ರೈತರಿಗೆ ಉಚಿತ ತೊಗರಿ ಬಿತ್ತನೆ ಬೀಜಗಳ (ಮಿನಿಕಿಟ್ಸ್) ವಿತರಣೆ.

ಚಿತ್ತಾಪುರ: ತಾಲೂಕಿನ ಗುಂಡಗುರ್ತಿ ಹೋಬಳಿಯ ಗುಂಡಗುರ್ತಿ ಗ್ರಾಮದಲ್ಲಿ 2026-27ನೇ ಸಾಲಿನ ದ್ವಿದಳ ಧಾನ್ಯಗಳ 'ಆತ್ಮನಿರ್ಭರ ಪಲ್ಸ್ ಅಭಿಯಾನ ಯೋಜನೆ' ಅಡಿಯಲ್ಲಿ ರೈತರಿಗೆ ಉಚಿತವಾಗಿ ತೊಗರಿ ಬಿತ್ತನೆ ಬೀಜಗಳ (ಮಿನಿಕಿಟ್ಸ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ರಾಜ್ಯ ಅಪೆಕ್ಸ್ ಬ್ಯಾಂಕ್ ಬೆಂಗಳೂರು ಇದರ ನಿರ್ದೇಶಕರಾದ ಸುನಿಲ ದೊಡ್ಡಮನಿ ಅವರು ವಿತರಣೆ ಮಾಡಿ ಮಾತನಾಡಿದ ಅವರು ರೈತರಿಗೆ ಸಾಂಕೇತಿಕವಾಗಿ ತೊಗರಿ ಬಿಜಗಳ (ಮಿನಿಕಿಟ್ಸ್) ವಿತರಿಸಿ ಮಾತನಾಡಿದ ಅವರು, "ರೈತರು ಕೃಷಿ ಇಲಾಖೆಯ ಈ ಸದರಿ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು" ಎಂದು ಕರೆ ನೀಡಿದರು.

ಕಾರ್ಯಕ್ರಮದ ಕುರಿತು ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕರಾದ ಸಂಜೀವ ಕುಮಾರ ಮಾನಕರ್, "ಈ ಯೋಜನೆಯು ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸುವ ಹಾಗೂ ಈ ಕ್ಷೇತ್ರದಲ್ಲಿ ರಾಜ್ಯವನ್ನು ಸ್ವಾವಲಂಬಿಯನ್ನಾಗಿ ಮಾಡುವ ಮುಖ್ಯ ಉದ್ದೇಶವನ್ನು ಹೊಂದಿದೆ. ನಮ್ಮ ತಾಲೂಕಿನಲ್ಲಿ ಈ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ" ಎಂದು ರೈತರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಬಸವರಾಜ ಹೊಸಳ್ಳಿ, ತಾಲೂಕಾ ಕೃಷಿಕ ಸಮಾಜ ಚಿತ್ತಾಪುರದ ಸದಸ್ಯರಾದ ಮಲ್ಲಿಕಾರ್ಜುನ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ ಬೆಳ್ಳಕ್ಕಿ ಮತ್ತು ಸುನಿಲ ಅಮ್ಮಗೋಳ ಉಪಸ್ಥಿತರಿದ್ದರು.

ಇವರೊಂದಿಗೆ ತಾಲೂಕಾ ನೋಡಲ್ ಅಧಿಕಾರಿಯಾದ ಜುಲ್ಫಿಕರ್ ಅಹಮದ್, ಕಲ್ಬುರ್ಗಿ ಜೈವಿಕ ಪೀಡನಾಶಕ ಪ್ರಯೋಗಾಲಯದ ಉಪ ಕೃಷಿ ನಿರ್ದೇಶಕರು, ಕೃಷಿ ಅಧಿಕಾರಿಗಳಾದ ಅಬ್ದುಲ ಕರೀಂ, ಸುರೇಖಾ ಹಾಗೂ ಪ್ರಮುಖರಾದ ವಿಶ್ವಾರಾಧ್ಯ, ಕಲ್ಯಾಣಿ, ವಿರುಪಾಕ್ಷಿ, ಬಸವರಾಜ, ಶರಣಮ್ಮ, ಕನ್ಯಾಕುಮಾರಿ, ಲಕ್ಷ್ಮಿ ಮತ್ತು ಗ್ರಾಮದ ನೂರಾರು ರೈತರು ಭಾಗವಹಿಸಿದ್ದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು