ಭುಟ್ಟೊ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ.
ಚಿತ್ತಾಪೂರ: ಪ್ರಧಾನಿ ನರೇಂದ್ರ ಮೋದಿಯವರು "ಗುಜರಾತ್ ನ ಕಟುಕ" ಎಂದು ಅವಹೇಳನಕಾರಿ ಹೇಳಿಕೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ವಿರುದ್ಧ ಬಿಜೆಪಿ ಯುವ ಘಟಕ ನೇತೃತ್ವದಲ್ಲಿ ಗುರುವಾರ ಪಟ್ಟಣದ ಲಾಡ್ಜೀಂಗ್ ಕ್ರಾಸ್ ನಲ್ಲಿ ಪ್ರತಿಭಟನೆ ನಡೆಸಿ ಭುಟ್ಟೊ ಅವರ ಪ್ರತಿಕೃತಿಗೆ ಬೂಟ್ ಗಾಲಿನಿಂದ ಒದ್ದು ಪ್ರಕೃತಿ ದಹಿಸಿ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅರಣುಕುಮಾರ್ ಯಾಗಪೂರ ಮಾತನಾಡಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂ ಧರ್ಮವನ್ನು ರಕ್ಷಿಸುತ್ತಿದ್ದಾರೆ. ಇದನ್ನು ಅರಗಿಸಿಕೊಳ್ಳಲು ಆಗದ ಪಾಕಿಸ್ತಾನ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸುರೇಶ ಬೆನಕನಹಳ್ಳಿ, ಮಹ್ಮದ ಯುನುಸ್ ಪ್ರತಿಭಟನೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಓಬಿಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ, ಬಿಜೆಪಿ ಕಾರ್ಯದರ್ಶಿ ರಾಮದಾಸ ಚವ್ಹಾಣ್, ನಗರ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ಪ್ರಸಾದ್ ಅವಾಂಟಿ, ಕಾರ್ಮಿಕ ಬಂಡಿ, ಅಕ್ಷಯ ಚಕಡಿ, ಹನುಮಾನ, ಯಮುನಪ್ಪ,ದೇವರಾಜ ತಳವಾರ, ಧನರಾಜ್ ರಾಠೋಡ್, ಶಂಕರ ಜಾಪೂರ,ರಾಜು ಹೊನಗುಂಟಾ,ಮಂಜು ಹೆಬ್ಬಾಳ, ಸಾಗರ, ಗುಂಡು, ಕಾಶಿ, ಅಂಬರೀಶ, ವೀರೇಶ ರಾವೂರ, ಸೇರಿದಂತೆ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ