ವಿಠಲ್ ಹೇರೂರ ಹಾಕಿಕೊಟ್ಟ ಮಾರ್ಗದರ್ಶನ ಪಾಲಿಸೋಣ.

ಚಿತ್ತಾಪೂರ: ಕೂಲಿ ಸಮಾಜಕ್ಕೆ ವಿಠಲ್ ಹೇರೂರು ಅವರು ಹಾಕಿಕೊಟ್ಟ ಮಾರ್ಗದರ್ಶನ ನಾವೂ ಎಲ್ಲಾರು ಪಾಲಿಸೋಣ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು.

ಪಟ್ಟಣದ ನಿಜ ಶರಣ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ವಿಠಲ ಹೇರೂರು ಅವರ ಪುಣ್ಯಸ್ಮರಣೆ ನಿಮಿತ್ಯ ಹೇರೂರು ಅವರ ಭಾವಚಿತ್ರಕ್ಕೆ ಪುಸ್ಪನಮನ ಸಲ್ಲಿಸಿ ಮಾತನಾಡಿದ ಅವರು ಸಂಘದಲ್ಲಿ ಹಿರಿಯ ಮಾರ್ಗದರ್ಶನ ವಿಲ್ಲದೆ ಯಾವುದೇ ರೀತಿಯ ಮನವಿ, ಪ್ರತಿಭಟನೆ ಯಾವುದು ಮಾಡಬೇಡಿ ಸಮಾಜದ ಪ್ರತಿಯೊಬ್ಬರ ಮಾರ್ಗದರ್ಶನ ತೆಗೆದುಕೊಳ್ಳಿ ಅದರ ಜೊತೆಗೆ ಸಂಘದ ಸಲಹ ಸಮಿತಿಯ ಮಾರ್ಗದರ್ಶನ ಕೂಡ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಬಸವರಾಜ ಚಿಮ್ಮನ್ನಳ್ಳಿ ಮಾತನಾಡಿ ವಿಠಲ್ ಹೇರೂರು ಅವರು ನಮ್ಮನ್ನು ಅಗಲಿ 
9 ವರ್ಷಗಳು ಆಗುತ್ತಿದ್ದು ಅವರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೆವೆ. ಒಂದು ವೇಳೆ ವೀಠಲ್ ಹೇರೂರ ಸಾಹೇಬರು ಇದ್ದರೆ ಕೂಲಿ ಸಮಾಜ ಎಸ್‌ಟಿ ಸೇರ್ಪಡೆ ಆಗುತ್ತಿತ್ತು ಎಂದು ಹೇಳಿದರು.

ಬಿಜೆಪಿ ಓಬಿಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ ಮಾತನಾಡಿ ಸಂಘಟನೆ ಎಂಬ ವಿಷಯ ಬಂದಾಗ ನಮಗೆ ವಿಠಲ್ ಹೇರೂರು ಹೆಸರು ನಮ್ಮ ಸಮಾಜದಲ್ಲಿ ನೆನಪು ಬರುತ್ತದೆ. ಆದರೆ ಇಂದು ಸಮಾಜದಲ್ಲಿ ಸಂಘಟನೆ ದಾರಿ ತಪ್ಪುತ್ತಿದೆ. ರಾಜಕೀಯ ಮಾಡಬೇಡಿ ಸಮಾಜದ ಹಿತದೃಷ್ಟಿ ಇರಲಿ, ಸಂಘಟನೆಗೆ ಒಂದು ದೃಢತೆ ಇರಲಿ, ಇಲ್ಲ ಅಂದ್ರೆ ಸಂಘಟನೆಗೆ ರಾಜೀನಾಮೆ ನೀಡಿ ಎಂದು ಸಮಾಜದ ಕುರಿತು ಕಳವಳ ವ್ಯಕ್ತಪಡಿಸಿ ಸಮಾಜದ ಏಳಿಗೆಗಾಗಿ ನಾವು ಪ್ರತಿಯೊಬ್ಬರು ಶ್ರಮಿಸೋಣ ಎಂದರು.

ಸಮಾಜದ ಯುವ ಘಟಕ ಅಧ್ಯಕ್ಷ ಗುಂಡು ಐನಾಪುರ ಮಾತನಾಡಿ ನಾವುಗಳು ಎಲ್ಲಾರೂ ಒಗ್ಗೂಡಿ ಒಂದಾಗಿ ಸಮಾಜದ ಅಭಿವೃದ್ಧಿ ಕಾಣೋಣ ಅದರ ಸಲುವಾಗಿ ವಿಠಲ ಹೇರೂರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ನಡೆಯೋಣ ಎಂದರು.

ತಾಲೂಕ ಅಧ್ಯಕ್ಷ ರಾಮಲಿಂಗ ಬಾನರ್,ಹಣಮಂತ ಸಂಕನೂರ,ಸುರೇಶ ಬೆನಕನಳ್ಳಿ, ಮಾತನಾಡಿದರು.

ಈ ಸಂದರ್ಭದಲ್ಲಿ  ದೇವಿಂದ್ರ ಅರಣಕಲ್, ಶರಣು ಡೋಣಗಾಂವ, ಭೀಮಣ್ಣ ಹೊತ್ತಿನಮಡಿ, ನಾಗೇಂದ್ರ, ಭೀಮು ಹೊಳಿಕಟ್ಟಿ, ಮಲ್ಲಪ್ಪ ಹೋನಪ್ಪನೂರು, ಕಾಶಿನಾಥ ದೇವರಮನಿ ಕದ್ದರ್ಗಿ, ಆನಂದ ಯರಗಲ್, ಗೋಳಿ ಇಟಗಾ, ಸೆರಿದಂತೆ ಇತರರು ಇದ್ದರು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.