ಮಂಗಳವಾರ, ಜನವರಿ 27, 2026

ಕ್ರಿಕೆಟ್ ಎಲ್ಲರಿಗೂ ಅಚ್ಚುಮೆಚ್ಚಿನ ಕ್ರೀಡೆ: ಮತ್ತಿಮುಡು.

ಚಿತ್ತಾಪುರ: ಹಲವು ಕ್ರೀಡೆಗಳಲ್ಲಿಯೇ ಕ್ರಿಕೆಟ್ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಅಚ್ಚುಮೆಚ್ಚಿನ ಕ್ರೀಡೆ ಎಂದು ತಾಲೂಕು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಗುಂಡು ಮತ್ತಿಮುಡು ಹೇಳಿದರು.

ತಾಲೂಕಿನ ಕಾಟಮ್ಮದೇವರಹಳ್ಳಿ ಗ್ರಾಮದಲ್ಲಿ ಶ್ರೀ ರೇಣುಕಾ ಪರಮೇಶ್ವರಿ (ಯಲ್ಲಮ್ಮತಾಯಿ) 74ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಕ್ರಿಕೆಟ್‌ ಪಂದ್ಯಾವಳಿಯ ಅಂತಿಮ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡಾ ಮೈದಾನ ಕೊರತೆ ಇದ್ದರೂ ಗ್ರಾಮೀಣ ಭಾಗದಲ್ಲಿ ಕ್ರೀಡಾಪಟುಗಳಿಗೆ ಕೊರತೆ ಇಲ್ಲ. ಪ್ರತಿಭೆಗಳು ಹಳ್ಳಿಯಿಂದಲೇ ಹೊರಬರುತ್ತವೆ ಹೀಗಾಗಿ ಯಾರೂ ಹಿಂಜರಿಯಬಾರದು ಆತ್ಮವಿಶ್ವಾಸದಿಂದಲೇ ಭಾಗವಹಿಸಬೇಕು ಎಂದು ಹೇಳಿದರು.

ಯುವ ಮುಖಂಡ ಮದನ್ ಯಾಗಾಪೂರ ಮಾತನಾಡಿ, ಯಾವುದೇ ಕ್ರೀಡೆಯಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ ಆದರೆ ಇಲ್ಲಿ ಭಾಗವಹಿಸುವುದು ಮುಖ್ಯ. ಗೆದ್ದವರು ಹಿಗ್ಗಬಾರದು, ಸೋತವರು ಕುಗ್ಗಬಾರದು ಎಂದು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ, ಬಿಜೆಪಿ ಯುವ ಅಧ್ಯಕ್ಷ ದೇವರಾಜ್‌ ತಳವಾರ,ಪತ್ರಕರ್ತರಾದ ಕಾಶಿನಾಥ ಗುತ್ತೇದಾರ ರವಿಶಂಕರ್ ಬುರ್ಲಿ, ಗ್ರಾಪಂ ಸದಸ್ಯರಾದ ಕೆಂಚಪ್ಪ ಪೂಜಾರಿ, ದೇವಣ್ಣ ಹಳ್ಳಿ, ಶರಣು ಜಿಡಗಿ, ಶ್ರೀನಿವಾಸ ಯಾಗಾಪೂರ, ಅರುಣಕುಮಾರ ಯಾಗಾಪೂರ, ಮೋನು ಚವ್ಹಾಣ, ಶರಣು ಬುಸ್ಸಾ, ಬಸವರಾಜ ಸಂಗಾವಿ ಸೇರಿದಂತೆ ಇತರರು ಇದ್ದರು. ರಾಮು ಭೋವಿ ನಿರೂಪಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪಿಂಚಣಿ ಕಾಯ್ದೆ 2025 ರದ್ದತಿಗೆ ಆಗ್ರಹಿಸಿ ಪ್ರಧಾನಿಗೆ ಮನವಿ.

ಚಿತ್ತಾಪುರ: ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದಿರುವ '2025ರ ಊರ್ಜಿತಗೊಳಿಸುವಿಕೆ ಕಾಯ್ದೆ ಪಿಂಚಣಿದಾರರ ನಡುವೆ ತಾರತಮ್ಯ ಉಂಟು ಮಾಡುತ್ತಿದ್ದ...