ಸಮಾನ ಮನಸ್ಕ ಯುವಕರಿಂದ ೬೦ಕಂಬದ ಗುಡಿಯ ಆವರಣ ಸ್ವಚ್ಛತೆ.

ಚಿತ್ತಾಪುರ: ಐತಿಹಾಸಿಕ ಮತ್ತು ಧಾರ್ಮಿಕ ಹಿನ್ನೆಲೆಯುಳ್ಳ ಪಟ್ಟಣದ ನಾಗಾವಿಯ ಪ್ರಸಿದ್ಧ "೬೦ ಕಂಬದ ಬ್ರಹ್ಮ ವಿಷ್ಣು ಮಹೇಶ್ವರ" ದೇವಸ್ಥಾನದ ಆವರಣವನ್ನು ಇಂದು ಬೆಳಗಿನ ಜಾವ ಸಮಾನ ಮನಸ್ಕ ಯುವಕರ ತಂಡವು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿತು.

ದೇವಸ್ಥಾನದ ಸುತ್ತಮುತ್ತಲು ಕಸ-ಕಡ್ಡಿ ಹಾಗೂ ಗಿಡಗಂಟಿಗಳು ಬೆಳೆದು ಸಾರ್ವಜನಿಕರಿಗೆ ಮತ್ತು ಭಕ್ತಾದಿಗಳಿಗೆ ಓಡಾಡಲು ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯ ಸಮಾನ ಮನಸ್ಕ ಯುವಕರು ಸ್ವಯಂಪ್ರೇರಿತರಾಗಿ ಒಟ್ಟಗೂಡಿ, ಇಂದು ಮುಂಜಾನೆಯೇ ದೇವಸ್ಥಾನದ ಆವರಣದಲ್ಲಿದ್ದ ಕಸ, ಪ್ಲಾಸ್ಟಿಕ್ ಹಾಗೂ ಮುಳ್ಳಿನ ಗಿಡಗಳನ್ನು ತೆರವುಗೊಳಿಸುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು.

ಯುವಕರ ಈ ಪರಿಸರ ಕಾಳಜಿಯ ಸತ್ಕಾರ್ಯಕ್ಕೆ ಸ್ಥಳೀಯ ಪುರಸಭೆಯು ಸಹ ಕೈಜೋಡಿಸಿ, ಕಸ ವಿಲೇವಾರಿ ಮಾಡಲು ಅಗತ್ಯ ಸಹಕಾರವನ್ನು ನೀಡುವ ಮೂಲಕ ಯುವಕರ ತಂಡಕ್ಕೆ ಬೆಂಬಲ ಸೂಚಿಸಿತು.

ಐತಿಹಾಸಿಕ ಸ್ಮಾರಕಗಳು ಹಾಗೂ ದೇವಸ್ಥಾನಗಳ ಆವರಣವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಯುವಕರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಹಾಗೂ ಭಕ್ತಾದಿಗಳಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಈ ಸ್ವಚ್ಛತಾ ಕಾರ್ಯದಲ್ಲಿ ಗ್ರಾಮದ ಪ್ರಮುಖರು ಹಾಗೂ ಸಮಾನ ಮನಸ್ಕ ಯುವಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم