ನ್ಯಾ.ಬಿ.ಆರ್ ಗವಾಯಿ ಮೇಲೆ ಶೂ ಎಸೆತಕ್ಕೆ ಖಂಡನೆ
ಚಿತ್ತಾಪುರ : ರಾಷ್ಟ್ರದ ಸರ್ವೋಚ್ಛ ನ್ಯಾಯಾಲಯದ ಘನತೆವೆತ್ತ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಅವರನ್ನು ಅಪಮಾನಿಸಲು ಶೂ ಎಸೆಯಲು ಯತ್ನಿಸಿರುವ ಘಟನೆ ಅತ್ಯಂತ ಖಂಡನೀಯ ಎಂದು ಬೌದ್ಧ ಮಹಾಸಭಾ ತಾಲೂಕಾಧ್ಯಕ್ಷ ಜಗನ್ನಾಥ ಮುಡಬೂಳಕರ್ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ಈ ಸಂವಿಧಾನದ ಘಟನೆ ಸಾರ್ವಭೌಮತ್ವವನ್ನು ಅಪಮಾನಿಸಲು ಯತ್ನಿಸಿದ ನೀಚ ಹಾಗೂ ಅನಾಗರೀಕ ವರ್ತನೆಯಾಗಿದ್ದು, ಕೃತ್ಯ ಎಸಗಿದ ವಕೀಲನ ವರ್ತನೆ ಯಾರೂ ಕ್ಷಮಿಸಲಾರದ ದುಷ್ಕೃತ್ಯವಾಗಿದೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಮಾನಿಸುವ ಹಾಗೂ ಅಗೌರವ ತೋರುವ ವರ್ತನೆ ಹಾಗೂ ಕೃತ್ಯಗಳು ವಿದ್ರೋಹಿತನದ ಪರಮಾವಧಿಯಾಗಿದೆ. ದೇಶದ ಕಾನೂನಿನ ಅನ್ವಯ ಪೊಲೀಸರು ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ