ಭಾಗೋಡಿ ಸುಕ್ಷೇತ್ರದಲ್ಲಿ 5 ದಿನಗಳ ಹಜರತ್ ಅಲಿ ಅಬ್ಬಾಸ್ ದರ್ಗಾ ರಾವೂರ್ ಅನುಷ್ಠಾನ ಕಾರ್ಯಕ್ರಮ

ಚಿತ್ತಾಪುರ: ತಾಲೂಕಿನ ಸುಕ್ಷೇತ್ರ ಬಾಗೋಡಿಯಲ್ಲಿ ಅಲ್ಲಾಹನ ಕೃಪೆಯಿಂದ ಶ್ರೀ ಪರಶುರಾಮ ಮುತ್ಯಾ (ಹಜರತ್ ಬಾರಾಹಿಮಾಮ್ ಪೀಠಾಧಿಪತಿಗಳು) ಅವರ ನೇತೃತ್ವದಲ್ಲಿ ಹಜರತ್ ಅಲಿ ಅಬ್ಬಾಸ್ ದರ್ಗಾ ರಾವೂರ್ ಇದರ ಐದು ದಿನಗಳ ಕಾಲ ವಿಶೇಷ ಅನುಷ್ಠಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

 ಭಾಗೋಡಿ ಸುಕ್ಷೇತ್ರದಲ್ಲಿ ದಿನಾಂಕ 11-06-2026 ರಿಂದ 15-06-2026 ರವರೆಗೆ ಈ ಧಾರ್ಮಿಕ ಮತ್ತು ಆಧ್ಯಾತ್ಮಿಕ ಅನುಷ್ಠಾನ ಜರುಗಲಿದೆ. ಹಿಂದು-ಮುಸ್ಲಿಂ ಭಾವೈಕ್ಯತೆಯ ಪ್ರತೀಕದಂತಿರುವ ಈ ಕಾರ್ಯಕ್ರಮದಲ್ಲಿ ಶ್ರೀ ಪರಶುರಾಮ ಮುತ್ಯಾ ಅವರು ಐದು ದಿನಗಳ ಕಾಲ ಕಠಿಣ ಅನುಷ್ಠಾನದಲ್ಲಿ ಪಾಲ್ಗೊಳ್ಳಲಿದ್ದಾರೆ.

"ಅಲ್ಲಾಹನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ" ಎಂದು ಕೋರಿರುವ ಪೀಠಾಧಿಪತಿಗಳು, ಈ ಐದು ದಿನಗಳ ಪವಿತ್ರ ಅನುಷ್ಠಾನದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಶ್ರೀಗಳ ದರ್ಶನ ಪಡೆದು ಪುನೀತರಾಗಬೇಕಾಗಿ ಪ್ರಕಟಣೆಯಲ್ಲಿ ಕೋರಲಾಗಿದೆ.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم