ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ್ದು ಕುವೆಂಪು: ಮರತೂರ್
ಚಿತ್ತಾಪೂರ: ಕುವೆಂಪು ಅವರು ಮಾನವ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದರೆ ಎಂದು ಮಾಜಿ ಜಿಪಂ ಸದಸ್ಯ ಶಿವಾನಂದ ಪಾಟೀಲ ಮರತೂರ ಹೇಳಿದರು.
ಪಟ್ಟಣದ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್, ಹಾಗೂ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನಾಚರಣೆಯ ಅಂಗವಾಗಿ " ವಿಶ್ವ ಮಾನವ ದಿನಾಚರಣೆ" ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಸಿಗೆ ನೀರು ಎರೆದು,ಕುವೆಂಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಂಜೆವಾಣಿ ಪತ್ರಿಕೆಯ 2023ರ ಕ್ಯಾಲೆಂಡರ ಬಿಡುಗಡೆ ಮಾಡಿ ಮಾತನಾಡಿದ ಅವರು ಕುವೆಂಪು ಅವರು ಎಲ್ಲ ಪ್ರಕಾರದ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಮನುಜಮತ ವಿಶ್ವಪಥ ಎಂದು ಸಾರಿ ಮಾನವ ಸಮಾಜಕ್ಕೆ ಅನೇಕ ಸಂದೇಶ ನೀಡಿದ್ದಾರೆ. ಹಾಗಾಗಿ ಅವರನ್ನು ವಿಶ್ವಮಾನವ ಎಂದು ಹೇಳಲಾಗುತ್ತದೆ ಎಂದರು.
ಕುವೆಂಪು ಅವರು ನಾಡಿಗೆ ನಾಡ ಗೀತೆ, ರೈತ ಗೀತೆ ಹೇಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ
ಇಂದಿನ ವಿದ್ಯಾರ್ಥಿಗಳು ಅವರ ಕೃತಿಗಳನ್ನು ಓದಿ ಅರ್ಥಮಾಡಿಕೊಂಡು ಅವರ ವಿಚಾರಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕ ನಾಸಾಸಾಪ ಅಧ್ಯಕ್ಷ ಕಾಶಿನಾಥ ಗುತ್ತೇದಾರ್ ಮಾತನಾಡಿ ನಾಗಾವಿ ನಾಡಿನ ಸಾಹಿತ್ಯ, ಕಲೆ, ಸಂಸ್ಕೃತಿ, ಅಭಿವೃದ್ಧಿಯ ಸಲುವಾಗಿ ಈ ಸಂಘ ಹುಟ್ಟಿಕೊಂಡಿದೆ. ಅದರ ಜೊತೆಗೆ ನಮ್ಮ ಕ್ಷೇತ್ರದ ಇತಿಹಾಸ ಮೊದಲು ನಾವು ಅರಿಯಬೇಕು ಅದು ನಾವು ನಮ್ಮ ಕ್ಷೇತ್ರದ ಇತಿಹಾಸ ಬಿಟ್ಟು ಬೇರೆ ಜಿಲ್ಲೆಗಳ ಇತಿಹಾಸ ತಿಳಿಯಲು ಶೈಕ್ಷಣಿಕ ಪ್ರವಾಸ ಕೈಗೊಳ್ಳುವುದು ನೋಡಿದರೆ ತುಂಬಾ ಬೇಜಾರು ಆಗುತ್ತದೆ ಎಂದು ಕಳವಳ ವ್ಯಕ್ತಪಡಿಸಿ ಕಾಲೇಜಿನ ಪ್ರಾಂಶುಪಾಲರಲ್ಲಿ ಮನವಿ ಮಾಡಿ ಕಾಲೇಜಿನ ವಿದ್ಯಾರ್ಥಿಗಳನ್ನು ಎನ್ಎಸ್ಎಸ್ ಶಿಬಿರವನ್ನು ನಾಗಾವಿ ಯಲ್ಲಮ್ಮ ದೇವಸ್ಥಾನ ಹತ್ತಿರ ಹಾಕಿಕೊಂಡು ವಿದ್ಯಾರ್ಥಿಗಳಲ್ಲಿ ಈ ಭಾಗದ ಇತಿಹಾಸ ತಿಳಿಸಲು ಹೇಳಿದರು.
ಸಂಜೆವಾಣಿ ಕನ್ನಡ ದಿನ ಪತ್ರಿಕೆಯು ಪ್ರತಿ ವರ್ಷ ಬಿಡುಗಡೆ ಮಾಡುವ ಕ್ಯಾಲೆಂಡರನ್ನು ಈ ವರ್ಷ ಚಿತ್ತಾಪುರಿನ ನಾಗಾವಿ ನಾಡಿ ರಾಷ್ಟ್ರಕೂಟ ಕುಲ ದೇವತೆ ಶ್ರೀ ನಾಗಾವಿ ಯಲ್ಲಮ್ಮ ದೇವಿ ಭಾವಚಿತ್ರವಿರುವ 2023ರ ಹೊಸ ವರ್ಷದ ಕ್ಯಾಲೆಂಡರನ್ನು ಗಣ್ಯರು ಬಿಡುಗಡೆ ಮಾಡಿದರು.
ಸಾ.ಶಿ.ಇ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಡಾ. ವಿಜಯಕುಮಾರ ಹಂಚನಾಳ, ಕಾಲೇಜಿನ ಪ್ರಾಂಶುಪಾಲರಾದ ಶಿವಶರಣಪ್ಪ ಬಿರಾದಾರ್, ಚಲನಚಿತ್ರ ನಿರ್ದೇಶಕರಾದ ಅಯ್ಯಪ್ಪ ರಾಮತೀರ್ಥ, ಮಾತನಾಡಿದರು. ಪ್ರಗತಿಪರ ರೈತರಾದ ರವೀಂದ್ರ ಸಜ್ಜನಶೆಟ್ಟಿ, ಕನ್ನಡ ಉಪನ್ಯಾಸಕರಾದ ಬಿ.ಕೆ ಪಂಡಿತ್ ಮೇದಿಕೆ ಮೇಲಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕ ವೃಂದದವರಾದ ಡಾ. ಎಂ.ಎಂ ಮೇತ್ರಿ, ಡಾ. ಸಾವಿತ್ರಿ ಕುಲಕರ್ಣಿ, ಡಾ.ಮಲ್ಲಪ್ಪ ಮಾನೆಗಾರ್, ಡಾ.ಭಾಗ್ಯಲಕ್ಷ್ಮೀ ರಡ್ಡಿ, ಡಾ. ಶರಣಬಸಪ್ಪ ರಾಯಕೊಟ್ಟಿ, ಡಾ. ಶ್ರಾವಣ ಕಾಂಬಳೆ, ಡಾ. ಪರೀವಿನಾ ಪಾತೀಮಾ, ಡಾ. ನುಜಾತ್ ಪರೀವಿನ್, ಡಾ.ರವಿ ಬೀಳಾರ್, ನಬೀಸಾಬ್, ಶಿವಲಿಂಗಪ್ಪ ಕಂಬಾರ, ವಿರೇಂದ್ರ, ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಸದಸ್ಯರಾದ ಎಂ.ಡಿ ಮಶಾಕ್, ಸಂಜೆವಾಣಿ ಪತ್ರಕರ್ತರು ಜಗದೇವ ಕುಂಬಾರ, ಯಲ್ಲಯ್ಯ ಕಲಾಲ್, ಸ್ವಾಗತ ಗೀತೆ ಮೌನೇಶ ಪಂಚಾಳ, ನಿರೂಪಣೆ, ವೀರಸಂಗಪ್ಪ ಸುಲೇಗಾಂವ, ಸ್ವಾಗತ ಭಾಷಣ, ವೀರೇಶ ಕರದಾಳ, ವಂದನಾರ್ಪಣೆ, ಪ್ರದೀಪ ಕುಲಕರ್ಣಿ ಮಾಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ