ಭ್ರಷ್ಟಾಚಾರ-ನಿರುದ್ಯೋಗ ಬಗ್ಗೆ ಮಾತನಾಡಿದ್ದೇ ತಪ್ಪಾ?: ಪ್ರಿಯಾಂಕ್ ಖರ್ಗೆ
ಚಿತ್ತಾಪೂರ:ರಾಜ್ಯ ಸರ್ಕಾರದ ಬ್ರಹ್ಮಾಂಡದ ಭ್ರಷ್ಟಾಚಾರವನ್ನು ಬಯಲಿಗೇಳಿದ್ದೀದ್ದೇನೆ. ಉದ್ಯೋಗ ಸಿಗದೆ ನಮ್ಮ ಯುವಕರು ಬೀದಿ ಬೀದಿ ಅಲೆಯುತ್ತಿದ್ದಾರೆ. ಅವರಿಗೆ ಉದ್ಯೋಗ ಕೊಡಿ ಎಂದು ಆಗ್ರಹಿಸಿದ್ದೇನೆ.ಇದು ಬಿಜೆಪಿಯವರಿಗೆ ಸರಿ ಕಾಣದೆ ನನ್ನನ್ನು ಹೇಗಾದರೂ ಮಾಡಿ ಚುನಾವಣೆಯಲ್ಲಿ ಸೋಲಿಸಲು ಷಡ್ಯಂತರ ಮಾಡುತ್ತಿದ್ದಾರೆ. ನಮ್ಮ ಚಿತ್ತಾಪುರದ ಜನರು ಪ್ರಜ್ಞಾವಂತರಿದ್ದ ಬಿಜೆಪಿಯವರ ಬೂಟಾಟಿಕೆಯ ಇಲ್ಲಿ ನಡೆಯುವುದಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಗುಡುಗಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮಗಳಲ್ಲಿ ಅನುದಾನ ಕೊರತೆ ಇದೆ. ಆಶ್ವಾಸನೆ ನೀಡಿದ್ದ ಅನುದಾನ ಬಂದಿಲ್ಲ. ನಮ್ಮ ಭಾಗದಲ್ಲಿ
50 ಸಾವಿರ ಹುದ್ದೆಗಳು ಖಾಲಿ ಇವೆ. ಇಡೀ ದೇಶ ನಿರುದ್ಯೋಗದಿಂದ ಬಳಲುತ್ತಿದೆ. ಉದ್ಯೋಗ ನೀಡುವ ಮಾತು ಬಿಜೆಪಿ ಹಾಗೂ ನರೇಂದ್ರ ಮೋದಿ ಮಾತನಾಡುತ್ತಿಲ್ಲ. ಸತ್ಯ, ಪ್ರಾಮಾಣಿಕ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಲ್ಲವನ್ನು ಪರೀಕ್ಷಿಸಿ ಒಳ್ಳೆಯತನಕ್ಕೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.
ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಮಾತನಾಡಿ ಬಿಜೆಪಿಯವರು ಜನಸಂಕಲ್ಪ ಯಾತ್ರೆ ನೆಪದಲ್ಲಿ ನೃತ್ಯ ಮಾಡುವುದು ನಾಚಿಕೆಗೇಡಿನ ಸಂಗತಿಯಾಗಿದೆ. ನರೇಂದ್ರ ಮೋದಿ ಅವರು ದೇಶದ ಜನರನ್ನು ಭಾವನಾತ್ಮಕ ವಿಷಯಗಳ ಆಧಾರದ ಮೇಲೆ ಹೇಗೆ ಮೋಸ ಮಾಡಬಹುದು ಎನ್ನುವುದು ಚೆನ್ನಾಗಿ ಅರಿತುಕೊಂಡಿದ್ದಾರೆ. ಧರ್ಮಗಳ ನಡುವೆ ಕಿಚ್ಚು ಹಚ್ಚಿ ತಮ್ಮ ಕುರ್ಚಿ ಗಟ್ಟಿ ಮಾಡಿಕೊಳ್ಳುವಲ್ಲಿ ಬಿಜೆಪಿಯವರು ಜಾಣರಾಗಿದ್ದು ಜನರು ಅರಿತುಕೊಳ್ಳಬೇಕು ಎಂದರು.
ಪುರಸಭೆ ಸದಸ್ಯೆ ಶೀಲಾ ಕಾಶಿ
ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ, ಶಿವಾನಂದ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಮುಖಂಡ ನಾಗರೆಡ್ಡಿಗೌಡ ಪಾಟೀಲ, ಜಗದೀಶ ಚವ್ಹಾಣ, ಮುಕ್ತಾರ್ ಪಟೇಲ, ಮಾತನಾಡಿದರು.
ಪುರಸಭೆ ಉಪಾಧ್ಯಕ್ಷೆ ಶೃತಿ ಪೂಜಾರಿ, ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಯಯದ್ ಮಹೆಮೂದ್ ಸಾಹೇಬ್, ರಾಜಶೇಖರ್ ತಿಮ್ಮನಾಯಕ್, ರಮೇಶ ಮರಗೋಳ, ಸಿದ್ದುಗೌಡ ಅಫಜಲ್‌ಪುರಕರ್, ಶಿವರುದ್ರ ಭೀಣಿ, ಶಾಂತಣ್ಣ ಚಾಳಿಕಾರ, ಜಗಣ್ಣಗೌಡ ರಾಮತೀರ್ಥ, ವಿನೋದ ಗುತ್ತೇದಾರ್,ಶ್ರೀನಿವಾಸ ಪಾಲಪ್, ಶಿವರಾಜ್ ಪಾಳೇದ್, ವೀರಣ್ಣಗೌಡ ಪರಸರೆಡ್ಡಿ, ಸಂತೋಷ ಪೂಜಾರಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿಗಳು ಪಾಲ್ಗೋಂಡಿದ್ದರು.
ಪುರಸಭೆ ಮುಖ್ಯಧಿಕಾರಿ ಮನೋಜಕುಮಾರ ಗುರಿಕಾರ್ ಸ್ವಾಗತಿಸಿದರು. ಸಮುದಾಯ ಸಂಘಟನಾ ಅಧಿಕಾರಿ ರಘುನಾಥ ನರಸಾಳೆ ನಿರೂಪಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ