಿಶ್ವರಾಜ್ ದೇಸಾಯಿ,
ಅಶೋಕ್ ಗುತ್ತೇದಾರ, ಪರಮೇಶ್ವರ ಗುಡ್ಡಪೂರ,
ಮಲ್ಲಿಕಾರ್ಜುನ ದೇಸಾಯಿ, ಚಂದ್ರಶೇಖರ್ ದೇಸಾಯಿ, ಶಿವಕುಮಾರ್ ಪಾಳ, ಮೊದಿನ್ ಪಟೇಲ್, ಸಿದ್ದಲಿಂಗ ಕೋರಿ, ಬಾಪೂಗೌಡ, ಸಿದ್ದು ಜೀವಣಗಿ, ಸಾಗರ ದೇಸಾಯಿ, ಭೀಮಾಶಂಕರ್ ದೇಸಾಯಿ, ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ