ಚಿತ್ತಾಪುರ: "ಪತ್ರಕರ್ತರು ಅಪ್ರಾಮಾಣಿಕರಾದರೆ ಸಮಾಜದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ" ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ 'ದಿ. ನಾಗಯ್ಯ ಸ್ವಾಮಿ ಅಲ್ಲೂರ ಗೆಳೆಯರ ಬಳಗ' ಆಯೋಜಿಸಿದ್ದ 'ನಾಗಾವಿ ನಕ್ಷತ್ರ' ಸಂಸ್ಮರಣ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು ನಾಗಯ್ಯ ಸ್ವಾಮಿ ಅಲ್ಲೂರ ಅವರ ವ್ಯಕ್ತಿತ್ವಕ್ಕೆ ಶ್ಲಾಘನೆ
ದಿ. ನಾಗಯ್ಯ ಸ್ವಾಮಿ ಅವರ ಪ್ರಾಮಾಣಿಕತೆಯನ್ನು ಸ್ಮರಿಸಿದರು.
ನಿಷ್ಠಾವಂತ ಬರಹಗಾರ: ನಾಗಯ್ಯ ಸ್ವಾಮಿ ಅವರು ಕೇವಲ ಪತ್ರಿಕಾರಂಗಕ್ಕೆ ಸೀಮಿತವಾಗದೆ ಸಾಂಸ್ಕೃತಿಕ ಮತ್ತು ಸಾಹಿತ್ಯ ಲೋಕದಲ್ಲಿ ನಿಷ್ಠಾವಂತ ಬರಹಗಾರರಾಗಿ ಗುರುತಿಸಿಕೊಂಡಿದ್ದರು.
ಸಮಾಜಮುಖಿ ಚಿಂತಕ: ಜನರಿಗಾಗಿ ಮತ್ತು ಮಕ್ಕಳಿಗಾಗಿ ಅವರು ಮಾಡಿದ ಸೇವೆ ಅವರನ್ನು ಒಬ್ಬ ಶಿಕ್ಷಣ ಪ್ರೇಮಿಯನ್ನಾಗಿ ರೂಪಿಸಿತ್ತು.
ಪ್ರಾಮಾಣಿಕತೆಯ ಮಾದರಿ: ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದಾಗ ಸಾಹಿತ್ಯ ಸಮ್ಮೇಳನದ ಪ್ರತಿಯೊಂದು ಖರ್ಚು-ವೆಚ್ಚದ ವಿವರವನ್ನು ನಿಖರವಾಗಿ ನೀಡುವ ಮೂಲಕ ತಮ್ಮ ನಿಷ್ಠೆಯನ್ನು ಮೆರೆದಿದ್ದರು.
ಕುಟುಂಬಕ್ಕೆ ಭರವಸೆ ಮತ್ತು ಆರ್ಥಿಕ ನೆರವು
ನಾಗಯ್ಯ ಸ್ವಾಮಿ ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿದ ಸಚಿವರು, ವೇದಿಕೆಯಲ್ಲಿದ್ದ ಅವರ ಕುಟುಂಬದವರಿಗೆ ಧೈರ್ಯ ತುಂಬಿದರು.
ವೈಯಕ್ತಿಕ ನೆರವು: ಗೆಳೆಯರ ಬಳಗ ಮಾತ್ರವಲ್ಲದೆ, ವೈಯಕ್ತಿಕವಾಗಿಯೂ ತಾವು ಕುಟುಂಬಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಗ್ರಂಥಾಲಯಗಳಿಗೆ ಪುಸ್ತಕ ಖರೀದಿ: ಕಾಂಗ್ರೆಸ್ ಮುಖಂಡ ನಾಗರೆಡ್ಡಿ ಪಾಟೀಲ ಕರದಳ್ಳಿ ಅವರ ಮನವಿಯಂತೆ, 'ನಾಗಾವಿ ನಕ್ಷತ್ರ' ಸಂಸ್ಮರಣ ಗ್ರಂಥವನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯ ವ್ಯಾಪ್ತಿಯ ಎಲ್ಲಾ ಗ್ರಂಥಾಲಯಗಳಿಗೆ ಖರೀದಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಧನಸಹಾಯ: ಇದೇ ಸಂದರ್ಭದಲ್ಲಿ ಗೆಳೆಯರ ಬಳಗದಿಂದ ಸಂಗ್ರಹಿಸಲಾದ 1.90 ಲಕ್ಷ ರೂ. ಮೊತ್ತದ ಚೆಕ್ ಅನ್ನು ಸಚಿವರು ಕುಟುಂಬದವರಿಗೆ ಹಸ್ತಾಂತರಿಸಿದರು.
"ನಾಗಯ್ಯ ಸ್ವಾಮಿ ಅವರು ನಿಜವಾದ ಅರ್ಥದಲ್ಲಿ ನಕ್ಷತ್ರವಾಗಿದ್ದರು. ಅವರನ್ನು ಅನುಸರಿಸುವವರು ಕೂಡ ಅವರಂತೆಯೇ ಹೊಳೆಯುತ್ತಾರೆ," ಎಂದು ಸಚಿವರು ಕೊಂಡಾಡಿದರು.
ಈ ಸಂದರ್ಭದಲ್ಲಿ ಪೂಜ್ಯಶ್ರೀ ಅಭಿನವ ಮುನೀಂದ್ರ ಶಿವಾಚಾರ್ಯರು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ, ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳೊಂಡಿಗಿ,ನಾಗರೆಡ್ಡಿ ಪಾಟೀಲ್, ಲಿಂಗಾರೆಡ್ಡಿ ಗೌಡ ಭಾಸರೆಡ್ಡಿ, ಭೀಮಣ್ಣ ಸಾಲಿ, ವೀರಭದ್ರ ಗುರಮಿಟಕಲ್, ವೀರೇಂದ್ರ ಕೊಲ್ಲೂರ್, ಲಿಂಗಪ್ಪ ಮಲ್ಕನ್, ಭವಾನಿ ಸಿಂಗ್ ಠಾಕೂರ್, ಶಿವಾನಂದ ನಾಲವಾರ ನರಸಪ್ಪ ಚಿನ್ನಕಟ್ಟಿ, ಕಾಶಿರಾಯ ಕಲಾಲ್, ಸಂಗಮೇಶ್ ರೋಣದ, ಮಲ್ಲಿಕಾರ್ಜುನ್ ಕಾಳಗಿ, ಜಗನಗೌಡ ಪಾಟೀಲ್, ಶೇಖರ್ ಕಾಶಿ, ಮಲ್ಲಿಕಾರ್ಜುನ್ ಬೆಣ್ಣೂರಕರ್, ನಾಗಯ್ಯ ಗುತ್ತೇದಾರ್, ವೀರಸಂಗಪ್ಪ ಸುಲೇಗಾವ್, ರಾಮಲಿಂಗ ಬಾನರ್, ಬಸವರಾಜ್ ಚಿನ್ಮಳಿ, ಮಲ್ಲಿಕಾರ್ಜುನ್ ಎಮ್ಮೆನೂರ್, ಶರಣು ಡೋಣಗಾಂವ್, ಸೇರಿದಂತೆ ಇತರರು ಇದ್ದರು.