ಅಪ್ಪು 50ನೇ ಹುಟ್ಟುಹಬ್ಬ ಆಚರಣೆ.
ಚಿತ್ತಾಪುರ: ನಟ ದಿವಂಗತ ಪುನೀತ್ ರಾಜ್ ಕುಮಾರ್ ಅವರ 50ನೇ ಹುಟ್ಟು ಹಬ್ಬವನ್ನು ಅಪ್ಪು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ಲಾಡ್ಡಿಂಗ್ ಕ್ರಾಸ್ ಹತ್ತಿರ ಕರ್ನಾಟಕ ರಾಜ್ಯ ಭೋವಿ ವಡ್ಡರ ಮಹಾಸಭಾ ತಾಲೂಕ ಅಧ್ಯಕ್ಷ ವೆಂಕಟೇಶ್ ಹರವಾಳ ನೇತೃತ್ವದಲ್ಲಿ ಅಪ್ಪು ಅಭಿಮಾನಿಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಜನ್ಮ ದಿನದ ಸಮಾರಂಭದಲ್ಲಿ ಕಲಾವಿದ ಬಾಬು ಕಾಶಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲೇ ಬಾಲ ನಟನಾಗಿ ಅಭಿನಯಿಸಿ ನಂತರ ನಾಯಕ ನಟನಾಗಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಹ ಸಿನೇಮಾ ಮಾಡಿದ ಪುನೀತ್ ರಾಜಕುಮಾರ್ ಅವರು ಚಿತ್ರರಂಗಕ್ಕೆ ಸಲ್ಲಿಸಿದ ಸೇವೆ ಅಮೋಘವಾಗಿದೆ ಹಾಗೂ ಎಲೆಮರೆ ಕಾಯಿಯಂತೆ ಸಲ್ಲಿಸಿದ ಸಮಾಜ ಸೇವೆ ಮೆಚ್ಚುವಂಥದ್ದು ಇಂತಹ ಅಪರೂಪದ ಚಿತ್ರನಟ ಪುನೀತ್ ರಾಜಕುಮಾರ್ ಅವರ ಹೆಸರನ್ನು ಪಟ್ಟಣದ ಲಾಡ್ಡಿಂಗ್ ಕ್ರಾಸ್ ಗೆ ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್ ಕೇಕ್ ಕತ್ತರಿಸಿದರು. ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ, ಪುರಸಭೆ ಸದಸ್ಯ ವಿನೋದ ಗುತ್ತೇದಾರ, ರವಿ ವಿಟ್ಕರ್, ರಮೇಶ ಬೋಸಗಿ, ಬಾಬು ಜೆಸಿಬಿ, ತಿಮ್ಮಯ್ಯ ಪವಾರ್, ರಾಜೇಶ್ ಕಾಶಿ, ರಾಮು ಹರವಾಳ, ವಿಠಲ್ ಕಟ್ಟಿಮನಿ, ರವಿ ಇವಣಿ, ಕಾಶಿನಾಥ ಗುತ್ತೇದಾರ, ಆನಂದ್ ಗುತ್ತೇದಾರ, ನಾಗು ಕಲ್ಲಕ್, ಮಧುಸೂದನ್ ಕಾಶಿ, ಚಂದ್ರಶೇಖರ್ ಬಿಎಸ್‌ಎನ್‌ಎಲ್, ವೆಂಕಟೇಶ್ ಕಲಬುರಗಿಕರ್ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ದತ್ತು ಜಾನೆ, ಮಂಜುನಾಥ್ ಕಾಶಿ, ಅಂಕುಶ್ ಕಾಶಿ, ಕಾಶಿ ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ