ಆಕ್ರಮ ಮರಳು ದಂಧೆಯಲ್ಲಿ ಅಧಿಕಾರಿಗಳು ಭಾಗಿ: ಪ್ರಿಯಾಂಕ ಖರ್ಗೆ.

ಚಿತ್ತಾಪೂರ: ಆಕ್ರಮ ಮರಳು ದಂಧೆ ಕೊರರ ಜೊತೆ ಕಂದಾಯ, ಗಣಿ ಮತ್ತು ಭೂ-ವಿಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆ,ಸಾರಿಗೆ ಇಲಾಖೆ,ಗೃಹ ಇಲಾಖೆಯ ಅಧಿಕಾರಿಗಳಿಂದ ಹಿಡಿದು ಪಿಡಿಓವರೆಗೆ ಎಲ್ಲ ಹಂತದ ಇಲಾಖೆಯ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಶಾಸಕ ಪ್ರಿಯಾಂಕ ಖರ್ಗೆ ಹೇಳಿದರು 

ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ನಡೆದ ತಾಲೂಕು ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ತನಾಡಿದ ಅವರು ತಾಲೂಕಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಸಂಗ್ರಹವಾದ ಡಿಎಂಎಫ್ ಸುಂಕದ ಹಣವನ್ನು ಕಲಬುರಗಿಗೆ ವರ್ಗಾವಣೆ ಆಗುತ್ತಿದೆ.ಆದರೆ ಸಂಗ್ರಹವಾದ ಸುಂಕವನ್ನು ಚಿತ್ತಾಪುರಕ್ಕೆ ಮಾತ್ರ ಬಳಕೆಯಾಗಬೇಕು

ಕಾನೂನು ಬಾಹಿರವಾಗಿ 24 ತಾಸು ಕಾಲ ಗುತ್ತಿಗೆದಾರರು ಅಕ್ರಮ ಮರುಳು ಸಾಗಾಣಿಕೆ ಮಾಡುತ್ತಿದ್ದಾರೆ. ಓವರ್ ಲೋಡ್ ಕೂಡಾ ಒಂದು ಸಮಸ್ಯೆಯಾಗಿದೆ. ಇದರಿಂದ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿವೆ. ಸರ್ಕಾರ ಈ ರಸ್ತೆಗಳನ್ನು ಕೂಡಾ ಮೇಲ್ದರ್ಜೆಗೆ ಏರಿಸುತ್ತಿಲ್ಲ. ಅಕ್ರಮ ಮರಳು ಸಾಗಾಣಿಕೆಯಿಂದ ಇಷ್ಟೆಲ್ಲ ಅನಾನೂಕೂಲ ಇದ್ದರೂ ಯಾಕೆ ಅಕ್ರಮ ಮರಳು ಸಾಗಾಣಿಕೆ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದರು.

ಒಬ್ಬ ವ್ಯಕ್ತಿ ಗರಿಷ್ಠ 70 ವಾಹನಗಳನ್ನು ನೋಂದಣಿ ಮಾಡಿಸಬಹುದು. ಒಂದು ಲಾರಿಗೆ ಕನಿಷ್ಠ 16 ಟನ್ ಗಳಿಂದ 22 ಟನ್ ಮರಳು ಸಾಗಾಣಿಕೆ ಮಾಡಬಹುದಾಗಿದೆ.ಎಂದು ಗಣಿ ಮತ್ತು ಭೂ-ವಿಜ್ಞಾನ ಇಲಾಖೆ ಅಧಿಕಾರಿಗಳು ಹೇಳುತ್ತಾರೆ ಇದರಿಂದ ವಿಆರ್ ರಸ್ತೆ ಸಂಪೂರ್ಣ ಹಾಳಾಗಿವೆ.ಕೃಷಿ‌ ಜಮೀನುಗಳಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಮಾಡಲಾಗುತ್ತಿದೆ. ನಾನು ಈ ಮೊದಲು ಹೇಳಿದಂತೆ ಅಂತಹ ಜಮೀನುಗಳನ್ನ ವಶಪಡಿಸಿಕೊಳ್ಳಲಾಗಿದೆಯಾ? ಹಾಗಾದರೆ ಎಷ್ಟು ಜಮೀನು ವಶಪಡಿಸಿಕೊಂಡಿದ್ದೀರಾ? ಎಂದು ಅಧಿಕಾರಿಗಳಿಗೆ ಕಿಡಿಕಾರಿದರು.

ಕಾಟಮದೇವರಹಳ್ಳಿ ಹಾಗೂ ಮುತ್ತಗಾ ಗ್ರಾಮಗಳಲ್ಲಿ ಅಕ್ರಮ ಜಾಸ್ತಿ ನಡೆಯುತ್ತಿದೆ.ನಾನು ಜಿಲ್ಲಾಧಿಕಾರಿಗಳು ಹಾಗೂ ಎಸ್ ಪಿ ಅವರೊಂದಿಗೆ ಮಾತನಾಡುವವರೆಗೆ ಮರಳು ಸಾಗಾಣಿಕೆಗೆ ಬಂದ್ ಮಾಡಿಸಿ.ಜೊತೆಗೆ ಮರುಳು ಸಾಗಾಣಿಕೆ ನಡೆಯುವ ಗ್ರಾಮಗಳ ರಸ್ತೆಗಳ ಫೋಟೋ ತೆಗೆದುಕೊಂಡು ಬರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.ಇದೇ 12ರಂದು ಮತ್ತೊಮ್ಮೆ ಸಭೆ ಕರೆದು ಆ ಸಭೆಯಲ್ಲಿ ಗುತ್ತಿಗೆದಾರರನ್ನೂ ಕೂಡಾ ಕರೆಯಬೇಕು ಎಂದು ಕರೆ ನೀಡಿದರು.

ಈ ಸಂಧರ್ಭದಲ್ಲಿ ತಹಸೀಲ್ದಾರ್ತಾ ಉಮಾಕಾಂತ ಹಳ್ಳೆ, ಇಓ ನೀಲಗಂಗಾ ಬಬಲಾದ,ಶಹಾಬಾದ ಇಓ ಬಸಲಿಂಗಪ್ಪ ಡಿಗ್ಗಿ, ಶಹಾಬಾದ್ ತಹಸೀಲ್ದಾರ ಸುರೇಶ ವರ್ಮಾ, ಶಹಾಬಾದ ಸಿಪಿಐ ರಾಘವೇಂದ್ರ, ಚಿತ್ತಾಪುರ ಸಿಪಿಐ ಪ್ರಕಾಶ ಯಾತನೂರು, ಹಾಗೂ ಟಾಸ್ಕ್ ಪೋರ್ಸ್ ಸಮಿತಿಯ ಸದಸ್ಯ ಅಧಿಕಾರಿಗಳು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.